ಬ್ರಿಕ್ಸ್ ಗಾಗಿ ಬಂದ ಮೋದಿ, ಜಿನ್ ಪಿಂಗ್ ಮೇಲೆ ಎಲ್ಲರ ಕಣ್ಣು
ಬ್ರಿಕ್ಸ್ ಸಮಾವೇಶಕ್ಕಾಗಿ ಜರ್ಮನಿಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ. ಚೀನಾದ ಅಧ್ಯಕ್ಷ ಜಿಂಗ್ ಪಿಂಗ್ ಕೂಡಾ ಆಗಮನ. ಈ ಇಬ್ಬರ ಮಾತುಕತೆಯ ಬಗ್ಗೆ ಯಾವುದೇ ನಿರೀಕ್ಷೆಗಳಿಲ್ಲವಾದರೂ ಎಲ್ಲರ ಗಮನ ಇವರ ಮೇಲೆ.
ಹ್ಯಾಂಬರ್ಗ್ (ಜರ್ಮನಿ), ಜುಲೈ 7: ಮೂರು ದಿನಗಳ ಇಸ್ರೇಲ್ ಪ್ರವಾಸದ ನಂತರ, ಇದೀಗ ಪ್ರಧಾನಿ ನರೇಂದ್ರ ಮೋದಿ ಅವರು ಇಲ್ಲಿ ನಡೆಯಲಿರುವ ಜಿ20 ಶೃಂಗ ಸಭೆಯಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದಾರೆ.
ಈ ಶೃಂಗಸಭೆಯಲ್ಲಿ ಚೀನಾದ ಅಧ್ಯಕ್ಷ ಜಿಂಗ್ ಪಿಂಗ್ ಕೂಡಾ ಭಾಗವಹಿಸುತ್ತಿದ್ದಾರೆ. ಆದರೆ, ಅವರೊಂದಿಗೆ ಮೋದಿ ಮಾತುಕತೆ ನಡೆಸುತ್ತಾರೆಯೇ ಇಲ್ಲವೇ ಎಂಬುದು ಸ್ಪಷ್ಟವಾಗಿಲ್ಲ.

ಭಾರತ- ಚೀನಾ ಗಡಿಯಲ್ಲಿ ಉಭಯ ರಾಷ್ಟ್ರಗಳ ನಡುವೆ ಸೇನಾ ಚಟುವಟಿಕೆಗಳು ನಡೆದು ಎರಡೂ ರಾಷ್ಟ್ರಗಳ ನಡುವೆ ಯುದ್ಧದ ಕಾರ್ಮೋಡ ಆವರಿಸಿರುವ ಹಿನ್ನೆಲೆಯಲ್ಲಿ ಈ ಶೃಂಗ ಸಭೆಯಲ್ಲಿ ಪಾಲ್ಗೊಳ್ಳಲಿರುವ ಮೋದಿ, ಜಿನ್ ಪಿಂಗ್ ಮೇಲೆ ಎಲ್ಲರ ಕಣ್ಣು ಬಿದ್ದಿದೆ.
ಬ್ರಿಕ್ಸ್ ರಾಷ್ಟ್ರಗಳ ಸಂಘಟನೆಯಲ್ಲಿ ಭಾರತಕ್ಕೆ ಮಹತ್ವದ ಪಾತ್ರವಿದೆ. ಈ ವೇಳೆ, ಇತರ ಸದಸ್ಯ ರಾಷ್ಟ್ರಗಳ ಹಲವು ಬಹುಪಕ್ಷೀಯ ಮತ್ತು ದ್ವಿಪಕ್ಷೀಯ ಒಪ್ಪಂದಗಳು ನಡೆಯಲಿವೆ ಎಂದು ನಿರೀಕ್ಷಿಸಲಾಗಿದೆ.












Click it and Unblock the Notifications