ಬಿಯರ್‌ ಕುಡಿಯುವವರಿಗೆ ಹೆಚ್ಚು ಕಡಿಯುತ್ತದೆಯಂತೆ ಸೊಳ್ಳೆ: ಇದರ ಹಿಂದಿದೆ ವೈಜ್ಞಾನಿಕ ಕಾರಣ

ಸೊಳ್ಳೆಗಳು ಯಾವಾಗಲೂ ಯಾಕೆ ನನಗೇ ಕಚ್ಚುತ್ತದೆ ಎಂದು ನಮ್ಮ ನಡುವೆ ಇರುವ ಕೆಲವರು ಹೇಳಿರುವುದನ್ನು ನೀವೂ ಕೇಳಿರಬಹುದು. ಅದು ಕೇವಲ ತಪ್ಪು ಕಲ್ಪನೆಯಲ್ಲ. ವಿಜ್ಞಾನಿಗಳ ಹೊಸ ಸಂಶೋಧನೆಯು ಸೊಳ್ಳೆಗಳು ನಿಜವಾಗಿಯೂ ಕೆಲವು ಜನರತ್ತ ಹೆಚ್ಚು ಆಕರ್ಷಿತವಾಗುತ್ತವೆ ಎನ್ನುವುದನ್ನು ತೋರಿಸಿ ಕೊಟ್ಟಿವೆ. ಇದಕ್ಕೆ ಮುಖ್ಯ ಕಾರಣಗಳು ನಿರ್ದಿಷ್ಟ ದೇಹದ ವಾಸನೆಗಳು, ರಾಸಾಯನಿಕಗಳು ಮತ್ತು ನಿಮ್ಮ ಉಸಿರಾಟದಿಂದ ಹೊರಸೂಸುವ ಇಂಗಾಲದ ಡೈಆಕ್ಸೈಡ್.

ಸೊಳ್ಳೆಗಳು ತಮ್ಮ ಬೇಟೆಯನ್ನು ಹೇಗೆ ಗುರುತಿಸುತ್ತವೆ?:

ವಿಜ್ಞಾನಿಗಳ ಪ್ರಕಾರ, ಹೆಣ್ಣು ಸೊಳ್ಳೆಗಳು ಮಾತ್ರ ಮನುಷ್ಯರನ್ನು ಕಚ್ಚುತ್ತವೆ. ಅವು ಹಲವಾರು ಮೀಟರ್ ದೂರದಿಂದಲೇ ತಮ್ಮ ಬೇಟೆಯನ್ನು ಗುರುತಿಸಿ ಕೊಳ್ಳುತ್ತವೆ. ನಂತರ ಅವರಿಗೇ ಬಂದು ಕಚ್ಚುತ್ತವೆ. ಸೊಳ್ಳೆಗಳು ಆರಂಭದಲ್ಲಿ ಉಸಿರಾಟದಿಂದ ಹೊರಸೂಸುವ CO₂ ಅಂದರೆ ಇಂಗಾಲದ ಡೈಆಕ್ಸೈಡ್‌ಗೆ ಆಕರ್ಷಿತವಾಗುತ್ತವೆ. ನಂತರ ಅವು ದೇಹದ ವಾಸನೆ, ಚರ್ಮದ ರಾಸಾಯನಿಕಗಳು, ದೇಹದ ಉಷ್ಣತೆ ಮತ್ತು ತೇವಾಂಶದ ಆಧಾರದ ಮೇಲೆ ದಾಳಿ ಮಾಡುತ್ತವೆ. ಅದಕ್ಕಾಗಿಯೇ ಕೆಲವರಿಗೆ ಮಾತ್ರ ಸೊಳ್ಳೆಗಳು ಹೆಚ್ಚು ಕಡಿಯುತ್ತವೆ. ಗುಂಪಿನಲ್ಲಿ ಬಹಳಷ್ಟು ಜನ ಕುಳಿತಿದ್ದರೂ ಕೆಲವೊಮ್ಮೆ ಕೆಲವರಿಗೆ ಮಾತ್ರ ಸೊಳ್ಳೆ ಕಚ್ಚುವುದು ಇದೇ ಕಾರಣದಿಂದ.

Mosquitoes Bite Beer Drinkers

ರಕ್ತದ ಪ್ರಕಾರವಲ್ಲ, ದೇಹದ ವಾಸನೆಯೇ ನಿಜವಾದ ಕಾರಣ:

ಸೊಳ್ಳೆಗಳು ರಕ್ತದ ಪ್ರಕಾರ, ಕಣ್ಣಿನ ಬಣ್ಣ ಅಥವಾ ಕೂದಲಿನ ಬಣ್ಣವನ್ನು ಆಧರಿಸಿ ಜನರನ್ನು ಆಯ್ಕೆ ಮಾಡುತ್ತವೆ ಎನ್ನುವುದು ಬಹಳ ಹಿಂದಿನಿಂದಲೂ ನಂಬಿಕೊಂಡಿರುವ ಬಂದಿರುವ ವಿಚಾರ. ಆದರೆ ವಿಜ್ಞಾನಿಗಳು ಈ ಕಲ್ಪನೆಗಳನ್ನು ಅಲ್ಲಗಳೆದಿದ್ದಾರೆ. ಫ್ರೆಂಚ್ ರಾಷ್ಟ್ರೀಯ ಸುಸ್ಥಿರ ಅಭಿವೃದ್ಧಿ ಸಂಶೋಧನಾ ಸಂಸ್ಥೆಯ ವಿಜ್ಞಾನಿ ಫ್ರೆಡೆರಿಕ್ ಸಿಮಾರ್ಡ್ ಪ್ರಕಾರ, ಸೊಳ್ಳೆಗಳನ್ನು ಆಕರ್ಷಿಸುವಲ್ಲಿ ರಕ್ತದ ಪ್ರಕಾರವು ಯಾವುದೇ ಮಹತ್ವದ ಪಾತ್ರವನ್ನು ವಹಿಸುವುದಿಲ್ಲ. ಇಲ್ಲಿ ದೇಹದಿಂದ ಬಿಡುಗಡೆಯಾಗುವ ರಾಸಾಯನಿಕಗಳೇ ಮುಖ್ಯ.

"ಮಶ್ರೂಮ್ ಆಲ್ಕೋಹಾಲ್" ಎಂದೂ ಕರೆಯಲ್ಪಡುವ "1-ಆಕ್ಟೆನ್-3-ಓಲ್" ಎಂಬ ದೇಹದಿಂದ ಬಿಡುಗಡೆಯಾಗುವ ನಿರ್ದಿಷ್ಟ ರಾಸಾಯನಿಕವು ಸೊಳ್ಳೆಗಳನ್ನು ಬಲವಾಗಿ ಆಕರ್ಷಿಸುತ್ತದೆ ಎಂದು ಸಂಶೋಧನೆಯು ಕಂಡುಹಿಡಿದಿದೆ. ಯಾರ ಚರ್ಮದಿಂದ ಈ ರಾಸಾಯನಿಕ ಹೆಚ್ಚಿನ ಪ್ರಮಾಣದಲ್ಲಿ ಬಿಡುಗಡೆಯಾಗುತ್ತದೆಯೋ ಅವರಿಗೆ ಸೊಳ್ಳೆಗಳು ಹೆಚ್ಚಾಗಿ ಕಚ್ಚುತ್ತವೆ.

ಸೊಳ್ಳೆಗಳು ಬಿಯರ್ ಕುಡಿಯುವವರನ್ನು ಹೆಚ್ಚಾಗಿ ಕಚ್ಚುತ್ತವೆ:

ಬಿಯರ್ ಕುಡಿಯುವವರಿಗೂ ಸೊಳ್ಳೆಗಳು ಹೆಚ್ಚು ಕಡಿಯುತ್ತವೆ ಎನ್ನುವುದನ್ನು ಅಧ್ಯಯನಗಳು ತೋರಿಸಿವೆ. ಮದ್ಯಪಾನ ಮಾಡುವುದರಿಂದ ದೇಹದ ಉಷ್ಣತೆ ಹೆಚ್ಚಾಗುತ್ತದೆ. ಆಗ ದೇಹದಿಂದ CO₂ ಹೆಚ್ಚಿನ ಪ್ರಮಾಣದಲ್ಲಿ ಹೊರಸೂಸಲ್ಪಡುತ್ತವೆ. ಇದು ದೇಹದ ವಾಸನೆಯನ್ನು ಬದಲಾಯಿಸುತ್ತದೆ. ನೆದರ್‌ಲ್ಯಾಂಡ್ಸ್‌ನಲ್ಲಿ 465 ಜನರ ಮೇಲೆ ಈ ರೀತಿಯ ಅಧ್ಯಯನ ನಡೆಸಲಾಯಿತು. ಇದರ ಪ್ರಕಾರ ಬಿಯರ್ ಸೇವಿಸಿದವರತ್ತ ಸೊಳ್ಳೆಗಳು 1.35 ಪಟ್ಟು ಹೆಚ್ಚು ಆಕರ್ಷಿತವಾಗುತ್ತವೆ ಎನ್ನುವುದು ಸಾಬೀತಾಗಿದೆ.

ಹವಾಮಾನ ಬದಲಾವಣೆ ಅಪಾಯವನ್ನು ಹೆಚ್ಚಿಸುತ್ತದೆ:

ಹವಾಮಾನ ಬದಲಾವಣೆಯು ಸೊಳ್ಳೆಗಳ ವ್ಯಾಪ್ತಿಯನ್ನು ವೇಗವಾಗಿ ವಿಸ್ತರಿಸುತ್ತಿದೆ ಎಂದು ವಿಜ್ಞಾನಿಗಳು ಹೇಳುತ್ತಾರೆ. ಚಿಕುನ್‌ಗುನ್ಯಾವನ್ನು ಹರಡುವ ಸೊಳ್ಳೆ, ಹಿಂದೆ ಕಡಿಮೆ ಪರಿಣಾಮ ಬೀರುತ್ತಿದ್ದ ಶೀತ ದೇಶಗಳನ್ನು ಈಗ ತಲುಪಿದೆ. ಈ ನಿಟ್ಟಿನಲ್ಲಿ ದೇಹದ ವಾಸನೆ ಮತ್ತು ರಾಸಾಯನಿಕಗಳನ್ನು ನಿಯಂತ್ರಿಸುವ ಮೂಲಕ ಮಾನವರಿಗೆ ಉತ್ತಮ ರಕ್ಷಣೆ ನೀಡುವ ಹೊಸ ಸೊಳ್ಳೆ ನಿವಾರಕ ಉತ್ಪನ್ನಗಳನ್ನು ಅಭಿವೃದ್ಧಿಪಡಿಸಲು ತಜ್ಞರು ಈಗ ಪ್ರಯತ್ನಿಸುತ್ತಿದ್ದಾರೆ.

(ಬರಹ: ರಂಜಿತಾ ಆರ್.ಕೆ.)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+