ದಕ್ಷಿಣ ಕೊರಿಯಾದಲ್ಲಿ ಶಾಂತಿ ಪ್ರಶಸ್ತಿ ಸ್ವೀಕರಿಸಲಿರುವ ಪ್ರಧಾನಿ ಮೋದಿ
ಸಿಯೋಲ್, ಫೆಬ್ರವರಿ 21: ಎರಡು ದಿನಗಳ ಕಾಲ ಪೂರ್ವ ಏಷ್ಯಾ ರಾಜ್ಯಗಳ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಗುರುವಾರ ದಕ್ಷಿಣ ಕೊರಿಯಾಕ್ಕೆ ತೆರಳಿದ್ದಾರೆ.
ದಕ್ಷಿಣ ಕೊರಿಯಾ ರಾಜಧಾನಿ ಸಿಯೋಲ್ ಗೆ ತೆರಳಿರುವ ಮೋದಿ ದಕ್ಷಿಣ ಕೋರಿಯಾ ಅಧ್ಯಕ್ಷ ಮೂನ್ ಜೈ ಇನ್ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ. ಜೊತೆಗೆ ಅಂತಾರಾಷ್ಟ್ರೀಯ ಸಹಕಾರ, ಜಾಗತಿಕ ಅಭಿವೃದ್ಧಿ, ಮಾನವಿಕ ಅಭಿವೃದ್ಧಿ ಕ್ಷೇತ್ರಗಳಲ್ಲಿ ನರೇಂದ್ರ ಮೋದಿ ಅವರ ಕೊಡುಗೆಯನ್ನು ಪರಿಗಣಿಸಿ ನೀಡಿದ ಸಿಯೋಲ್ ಶಾಂತಿ ಪ್ರಶಸ್ತಿಯನ್ನೂ ಅವರು ಸ್ವೀಕರಿಲಿದ್ದಾರೆ.
ಅಧ್ಯಕ್ಷರೊಂದಿಗೆ ಮಾತ್ರವಲ್ಲದೆ, ಕೊರಿಯಾದ ಇತರ ನಾಯಕರು, ಉದ್ಯಮಿಗಳು ಮತ್ತು ಇಲ್ಲಿನ ಭಾರತೀಯ ಸಮುದಾಯವನ್ನು ಭೇಟಿ ಮಾಡಿ ಮೋದಿ ಮಾತುಕತೆ ನಡೆಸಲಿದ್ದಾರೆ.

ಪ್ರಸ್ತುತ ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ವ್ಯವಹಾರ ಸುಮಾರು 21 ಬಿಲಿಯನ್ ಡಾಲರ್ ಮೌಲ್ಯದ್ದಾಗಿದ್ದು, 2030 ರ ಹೊತ್ತಿಗೆ ಇದನ್ನು 50 ಬಿಲಿಯನ್ ಗೆ ಹೆಚ್ಚಿಸುವ ಬಗ್ಗೆ ಇಬ್ಬರು ನಾಯಕರೂ ಮಾತುಕತೆ ನಡೆಸಲಿದ್ದಾರೆ.












Click it and Unblock the Notifications