Earthquake: ಭೂಕಂಪ ಪೀಡಿತರ ನೆರವಿಗೆ ನಿಂತ ಭಾರತ: ಪ್ರಧಾನಿ ಭರವಸೆ
ಅಲ್ಲಿ ಕ್ಷಣಕ್ಷಣಕ್ಕೂ ಸಾವಿನ ಸಂಖ್ಯೆ ಹೆಚ್ಚಾಗುತ್ತಿದ್ದು, ಕೆಲ ಸೆಕೆಂಡು ಭೂಮಿ ಅಲುಗಾಡಿದ್ದಕ್ಕೆ ಒಂದು ದೇಶವೇ ಸ್ಮಶಾನವಾಗಿ ಹೋಗಿದೆ. ಹೀಗೆ ಭೂಕಂಪದ ಹೊಡೆತಕ್ಕೆ ಮೊರಾಕ್ಕೊ ನಲುಗಿ ಹೋದ ಸಂದರ್ಭದಲ್ಲೇ ಭಾರತ ಧೈರ್ಯ ತುಂಬಿದೆ. ಖುದ್ದಾಗಿ ಪ್ರಧಾನಿ ಮೋದಿ ಅವರು, ಈಗ ಭೂಕಂಪದ ಪರಿಣಾಮ ಸೋತು ಹೋಗಿರುವ ಮೊರಾಕ್ಕೊ ಜನರ ನೆರವಿಗೆ ನಿಲ್ಲುವ ಭರವಸೆ ನೀಡಿದ್ದಾರೆ.
ಹೌದು, ಮೊರಾಕ್ಕೊದಲ್ಲಿ ಸಂಭವಿಸಿರುವ 6.8 ತೀವ್ರತೆಯ ಭೂಕಂಪ ನೂರಾರು ಜನರನ್ನು ಈಗಾಗಲೇ ಬಲಿ ಪಡೆದಿದೆ. ಸಾವಿನ ಸಂಖ್ಯೆ ಕ್ಷಣಕ್ಷಣಕ್ಕೂ ಏರಿಕೆ ಕಾಣುತ್ತಿದ್ದು, ಇತ್ತೀಚಿನ ವರದಿಗಳ ಪ್ರಕಾರ ಸಾವಿನ ಸಂಖ್ಯೆ 800ರ ಗಡಿ ದಾಟಿದೆ. ಆದರೆ ಎದೆಗುಂದಿ ಕೂತಿರುವ ಈ ದೇಶಕ್ಕೆ ಭಾರತ ಧೈರ್ಯ ತುಂಬಿದೆ. ಖುದ್ದು ಪ್ರಧಾನಿ ಮೋದಿ ಅವರು ಭೂಕಂಪ ಪೀಡಿತ ಮೊರಾಕ್ಕೊ ದೇಶಕ್ಕೆ ನೆರವಿನ ಭರವಸೆ ನೀಡಿದ್ದಾರೆ. ಹಾಗಾದರೆ ಪ್ರಧಾನಿ ಮೋದಿ ಅವರು ಹೇಳಿದ್ದೇನು? ಹೇಗಿದೆ ಭೂಕಂಪ ಪೀಡಿತ ಮೊರಾಕ್ಕೊ ದೇಶದ ಸ್ಥಿತಿ? ಬನ್ನಿ ತಿಳಿಯೋಣ.

ಪ್ರಧಾನಿ ನರೇಂದ್ರ ಮೋದಿ ಹೇಳಿದ್ದೇನು?
ನಿನ್ನೆ ರಾತ್ರಿ 6.8 ತೀವ್ರತೆಯ ಪ್ರಬಲ ಭೂಕಂಪ ಮೊರಾಕ್ಕೊ ದೇಶವನ್ನ ನಲುಗಿಸಿತ್ತು. ಇದೇ ಸಂದರ್ಭದಲ್ಲಿ ನೂರಾರು ಕಟ್ಟಡಗಳು ಕೂಡ ನೆಲಕ್ಕೆ ಉರುಳಿವೆ. ಮರ್ರಾಕೆಚ್ ನೈಋತ್ಯಕ್ಕೆ 71 ಕಿಲೋ ಮೀಟರ್ ದೂರದಲ್ಲಿ ಕಂಪನ ಕೇಂದ್ರ ಬಿಂದು ದಾಖಲಾಗಿದೆ. ಇದೀಗ ಮೊರಾಕ್ಕೊ ಪರಿಸ್ಥಿತಿ ಬಗ್ಗೆ ಪ್ರಧಾನಿ ಮೋದಿ ಮಾತನಾಡಿದ್ದು, ಎಲ್ಲ ರೀತಿಯ ನೆರವು ನೀಡಲು ಭಾರತ ಸಿದ್ಧವಾಗಿದೆ ಎಂದಿದ್ದಾರೆ. ಕಷ್ಟದ ಸಂದರ್ಭದಲ್ಲಿ ಜಗತ್ತು ಮೊರಾಕ್ಕೊ ಜೊತೆ ನಿಂತಿದ್ದು, ಸಾಧ್ಯವಿರುವ ಎಲ್ಲ ನೆರವನ್ನು ನೀಡಲು ಭಾರತ ಸಿದ್ಧ ಎಂದಿದ್ದಾರೆ ಪ್ರಧಾನಿ ಮೋದಿ. ಅಲ್ಲದೆ ನೂರಾರು ಜೀವ ಬಲಿಪಡೆದ ಘಟನೆ ಬಗ್ಗೆ ಸಂತಾಪ ಸೂಚಿಸಿದ್ದಾರೆ.
Extremely pained by the loss of lives due to an earthquake in Morocco. In this tragic hour, my thoughts are with the people of Morocco. Condolences to those who have lost their loved ones. May the injured recover at the earliest. India is ready to offer all possible assistance to…
— Narendra Modi (@narendramodi) September 9, 2023
ಸಾಲು ಸಾಲು ಭೂಕಂಪನ ಶಾಕ್
ಮನೆ, ಕಟ್ಟಡಗಳ ಅವಶೇಷಗಳ ಅಡಿ ಲೆಕ್ಕವಿಲ್ಲದಷ್ಟು ಜನರು ಸಿಲುಕಿ ಕೊಂಡಿದ್ದಾರೆ. ರಕ್ಷಣಾ ಕಾರ್ಯ ಭರದಿಂದ ಸಾಗಿದ್ದು, ಹೀಗಾಗಿ ಸಾವು ನೋವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಗಳಿಗೆ ಎಂದು ಮೊರಾಕ್ಕೊ ಅಧಿಕಾರಿಗಳು ತಿಳಿಸಿದ್ದಾರೆ. ಮತ್ತೊಂದು ಕಡೆ ಭೂಕಂಪನದ ವೇಳೆ ಸೆರೆ ಸಿಕ್ಕ ವಿಡಿಯೋ ಹಾಗೂ ಸಿಸಿ ಕ್ಯಾಮೆರಾ ವಿಡಿಯೋಗಳು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಮರ್ರಾಕೆಚ್‌ನ ನೈಋತ್ಯ ಭಾಗ ಪದೇ ಪದೆ ಭೂಕಂಪನಕ್ಕೆ ತುತ್ತಾಗಿ ನಿತ್ಯವೂ ಪರದಾಡ್ತಿದೆ. 2004ರಲ್ಲಿ ಈಶಾನ್ಯ ಮೊರಾಕ್ಕೊದಲ್ಲಿ ಸಂಭವಿಸಿದ್ದ ಭೂಕಂಪದಲ್ಲೂ 600ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದರು.

Earthquake in Morocco kills more than 800 people pic.twitter.com/3AG5bwQPzE
— YabaLeftOnline (@yabaleftonline) September 9, 2023
ಪ್ರವಾಸಿಗರನ್ನೇ ನಂಬಿ ಬದುಕುತ್ತಿರುವ ದೇಶ
ಮೊರಾಕ್ಕೊ ಉತ್ತರ ಆಫ್ರಿಕಾದ ದೇಶ, ಇಲ್ಲಿ ಹೆಚ್ಚು ಪ್ರಮಾಣದಲ್ಲಿ ಪ್ರವಾಸಿಗರ ಪಡೆ ಬರುತ್ತೆ. ಹಾಗೇ ಮೊರಾಕ್ಕೊ ದೇಶಕ್ಕೆ ಪ್ರವಾಸೋದ್ಯಮ ಸಾಕಷ್ಟು ಆದಾಯ ಕೂಡ ತಂದುಕೊಡತ್ತಿದೆ. ಹೀಗೆ ನಿನ್ನೆ ರಾತ್ರಿ ಪ್ರವಾಸಿಗರು ಆರಾಮವಾಗಿ ಓಡಾಡಿಕೊಂಡು ಇದ್ರು. ಇದ್ದಕ್ಕಿದ್ದಂತೆ ಭೂಮಿ ನಡುಗಲು ಶುರುವಾಗಿದ್ದು, ಪ್ರವಾಸಿಗರು ಓಡಿದ್ದಾರೆ. ಇದೇ ಸಂದರ್ಭದಲ್ಲಿ ಕಟ್ಟಡಗಳು ಕೂಡ ಕುಸಿದಿವೆ. ಜನ ಎಲ್ಲಿ ಹೋಗೋದು ದೇವರೆ ಅಂತಾ ಪರದಾಡಿದ್ದಾರೆ. ನೋಡ ನೋಡುತ್ತಲೇ ಮೊರಾಕ್ಕೊ ಸ್ಮಶಾನವಾಗಿ ಬದಲಾಗಿತ್ತು. ಇದೀಗ ಸಂಕಷ್ಟಕ್ಕೆ ಸಿಲುಕಿರುವ ಮೊರಾಕ್ಕೊ ಜನ ಹಾಗೂ ಅಲ್ಲಿನ ಸರ್ಕಾರಕ್ಕೆ ಜಗತ್ತು ಸಹಾಯ ಮಾಡಲು ಮುಂದೆ ಬಂದಿದೆ.












Click it and Unblock the Notifications