ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕದಲ್ಲಿ ಮೋದಿ ಸಾರ್ವಜನಿಕ ಸಭೆ - ವಿಡಿಯೋ

By Mahesh
|
Google Oneindia Kannada News

ನ್ಯೂಯಾರ್ಕ್, ಸೆ.28: ಮ್ಯಾನ್‌ಹಟನ್‌ನಲ್ಲಿರುವ ಮ್ಯಾಡಿಸನ್‌ ಸ್ಕ್ವೇರ್‌ ಗಾರ್ಡನ್‌ನಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಸುಮಾರು 20,000 ಮಂದಿ ಭಾರತೀಯ ಅಮೆರಿಕನರನ್ನು ಉದ್ದೇಶಿಸಿ ಐತಿಹಾಸಿಕ ಭಾಷಣ ಮಾಡಲಿದ್ದಾರೆ. ಸೆ. 28ರಂದು ಮೋದಿ ಮಾಡಲಿರುವ ಭಾಷಣವನ್ನು ಟೈಮ್ಸ್‌ ಚೌಕದಲ್ಲಿನ ಬೃಹತ್‌ ಪರದೆಯ ಮೂಲಕ ನೇರಪ್ರಸಾರ ಮಾಡಲಾಗುತ್ತಿದೆ.

ನ್ಯೂಯಾರ್ಕ್‌ ನಗರದ ಕೇಂದ್ರ ಭಾಗ ಎನಿಸಿರುವ ಟೈಮ್ಸ್ ಚೌಕದಲ್ಲಿ ಬೃಹತ್‌ ಪರದೆಯ ಮೂಲಕ ಮೋದಿ ಅವರ ಭಾಷಣ ನೇರಪ್ರಸಾರಗೊಳ್ಳಲಿದ್ದು ಪರದೆಯ ಕೆಳ ಭಾಗದಲ್ಲಿ ಅವರ ಭಾಷಣದ ಇಂಗ್ಲೀಷ್ ಅನುವಾದ ಪ್ರಸಾರಗೊಳ್ಳಲಿದೆ. ಭಾಷಣದ ಧ್ವನಿಯನ್ನು ಆಲಿಸಲು ಜನರು ಟೋಲ್‌ ಫ್ರೀ ಸಂಖ್ಯೆಗೆ ಕರೆ ಮಾಡಿ ಕೇಳಬಹುದು ಅಥವಾ ತಮ್ಮ ಸ್ಮಾರ್ಟ್‌ಫೋನ್‌ನಲ್ಲಿನ ಅಪ್ಲಿಕೇಶನ್‌ನ ಮೂಲಕ ಕೇಳಬಹುದಾಗಿದೆ.[ಯುಎಸ್ ಪ್ರವಾಸದ ವೇಳಾಪಟ್ಟಿ]

ಮ್ಯಾಡಿಸನ್‌ ಸ್ಕ್ವೇರ್‌ ನಲ್ಲಿ ಅನಿವಾಸಿ ಭಾರತೀಯರ ಜೊತೆ ಮೋದಿ ಅವರು ಸಂವಾದ ಮಾಡಲಿದ್ದಾರೆ. 360 ಡಿಗ್ರಿಯಲ್ಲಿ ತಿರುಗುವ ವೇದಿಕೆಯಲ್ಲಿ ಮೋದಿ ಅವರು ಹಿಂದಿಯಲ್ಲಿ ಭಾಷಣ ಮಾಡಲಿದ್ದು, ಈ ಭಾಷಣ ನೇರವಾಗಿ ಇಂಗ್ಲೀಷ್ ಗೆ ಅನುವಾದವಾಗಿ ಅಮೆರಿಕನ್ನರು ಸೇರಿದಂತೆ ಲೈವ್ ಟೆಲಿಕಾಸ್ಟ್ ನೋಡುವವರ ಕಿವಿ ಸೇರಲಿದೆ.

PMO India Narendra Modi Speech LIVE Madison Square Newyork

ಸಾಂಸ್ಕೃತಿಕ ಕಾರ್ಯಕ್ರಮಗಳು: ಎನ್ನಾರೈಗಳ ಜೊತೆ ಸಂವಾದ ಮ್ಯಾಡಿಸನ್ ಸ್ಕ್ವೇರ್ ನ ಕಾರ್ಯಕ್ರಮವನ್ನು ಮಾಜಿ ಮಿಸ್‌ ಅಮೆರಿಕ ಭಾರತ ಮೂಲದ ನೈನಾ ದವಾಲುರಿ ನಡೆಸಿಕೊಡಲಿದ್ದಾರೆ. ಅಮೆರಿಕ ರಾಷ್ಟ್ರಗೀತೆಯನ್ನು ಉದ್ಯಮಿ ರಾನ್‌ ಡೇವಿಸ್‌ ಪುತ್ರಿ ಅಂಜಲಿ ಹಾಡಲಿದ್ದಾರೆ. ಭಾರತದ ರಾಷ್ಟ್ರಗೀತೆಯನ್ನು ಖ್ಯಾತ ಗಾಯಕಿ ಕವಿತಾ ಕೃಷ್ಣಮೂರ್ತಿ ಹಾಡಲಿದ್ದು, ಎಲ್‌. ರವಿಶಂಕರ್‌ ಪಿಟೀಲು ನುಡಿಸಿಕೊಡಲಿದ್ದಾರೆ. ಹಲವು ಬಾಲಿವುಡ್‌ ತಾರೆಯರೂ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.[ಸೆಂಟ್ರಲ್ ಪಾರ್ಕಿನಲ್ಲಿ ಮೋದಿ ಮೋಡಿ]

ಮ್ಯಾಡಿಸನ್ ಸ್ಕ್ವೇರ್ ನಲ್ಲಿ ಮೋದಿ ಅವರ ಭಾಷಣದ ಲೈವ್ ವಾರ್ತಾ ಮತ್ತು ಪ್ರಸಾರ ಇಲಾಖೆ ವತಿಯಿಂದ ಯೂಟ್ಯೂಬ್ ನಲ್ಲೂ ಲಭ್ಯವಿದೆ, ವಿಡಿಯೋ ಲಿಂಕ್ ಕೆಳಗಿದೆ ಕ್ಲಿಕ್ಕಿಸಿ. ವಿಡಿಯೋ ಓಪನ್ ಆಗದಿದ್ದವರು http://www.pmvisit.org/ ವೆಬ್ ತಾಣಕ್ಕೆ ಭೇಟಿ ಕೊಟ್ಟು ನೇರ ದೃಶ್ಯಾವಳಿಗಳನ್ನು ಕಾಣಬಹುದು.


Mirror Link:

English summary
Prime Minister Narendra Modi's addresses nearly 20,000 Indian-Americans in New York today(Sept.28). His speech at the Madison Square Garden in midtown Manhattan, New York, on September 28 will be shown at Times Square with Indian American Community Foundation (IACF).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X