ಆಸ್ಟ್ರೇಲಿಯಾ ಪ್ರಧಾನಿ ಆಂಥೋನಿಗೆ ಪಿಎಂ ಮೋದಿ ಖಡಕ್ ಪ್ರಶ್ನೆ!

ಸಿಡ್ನಿ: ಜಗತ್ತಿನ ಕಣ್ಣು ಪ್ರಧಾನಿ ಮೋದಿ ಅವರ ಆಸ್ಟ್ರೇಲಿಯಾ ಪ್ರವಾಸದ ಮೇಲೆ ನೆಟ್ಟಿದೆ. ನಿನ್ನೆಯಿಂದಲೂ ಪ್ರಧಾನಿ ಮೋದಿಯವರ ಕಾರ್ಯಕ್ರಮಗಳು ಸದ್ದು ಮಾಡ್ತಿವೆ. ಹಾಗೇ ಇಂದು ಆಸ್ಟ್ರೇಲಿಯಾ ಪ್ರಧಾನಿ ಜೊತೆಗೆ ಚರ್ಚೆ ವೇಳೆ ಪ್ರಧಾನಿ ಮೋದಿ ಖಡಕ್ ಆಗಿ ಪ್ರಶ್ನೆಯೊಂದನ್ನ ಕೇಳಿದ್ದಾರೆ. ಆಸ್ಟ್ರೇಲಿಯಾ ನೆಲದಲ್ಲಿ ಹಿಂದೂ ದೇಗುಲಗಳ ಮೇಲಿನ ದಾಳಿ ವಿರುದ್ಧ ಬೇಸರ ವ್ಯಕ್ತಪಡಿಸಿದ್ದಾರೆ.

ಮಾರ್ಚ್‌ನಲ್ಲಿ ಭಾರತಕ್ಕೆ ಭೇಟಿ ನೀಡಿದ್ದ ಆಸಿಸ್ ಪ್ರಧಾನಿ ಆಂಥೋನಿ ಅಲ್ಬನೀಸ್, ಧಾರ್ಮಿಕ ಕಟ್ಟಡಗಳ ಮೇಲೆ ನಡೆದ ದಾಳಿಯನ್ನ ಆಸ್ಟ್ರೇಲಿಯಾ ಸಹಿಸಲ್ಲ, ಅದಕ್ಕೆಲ್ಲ ನಮ್ಮಲ್ಲಿ ಅವಕಾಶವೂ ಇಲ್ಲ ಎಂದು ಹೇಳಿದ್ದರು. ಈಗ ಪ್ರಧಾನಿ ಮೋದಿ ಆಸ್ಟ್ರೇಲಿಯಾ ನೆಲಕ್ಕೇ ಎಂಟ್ರಿ ಕೊಟ್ಟು, ಆಸ್ಟ್ರೇಲಿಯಾ ಪ್ರಧಾನಿಯನ್ನೇ ಈ ಕುರಿತು ಪ್ರಶ್ನೆ ಮಾಡಿದ್ದಾರೆ. ಹಾಗಾದ್ರೆ ಪ್ರಧಾನಿ ಮೋದಿ ಆಸಿಸ್ ನೆಲದಲ್ಲಿ ದೇಗುಲಗಳ ಮೇಲಿನ ದಾಳಿ ಬಗ್ಗೆ ಆಸ್ಟ್ರೇಲಿಯಾ ಪಿಎಂ ಬಳಿ ಕೇಳಿದ ಪ್ರಶ್ನೆಯಾದರೂ ಏನು? ಅದರ ಸಂಪೂರ್ಣ ಮಾಹಿತಿ ಇಲ್ಲಿದೆ.

PM Narendra Modi questioned

ದೇಗುಲದ ಮೇಲೆ ದಾಳಿ ಮಾಡಿದವರಿಗೆ ಮಾರಿಹಬ್ಬ!

ಹೌದು ದೇಗುಲಗಳ ಮೇಲಿನ ದಾಳಿ ವಿಚಾರ ಸಾಕಷ್ಟು ಸದ್ದು ಮಾಡಿತ್ತು. ಆಸ್ಟ್ರೇಲಿಯಾದಲ್ಲಿ ಇಂತಹ ಘಟನೆ ನಡೆದಿದ್ದು ಭಾರತೀಯರಿಗೆ ನೋವು ಮಾಡಿತ್ತು. ಇದೀಗ ಆ ಬಗ್ಗೆ ಮಾತನಾಡಿರುವ ಪ್ರಧಾನಿ ಮೋದಿ, ಆಸಿಸ್ ಪ್ರಧಾನಿ ಆಂಥೋನಿ ಅಲ್ಬನೀಸ್ ಜೊತೆ ಚರ್ಚಿಸಿ ಬೇಸರ ಹೊರಹಾಕಿದ್ದಾರೆ. ಇನ್ನು ಪ್ರಧಾನಿ ಮೋದಿಯವರ ಪ್ರಶ್ನೆಗೆ ಆಸ್ಟ್ರೇಲಿಯಾ ಪ್ರಧಾನಿ ಸೂಕ್ತವಾಗಿ ಸ್ಪಂದಿಸಿದ್ದು, ಭಾರತ & ಆಸ್ಟ್ರೇಲಿಯಾ ಸಂಬಂಧ ಹಾಳುಮಾಡುವ ಯಾವುದೇ ಘಟನೆ ಒಪ್ಪಿಕೊಳ್ಳಲ್ಲ. ಭವಿಷ್ಯದಲ್ಲಿ ಅಂತಹವರ ವಿರುದ್ಧ ಕಠಿಣ ಕ್ರಮ ಗ್ಯಾರಂಟಿ ಎಂದಿದ್ದಾರೆ.

ಆಸ್ಟ್ರೇಲಿಯಾ ಪ್ರಧಾನಿ ಮೋದಿ ಹವಾ

ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಪಿಎಂ ಮೋದಿ (Modi in Australia) ನಿನ್ನೆ ವಿವಿಧ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದರು. ಪ್ರಮುಖವಾಗಿ ಸಿಡ್ನಿಯಲ್ಲಿ ಖುಡೋಸ್ ಬ್ಯಾಂಕ್ ಅರೆನಾ ಪ್ರದೇಶದಲ್ಲಿ ಮೋದಿ ಅವರಿಗೆ ಅಭಿನಂದನೆ ಸಲ್ಲಿಸಲು ಕಾರ್ಯಕ್ರಮ ಆಯೋಜಿಸಲಾಗಿತ್ತು. ಸಮಾರಂಭದಲ್ಲಿ ಪಿಎಂ ಮೋದಿ ಹವಾ ಹೇಗಿತ್ತು ಅಂತಾ ಜಗತ್ತಿಗೇ ನಿನ್ನೆ ಕಣ್ತುಂಬಿಕೊಂಡಿತ್ತು. ಪಿಎಂ ಮೋದಿ (Narendra Modi) ಸ್ಟೇಜ್ ಹತ್ತಿದ್ದೇ ತಡ, ಅನಿವಾಸಿ ಭಾರತೀಯರು 'ಭಾರತ್ ಮಾತಾ ಕಿ ಜೈ' ಎಂದು ಘೋಷಣೆ ಕೂಗಿ ಸಂಭ್ರಮಿಸಿದ್ರು. ಇದೀಗ ದೇಗುಲಗಳ ಮೇಲಿನ ದಾಳಿ ಬಗ್ಗೆ ಪ್ರಧಾನಿ ಪ್ರಸ್ತಾಪ ಮಾಡಿದ್ದಾರೆ.

PM Narendra Modi questioned

'ಪ್ರಧಾನಿ ಮೋದಿಯೇ ಬಾಸ್' ಎಂದಿದ್ದರು!

ಬರೋಬ್ಬರಿ 9 ವರ್ಷಗಳ ನಂತರ ಆಸ್ಟ್ರೇಲಿಯಾಗೆ ಪ್ರಧಾನಿ ಮೋದಿ ವಿಸಿಟ್ ಕೊಟ್ಟಿದ್ದಾರೆ. 2014ರಲ್ಲಿ ಮೊದಲ ಬಾರಿಗೆ ಪ್ರಧಾನಿ ಆದಾಗ ಆಸ್ಟ್ರೇಲಿಯಾಗೆ ಭೇಟಿ ನೀಡಿದ್ದರು. ಈಗ ಮತ್ತೆ 9 ವರ್ಷದ ನಂತರ ಆಸ್ಟ್ರೇಲಿಯಾಗೆ ಬಂದ ಪ್ರಧಾನಿ ಮೋದಿಯವರಿಗೆ ಅನಿವಾಸಿ ಭಾರತೀಯರು ಭರ್ಜರಿ ಸ್ವಾಗತ ಕೋರಲಾಗಿತ್ತು. ಅದ್ರಲ್ಲೂ ಪಿಎಂ ಮೋದಿಗೆ ಇರುವ ಫ್ಯಾನ್ಸ್ ನೋಡಿ ಖುದ್ದು ಆಸ್ಟ್ರೇಲಿಯಾ ಪ್ರಧಾನಿ ಆಂಥೋನಿ ಅಲ್ಬನೀಸ್ 'ಪ್ರಧಾನಿ ಮೋದಿಯೇ ಬಾಸ್' ಎಂದು ಹೊಗಳುವ ಮೂಲಕ ಮೋದಿಯವರನ್ನ ವೆಲ್‌ಕಂ ಮಾಡಿದ್ದು ಜಗತ್ತಿನ ಗಮನ ಸೆಳೆದಿತ್ತು.

20 ಸಾವಿರ ಜನ ಭಾಗವಹಿಸಿದ್ದರು

ಸಿಡ್ನಿಯ ಖುಡೋಸ್ ಬ್ಯಾಂಕ್ ಅರೆನಾದಲ್ಲಿ ಮೋದಿ ಅವರನ್ನ ಅಭಿನಂದಿಸಲು ಆಯೋಜಿಸಿದ್ದ ಸಮಾರಂಭದಲ್ಲಿ ಸುಮಾರು 20,000 ಜನ ಭಾಗವಹಿಸಿದ್ದರು. ಸಭೆಯಲ್ಲಿ ಭಾರತೀಯರನ್ನ ಮತ್ತು ಆಸ್ಟ್ರೇಲಿಯಾದ ನಾಗರಿಕರನ್ನ ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ನಮ್ಮ ಜೀವನಶೈಲಿ ಭಿನ್ನವಾದ್ರೂ ಯೋಗ ನಮ್ಮನ್ನ ಬೆಸೆಯುತ್ತಿದೆ. ಹಿಂದೆ ನಾವು ಕ್ರಿಕೆಟ್‌ ನಿಂದಾಗಿ ಹತ್ತಿರವಾಗಿದ್ದೆವು, ಈಗ ಟೆನಿಸ್ ಮತ್ತು ಸಿನಿಮಾ ಕೂಡಾ ನಮ್ಮನ್ನ ಪರಸ್ಪರ ಬೆಸೆಯುವ ಕೊಂಡಿಗಳಾಗಿವೆ ಎಂದು ತಿಳಿಸಿದ್ದರು.

PM Narendra Modi questioned

ಒಟ್ಟಾರೆ ಹೇಳೋದಾದ್ರೆ ಪ್ರಧಾನಿ ಮೋದಿ ಅವರ ಆಸ್ಟ್ರೇಲಿಯಾ ಭೇಟಿ ಸಾಕಷ್ಟು ಮಹತ್ವ ಪಡೆದುಕೊಂಡಿದೆ. ಈ ಹೊತ್ತಲ್ಲೇ ಆಸ್ಟ್ರೇಲಿಯಾದಲ್ಲಿ ದೇಗುಲಗಳ ಮೇಲೆ ನಡೆಯುತ್ತಿರುವ ದಾಳಿ ಬಗ್ಗೆಯೂ ಪ್ರಸ್ತಾಪ ಮಾಡಿದ್ದು ಭಾರತೀಯರಿಗೆ ಹೆಮ್ಮೆ ತಂದಿದೆ. ಹಾಗೇ ಆಸ್ಟ್ರೇಲಿಯಾ ಪ್ರಧಾನಿ ಕೂಡ ಮುಂದೆ ಇಂತಹ ತಪ್ಪು ನಡೆಯಲು ಬಿಡಲ್ಲ ಎಂದಿರುವುದು ಅನಿವಾಸಿ ಭಾರತೀಯರಿಗೆ ಧೈರ್ಯ ತುಂಬಿದಂತಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+