Beaches: ಬೇಸಿಗೆ ರಜೆಗೆ ಬೆಸ್ಟ್ ಜಾಗಗಳು: ಭಾರತದ ಈ 7 ಬೀಚ್‌ಗಳು ಜಾಗತಿಕ ಮಾನ್ಯತೆ ಪಡೆದಿವೆ
ಬೇಸಿಗೆ ಕಾಲದಲ್ಲಿ ಕುಟುಂಬ ಮತ್ತು ಸ್ನೇಹಿತರೊಂದಿಗೆ ಪ್ರವಾಸಕ್ಕೆ ತೆರಳಲು ಯೋಜಿಸುತ್ತಿದ್ದರೆ, ಈ ಬ್ಲೂ ಫ್ಲ್ಯಾಗ್ ಬೀಚ್‌ಗಳು ಉತ್ತಮ ಆಯ್ಕೆಯಾಗಿವೆ. ಭಾರತದ ಕಡಲ ತೀರಗಳು ಪ್ರವಾಸಿಗರನ್ನು ಯಾವಾಗಲೂ ಸೆಳೆಯುತ್ತವೆ. ಆದರೆ ಕೆಲವು ಕಡಲ ತೀರಗಳು ತಮ್ಮ ಸ್ವಚ್ಛತೆ, ಪರಿಸರ ಸಂರಕ್ಷಣೆ ಮತ್ತು ಸುರಕ್ಷಿತ ಪ್ರವಾಸೋದ್ಯಮದ ಕಾರಣದಿಂದ ಜಾಗತಿಕ ಮಟ್ಟದಲ್ಲೂ ಗುರುತಿಸಿಕೊಂಡಿವೆ. ಇಂತಹ ಬೀಚ್‌ಗಳಿಗೆ 'ಬ್ಲೂ ಫ್ಲ್ಯಾಗ್' ಪ್ರಮಾಣಪತ್ರ ನೀಡಲಾಗುತ್ತದೆ. ಈ ಪ್ರಮಾಣಪತ್ರವನ್ನು ಫೌಂಡೇಶನ್ ಫಾರ್ ಎನ್ವಿರಾನ್‌ಮೆಂಟಲ್ ಎಜುಕೇಶನ್ (FEE) ಸಂಸ್ಥೆ ನೀಡುತ್ತದೆ.
ಸ್ವಚ್ಛತೆ, ಪರಿಸರ ಸ್ನೇಹಿ ವ್ಯವಸ್ಥೆ, ಸುರಕ್ಷತೆ ಮತ್ತು ಉತ್ತಮ ನಿರ್ವಹಣೆ ಆಧಾರದಲ್ಲಿ ಭಾರತದಲ್ಲಿನ ಹಲವು ಬೀಚ್‌ಗಳು ಫೌಂಡೇಶನ್ ಫಾರ್ ಎನ್ವಿರಾನ್‌ಮೆಂಟಲ್ ಎಜುಕೇಶನ್ ಈ ಮಾನ್ಯತೆ ಪಡೆದಿವೆ. ಇಲ್ಲಿವೆ ದೇಶದ ಪ್ರಮುಖ ಬ್ಲೂ ಫ್ಲ್ಯಾಗ್ ಬೀಚ್‌ಗಳು.

ಪಡಬಿದ್ರಿ ಬೀಚ್, ಕರ್ನಾಟಕ
ನಮ್ಮ ಕರ್ನಾಟಕದ ಪಡಬಿದ್ರಿ ಕಡಲ ತೀರವು ಶಾಂತ ವಾತಾವರಣ ಮತ್ತು ಸ್ವಚ್ಛವಾದ ಮರಳಿಗಾಗಿ ಪ್ರಸಿದ್ಧವಾಗಿದೆ. ಇಲ್ಲಿ ಕಸದ ನಿರ್ವಹಣೆ, ಲೈಫ್ ಗಾರ್ಡ್ ಸೌಲಭ್ಯ ಮತ್ತು ಪರಿಸರ ಸ್ನೇಹಿ ವ್ಯವಸ್ಥೆಗಳನ್ನು ಉತ್ತಮವಾಗಿ ವಿನ್ಯಾಸಗೊಳಿಸಲಾಗಿದೆ. ಹೆಚ್ಚು ಗದ್ದಲವಿಲ್ಲದ ಕಾರಣ ವಿಶ್ರಾಂತಿಗೆ ಇದು ಸೂಕ್ತ ತಾಣವಾಗಿದೆ.
ಕಾಸರಗೋಡು ಬೀಚ್
ಕಾಸರಗೋಡು ಜಿಲ್ಲೆಯು ಸುಂದರವಾದ ಮತ್ತು ಪ್ರಶಾಂತವಾದ ಕಡಲತೀರಗಳಿಗೆ ಹೇಸರುವಾಸಿಯಾಗಿದೆ. ಪರಿಸರ ಸ್ನೇಹಿ ವಾಕ್ ವೇ, ಕುಳಿತುಕೊಳ್ಳುವ ವ್ಯವಸ್ಥೆ ಮತ್ತು ಕಸದ ವ್ಯವಸ್ಥೆಗಳು ಇಲ್ಲಿ ಸರಿಯಾಗಿ ನಿರ್ವಹಣೆ ಮಾಡಲಾಗುತ್ತದೆ. ಹೆಚ್ಚು ವಾಣಿಜ್ಯೀಕರಣವಾಗದಿರುವುದರಿಂದ ಪ್ರಕೃತಿ ಸೌಂದರ್ಯವನ್ನು ಆಸ್ವಾದಿಸಲು ಇದು ಉತ್ತಮ ಸ್ಥಳವಾಗಿದೆ.
ಕಪ್ಪಾಡ್ ಬೀಚ್, ಕೇರಳ
ಐತಿಹಾಸಿಕ ಮಹತ್ವ ಹೊಂದಿರುವ ಕಪ್ಪಾಡ್ ಬೀಚ್‌ಗೆ ಪೋರ್ಚುಗೀಸ್ ಅನ್ವೇಷಕ ವಾಸ್ಕೋ ಡ ಗಾಮಾ 1498ರಲ್ಲಿ ಬಂದಿಳಿದಿದ್ದರು ಎಂಬ ನಂಬಿಕೆ ಇದೆ. ಇಂದು ಇದು ಸ್ವಚ್ಛತೆ ಮತ್ತು ಪರಿಸರ ಸ್ನೇಹಿ ಪ್ರವಾಸೋದ್ಯಮಕ್ಕಾಗಿ ಹೆಸರುವಾಸಿಯಾಗಿದೆ. ಪ್ರಶಾಂತವಾದ ವಾತಾವರಣ ಮತ್ತು ಕಲ್ಲಿನ ಕರಾವಳಿ ಇಲ್ಲಿನ ವಿಶೇಷತೆ. ಇದು ಕೋಯಿಕ್ಕೋಡ್‌ನಿಂದ (ಕ್ಯಾಲಿಕಟ್) ಸುಮಾರು 16 ಕಿಮೀ ದೂರದಲ್ಲಿದೆ.
ರುಷಿಕೊಂಡ ಬೀಚ್, ಆಂಧ್ರ ಪ್ರದೇಶ
ವಿಶಾಖಪಟ್ಟಣದ ಸಮೀಪದಲ್ಲಿರುವ ರುಷಿಕೊಂಡ ಕಡಲ ತೀರವು ಹಸಿರು ಗುಡ್ಡಗಳಿಂದ ಸುತ್ತುವರಿದಿದೆ. ವಾಟರ್ ಸ್ಪೋರ್ಟ್ಸ್ ಮತ್ತು ಕುಟುಂಬ ಸಮೇತ ಪ್ರವಾಸಕ್ಕೆ ಇದು ಜನಪ್ರಿಯ ತಾಣವಾಗಿದೆ. ಸ್ವಚ್ಛತೆ ಮತ್ತು ಉತ್ತಮ ಸೌಲಭ್ಯಗಳಿಂದ ಇದು ಭಾರತದ ಅತ್ಯಂತ ಸುಂದರ ಬೀಚ್‌ಗಳಲ್ಲಿ ಒಂದಾಗಿದೆ.
ರಾಧಾನಗರ ಬೀಚ್, ಅಂಡಮಾನ್ ಮತ್ತು ನಿಕೋಬಾರ್
ರಾಧಾನಗರ ಬೀಚ್ ಏಷ್ಯಾದ ಅತ್ಯುತ್ತಮ ಬೀಚ್‌ಗಳಲ್ಲಿ ಒಂದಾಗಿ ಗುರುತಿಸಿಕೊಂಡಿದೆ. ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಹ್ಯಾವ್‌ಲಾಕ್ ದ್ವೀಪದಲ್ಲಿರುವ (ಸ್ವರಾಜ್ ದ್ವೀಪ) ಏಷ್ಯಾದ ಅತ್ಯಂತ ಸುಂದರ ಮತ್ತು ಸ್ವಚ್ಛವಾದ ಕಡಲತೀರಗಳಲ್ಲಿ ಒಂದಾಗಿದೆ. ಪಾರದರ್ಶಕ ನೀರು, ನೈಸರ್ಗಿಕ ಸೌಂದರ್ಯ ಮತ್ತು ಕಟ್ಟುನಿಟ್ಟಿನ ಪರಿಸರ ಸಂರಕ್ಷಣೆ ಇಲ್ಲಿನ ಪ್ರಮುಖ ಆಕರ್ಷಣೆಗಳಾಗಿವೆ. ವಿಶೇಷ ಎಂದರೆ ಇಲ್ಲಿನ ಅದ್ಭುತ ಸೂರ್ಯಾಸ್ತದ ದೃಶ್ಯವು ಪ್ರವಾಸಿಗರನ್ನು ಆಕರ್ಷಿಸುತ್ತದೆ.
ಗೋಲ್ಡನ್ ಬೀಚ್, ಒಡಿಶಾ
ಒಡಿಶಾದ ಪುರಿಯಲ್ಲಿರುವ ಬಂಗಾಳ ಕೊಲ್ಲಿಯ ತೀರದಲ್ಲಿರುವ ಗೋಲ್ಡನ್ ಕಡಲ ತೀರವು ಸ್ವಚ್ಛತೆ ಮತ್ತು ಪರಿಸರ ಸ್ನೇಹಿ ಅಭಿವೃದ್ಧಿಯ ಮೂಲಕ ಜನಪ್ರಿಯತೆ ಪಡೆದಿದೆ. ಸುಂದರ ಸೂರ್ಯೋದಯ, ಶುಚಿಯಾದ ವಾಕಿಂಗ್ ಪ್ರದೇಶ ಮತ್ತು ಉತ್ತಮ ನಿರ್ವಹಣೆ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಇಲ್ಲಿನ ಚಿನ್ನದ ಬಣ್ಣದ ಮರಳು ಮತ್ತು ಸೂರ್ಯೋದಯ/ಸೂರ್ಯಸ್ತದ ಅತ್ಯಂತ ದೃಶ್ಯಗಳು ನೋಡಲು ಇದು ಪ್ರಸಿದ್ಧವಾಗಿವೆ.
ಬೇಸಿಗೆ ಕಾಲದಲ್ಲಿ ಕುಟುಂಬ ಮತ್ತು ಸ್ನೇಹಿತರೊಂದಿಗೆ ಪ್ರವಾಸಕ್ಕೆ ತೆರಳಲು ಯೋಜಿಸುತ್ತಿದ್ದರೆ, ಈ ಬ್ಲೂ ಫ್ಲ್ಯಾಗ್ ಬೀಚ್‌ಗಳು ಉತ್ತಮ ಆಯ್ಕೆಯಾಗಬಹುದು. ಸ್ವಚ್ಛ ಪರಿಸರ, ಸುರಕ್ಷಿತ ವ್ಯವಸ್ಥೆ ಮತ್ತು ನೈಸರ್ಗಿಕ ಸೌಂದರ್ಯದಿಂದ ಕೂಡಿರುವ ಈ ಕಡಲ ತೀರಗಳು ಬೇಸಿಗೆಯ ಬಿಸಿಲಿನಲ್ಲೂ ಮನಸ್ಸಿಗೆ ತಂಪು ನೀಡುವ ಅನುಭವ ನೀಡುತ್ತವೆ. ವಿಶೇಷವಾಗಿ ಬೆಳಗಿನ ಸೂರ್ಯೋದಯ ಮತ್ತು ಸಂಜೆ ಸೂರ್ಯಾಸ್ತದ ಸಮಯದಲ್ಲಿ ಈ ಬೀಚ್‌ಗಳ ಸೌಂದರ್ಯ ಇನ್ನಷ್ಟು ಮನಮೋಹಕವಾಗಿರುತ್ತದೆ.












Click it and Unblock the Notifications