ನ್ಯುಮೋನಿಯಾ ಕೊರೊನಾಗಿಂತಲೂ ಅಪಾಯಕಾರಿ: ಚೀನಾ ವರದಿ ತಳ್ಳಿ ಹಾಕಿದ ಕಜಕಿಸ್ತಾನ
ಶಾಂಘೈ, ಜುಲೈ 10: ನ್ಯುಮೋನಿಯಾ ಕೊರೊನಾವೈರಸ್‌ಗಿಂತಲೂ ಹೆಚ್ಚು ಅಪಾಯಕಾರಿ ಎನ್ನುವ ಚೀನಾ ವರದಿಯನ್ನು ಕಜಕಿಸ್ತಾನ ತಳ್ಳಿ ಹಾಕಿದೆ.
Recommended Video
ಜೂನ್ ಮಧ್ಯವಾರದಿಂದ ಕಜಾಖ್‌ನ ಅತಿರಾ, ಅಕ್ಟೋಬ್ ಹಾಗೂ ಶಿಮ್‌ಕೆಂಟ್ ಪ್ರದೇಶದಲ್ಲಿ ನ್ಯುಮೋನಿಯಾ ವಿಪರೀತವಾಗಿ ಹೆಚ್ಚಾಗಿದೆ ಇದು ಕೊರೊನಾ ವೈರಸ್‌ಗಿಂತಲೂ ಹೆಚ್ಚು ಅಪಾಯಕಾರಿ ಎಂದು ಚೀನಾ ವರದಿ ನೀಡಿತ್ತು.
ಈ ಕುರಿತು ಕಜಕಿಸ್ತಾನ ಪ್ರತಿಕ್ರಿಯೆ ನೀಡಿದ್ದು, ಚೀನಾ ನೀಡಿರುವ ವರದಿ ಶುದ್ಧ ಸುಳ್ಳು ಎಂದು ಹೇಳಿದೆ.ಕಜಕಿಸ್ತಾನ ದಲ್ಲಿ ಕೊರೊನಾ ಸೋಂಕು 55 ಸಾವಿರದ ಗಡಿ ದಾಟಿದೆ, ಹೀಗಾಗಿ ಎರಡನೇ ಬಾರಿಗೆ ಲಾಕ್‌ಡೌನ್ ಮಾಡಲಾಗಿದೆ. ಗುರುವಾರ ಒಂದೇ ದಿನ 1962 ಪ್ರಕರಣಗಳು ದಾಖಲಾಗಿದ್ದವು. ಒಟ್ಟು 264 ಮಂದಿ ಸಾವನ್ನಪ್ಪಿದ್ದಾರೆ.

2019ಕ್ಕೆ ಹೋಲಿಸಿದರೆ ಜೂನ್ ತಿಂಗಳಿನಲ್ಲಿ ಶೇ.2.2ರಷ್ಟು ಸೋಂಕಿತ ಪ್ರಕರಣಗಳು ಹೆಚ್ಚಳವಾಗಿವೆ. ನ್ಯುಮೋನಿಯಾದಿಂದ 1772 ಮಂದಿ ವರ್ಷದ ಆರಂಭದಲ್ಲಿ ಮೃತಪಟ್ಟಿದ್ದಾರೆ. 628 ಮಂದಿ ಜೂನ್‌ನಲ್ಲಿ ಸಾವನ್ನಪ್ಪಿದ್ದಾರೆ ಎಂದು ಚೀನಾ ವರದಿಯಲ್ಲಿ ಉಲ್ಲೇಖಿಸಿದೆ. ಕೊರೊನಾವೈರಸ್‌ನಿಂದ ಮೃತಪಟ್ಟವರಿಗಿಂತಲೂ ನ್ಯೂಮೋನಿಯಾದಿಂದ ಸಾವನ್ನಪ್ಪಿರುವವರ ಸಂಖ್ಯೆಯೇ ಹೆಚ್ಚಿದೆ.












Click it and Unblock the Notifications