ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟೈಮ್: ಜನಮನ ಗೆದ್ದ ಮೋದಿ ರೇಸಿನಿಂದ ಹೊರಕ್ಕೆ

By Mahesh
|
Google Oneindia Kannada News

ವಾಷಿಂಗ್ಟನ್, ಡಿ.9: ಟೈಮ್ ಮ್ಯಾಗಜೀನ್ ವರ್ಷದ ವ್ಯಕ್ತಿ ಸಮೀಕ್ಷೆಯಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಜನಮನ ಗೆದ್ದರೂ ಸ್ಪರ್ಧೆ ಹೊರಬಿದ್ದಿದ್ದಾರೆ. ಸಾರ್ವಜನಿಕರ ಮತದಾನದಲ್ಲಿ ಮೋದಿ ಅವರೇ ಜನಪ್ರಿಯ ವ್ಯಕ್ತಿಯಾಗಿ ಹೊರಹೊಮ್ಮಿದ್ದಾರೆ. ಆದರೆ, ಟೈಮ್ ಅಧಿಕೃತ ಅಂತಿಮ ಪಟ್ಟಿಯಲ್ಲಿ ಮೋದಿ ಅವರ ಹೆಸರು ಕಾಣಿಸಿಕೊಂಡಿಲ್ಲ.

ಡಿಸೆಂಬರ್ 6ರಂದು ಆನ್ ಲೈನ್ ಮತದಾನ ಕೊನೆಗೊಂಡಿದೆ. ಸಮೀಕ್ಷೆಯ ಫಲಿತಾಂಶವನ್ನು ಡಿಸೆಂಬರ್ 8 ರಂದು ಘೋಷಿಸಲಾಗಿದೆ. ಈ ಪ್ರಕಾರ ಆನ್ ಲೈನ್ ಮತಗಳ ಆಧಾರದ ಮೇಲೆ ಫರ್ಗುಸನ್ ಹೋರಾಟಗಾರರನ್ನು ಹಿಂದಿಕ್ಕಿ ವರ್ಷದ ವ್ಯಕ್ತಿ ಎಂದು ಜನರಿಂದ ಕರೆಸಿಕೊಂಡಿದ್ದಾರೆ. ಅದರೆ, ಅಧಿಕೃತವಾಗಿ ಟೈಮ್ ವರ್ಷದ ವ್ಯಕ್ತಿ ವಿಜೇತರ ಹೆಸರನ್ನು ಡಿಸೆಂಬರ್ 10 ರಂದು ಪ್ರಕಟಿಸಲಾಗುತ್ತದೆ.

PM Modi out of race for TIME Person Of The Year title; wins readers' poll

ಟೈಮ್ ಸಂಪಾದಕರ ಆಯ್ಕೆ ಮಾಡಿರುವ 50 ಜಾಗತಿಕ ನಾಯಕರು, ಸಿಇಒಗಳು ಹಾಗೂ 8 ಇನ್ನಿತರ ನಾಯಕರ ಪಟ್ಟಿಯಲ್ಲಿ ಮೋದಿ ಅವರ ಹೆಸರು ಕಾಣಿಸಿಕೊಂಡಿಲ್ಲ. [ಮೋದಿ ಏಷ್ಯಾದ ವರ್ಷದ ವ್ಯಕ್ತಿ-2014]

ಅಂತಿಮ 8 ಜನರ ಪಟ್ಟಿಯಲ್ಲಿ ಅಲಿಬಾಬಾ ಸಮೂಹ ಜಾಕ್ ಮಾ, ಎಬೋಲಾ ಕೇರ್ ಟೇಕರ್ಸ್, ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುಟಿನ್, ಆಪಲ್ ಸಿಇಒ ಟಿಮ್ ಕುಕ್, ಫರ್ಗುಸನ್ ಪ್ರತಿಭಟನಾಕಾರರು, ಟೇಲರ್ ಸ್ವಿಫ್ಟ್, ಎನ್ ಎಫ್ ಎಲ್ ಆಯುಕ್ತ ರೋಜರ್ ಸ್ಟೋಕಿ ಗೂಡ್ ಎಲ್ ಹಾಗೂ ಕುರ್ದೀಶ್ ರಾಜಕಾರಣಿ ಮಸೌದ್ ಬರ್ಜಾನಿ ಇದ್ದಾರೆ. [ಒಬಾಮಾ ನಂತರ ಮೋದಿಯೇ ಜನಪ್ರಿಯ ವ್ಯಕ್ತಿ!]

ಆನ್ ಲೈನ್ ಸಮೀಕ್ಷೆ ವಿಜೇತರು ಹಾಗೂ ವರ್ಷದ ವ್ಯಕ್ತಿ ಯಾರು ಎಂಬುದನ್ನು ಟೈಮ್ ಡಿ.10ರಂದು ಅಧಿಕೃತವಾಗಿ ಪ್ರಕಟಿಸಲಿದೆ. 1927ರಿಂದ ವರ್ಷದ ವ್ಯಕ್ತಿ ಪ್ರಶಸ್ತಿಯನ್ನು ಟೈಮ್ ಮ್ಯಾಗಜೀನ್ ನೀಡುತ್ತಾ ಬಂದಿದೆ.

English summary
Prime Minister Narendra Modi has not made it to the list of eight finalists selected by TIME magazine for its annual 'Person of the Year' title.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X