ಆಫ್ರಿಕಾದ ರಾಷ್ಟ್ರಕ್ಕೆ ಜಲಭಾಗ್ಯ ಒದಗಿಸಿದ ಮೋದಿ ಸರ್ಕಾರ

Posted By:
Subscribe to Oneindia Kannada

ದಾರ್-ಎಸ್-ಸಲಾಮ್ (ತಾಂಜಾನಿಯ), ಜುಲೈ 10 : ಆಫ್ರಿಕಾ ಪ್ರವಾಸ ನಿರತ ಭಾರತದ ಪ್ರಧಾನಿ ಮೋದಿ ಅವರು ಭಾನುವಾರದಂದು ತಾಂಜಾನಿಯಾದಲ್ಲಿ ಭವ್ಯ ಸ್ವಾಗತವನ್ನು ಪಡೆದುಕೊಂಡಿದ್ದಾರೆ. ಇದೇ ಸಂದರ್ಭದಲ್ಲಿ ಪ್ರಧಾನಿ ಮೋದಿ ಹಾಗೂ ತಾಂಜಾನಿಯಾ ಅಧ್ಯಕ್ಷ ಜಾನ್ ಮಗುಫುಲಿ ಅವರ ಸಮ್ಮುಖದಲ್ಲಿ ಐದು ಪ್ರಮುಖ ಒಪ್ಪಂದಗಳಿಗೆ ಉಭಯ ದೇಶಗಳ ಪ್ರತಿನಿಧಿಗಳು ಸಹಿ ಹಾಕಿದ್ದಾರೆ.

ಭಾರತ ಸರ್ಕಾರದ ಬೆಂಬಲಿತ ಕಾರ್ಯಕ್ರಮದಡಿ ತಮ್ಮ ಹಳ್ಳಿಗಳಲ್ಲಿಯೇ ಮನೆಯ ಸೌರ ವಿದ್ಯುತ್ ದೀಪಗಳನ್ನು ಮತ್ತು ಸೌರಲಾಂದ್ರಗಳ ತಯಾರಿಕೆ, ಸ್ಥಾಪನೆ, ನಿರ್ವಹಣೆ ಮತ್ತು ದುರಸ್ತಿ ಮಾಡುವ ತರಬೇತಿ ಪಡೆದ ಆಫ್ರಿಕಾದ ಗ್ರಾಮೀಣ ಮಹಿಳಾ ಎಂಜಿನಿಯರುಗಳ ಸೋಲಾರ್ ಮಮಾಸ್ ಗುಂಪನ್ನು ನಾನು ಭೇಟಿ ಮಾಡಲಿದ್ದೇನೆ. ನಾನು ಭಾರತೀಯ ಸಮುದಾಯದೊಂದಿಗೂ ಮಾತುಕತೆ ನಡೆಸಲಿದ್ದೇನೆ ಎಂದು ಆಫ್ರಿಕಾ ಭೇಟಿಗೂ ಮುನ್ನ ಹೇಳಿಕೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು.[ಚಿತ್ರಗಳಲ್ಲಿ : ಆಫ್ರಿಕಾದಲ್ಲಿ ಪ್ರಧಾನಿ ನರೇಂದ್ರ ಮೋದಿ]

ಜಲ ಪೂರೈಕೆ ಮಹತ್ವದ ಒಪ್ಪಂದ : ಭಾರತದಿಂದ ತಾಂಜಾನಿಯಾದ ಝುಂಝಿಬಾರ್​ನಲ್ಲಿ ನೀರು ಸರಬರಾಜು ವ್ಯವಸ್ಥೆಗೆ 920 ಲಕ್ಷ ಡಾಲರ್ ನೆರವು ನೀಡಿಕೆ ಪ್ರಮುಖ ಒಪ್ಪಂದವಾಗಿದೆ. [ಮಹಾತ್ಮ ಗಾಂಧೀಜಿ ಹತ್ತಿದ ಟ್ರೇನ್ ನಲ್ಲಿ ಮೋದಿ ಸುತ್ತಾಟ]


ತಾಂಜಾನಿಯ ಅಧ್ಯಕ್ಷ ಜಾನ್ ಮಗುಫುಲಿ ಅವರ ಜೊತೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಹಲವು ಕ್ಷೇತ್ರಗಳಲ್ಲಿನ ಅಭಿವೃದ್ಧಿ ಬಗ್ಗೆ ಮಾತುಕತೆ ನಡೆಸಿದ ಬಳಿಕ ಉಭಯ ನಾಯಕರ ಸಮ್ಮುಖದಲ್ಲಿ ಮಹತ್ವದ ಒಪ್ಪಂದ ಪ್ರತಿಗಳನ್ನು ವಿನಿಮಯ ಮಾಡಿಕೊಳ್ಳಲಾಯಿತು.
ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪ್ರಧಾನಿ ಮೋದಿ

ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪ್ರಧಾನಿ ಮೋದಿ

‘ನಾನು ಮತ್ತು ಅಧ್ಯಕ್ಷ ಮಗುಫುಲಿ ಅವರು ಮುಖ್ಯವಾಗಿ ಸಾಗರಯಾನ ಕ್ಷೇತ್ರದಲ್ಲಿ ರಕ್ಷಣೆ ಮತ್ತು ಭದ್ರತಾ ಪಾಲುದಾರಿಕೆಯನ್ನು ಇನ್ನಷ್ಟು ಗಾಢಗೊಳಿಸಲು ಒಪ್ಪಿದ್ದೇವೆ. ದ್ವಿಪಕ್ಷೀಯವಾಗಿ, ಪ್ರಾದೇಶಿಕವಾಗಿ ಮತ್ತು ಜಾಗತಿಕವಾಗಿ ಭಯೋತ್ಪಾದನೆ ಮತ್ತು ಪರಿಸರ ಬದಲಾವಣೆ ಬೆದರಿಕೆಗಳನ್ನು ಎದುರಿಸುವ ನಿಟ್ಟಿನಲ್ಲಿ ನಿಕಟವಾಗಿ ದುಡಿಯಲು ನಾವು ಒಪ್ಪಿದ್ದೇವೆ' ಎಂದು ಹೇಳಿದರು.

ಉಭಯ ದೇಶಗಳ ನಡುವೆ ಪ್ರಮುಖ ಒಪ್ಪಂದಗಳು

ಉಭಯ ದೇಶಗಳ ನಡುವೆ ಪ್ರಮುಖ ಒಪ್ಪಂದಗಳು

* ಝಾಂಝಿಬಾರ್ ಪ್ರದೇಶದಲ್ಲಿ ನೀರು ಸರಬರಾಜು ವ್ಯವಸ್ಥೆಗಾಗಿ 92 ಮಿಲಿಯನ್ ಡಾಲರ್ ಸಾಲ ರೂಪದ ನೆರವು
* ಸಂಪನ್ಮೂಲ ನಿರ್ವಹಣೆ ಹಾಗೂ ಅಭಿವೃದ್ಧಿ
* ಸಾರ್ವಜನಿಕ ಆರೋಗ್ಯ ರಕ್ಷಣೆ, ಔಷಧ ಮತ್ತು ಔಷಧೋಪಕರಣ ಪೂರೈಕೆ ಸೇರಿದಂತೆ ಆರೋಗ್ಯ ರಕ್ಷಣೆಗೆ ಸಂಬಂಧಿಸಿದ ಆದ್ಯತೆ

ಸಣ್ಣ ಕೈಗಾರಿಕೆ ಕಾರ್ಪೊರೇಷನ್ ಸ್ಥಾಪನೆ

ಸಣ್ಣ ಕೈಗಾರಿಕೆ ಕಾರ್ಪೊರೇಷನ್ ಸ್ಥಾಪನೆ

* ಸಣ್ಣ ಕೈಗಾರಿಕೆ ಕಾರ್ಪೊರೇಷನ್ ಸ್ಥಾಪನೆ
* ವೀಸಾ ನಿಯಮ ಸಡಿಲಿಕೆ, ಮುಖ್ಯವಾಗಿ ರಾಯಭಾರಿ, ಕಚೇರಿ ವ್ಯವಹಾರ ಸಿಬ್ಬಂದಿಗಳಿಗೆ ಅನ್ವಯ.
ತಾಂಜಾನಿಯಾದ 17 ನಗರಗಳಿಗೆ ನೀರು ಪೂರೈಕೆ ಕಾರ್ಯಗಳಲ್ಲೂ ನೆರವಾಗುವ ನಿಟ್ಟಿನಲ್ಲಿ ನಾವು ಕಾರ್ಯನಿರತರಾಗಿದ್ದೇವೆ. ಇದಕ್ಕಾಗಿ ರಿಯಾಯ್ತಿ ದರದಲ್ಲಿ 5000 ಲಕ್ಷ ಡಾಲರ್ ಹೆಚ್ಚುವರಿ ಸಾಲ ಒದಗಿಸುವ ಬಗ್ಗೆ ಪರಿಶೀಲಿಸಲೂ ಭಾರತ ಬಯಸಿದೆ.

ಸೋಲಾರ್ ಮಮಾಸ್ ಭೇಟಿ

ಸೋಲಾರ್ ಮಮಾಸ್ ಭೇಟಿ

ಅಧ್ಯಕ್ಷ ಮಗುಫುಲಿ ಅವರನ್ನು ಭಾರತಕ್ಕೆ ಬರಮಾಡಿಕೊಳ್ಳಲು ನಾನು ಉತ್ಸುಕನಾಗಿದ್ದೇನೆ ಎಂದು ಮೋದಿ ಹೇಳಿದರು.

ಆಫ್ರಿಕಾದ ಗ್ರಾಮೀಣ ಮಹಿಳಾ ಎಂಜಿನಿಯರು

ಆಫ್ರಿಕಾದ ಗ್ರಾಮೀಣ ಮಹಿಳಾ ಎಂಜಿನಿಯರು

ಭಾರತ ಸರ್ಕಾರದ ಬೆಂಬಲಿತ ಕಾರ್ಯಕ್ರಮದಡಿ ತಮ್ಮ ಹಳ್ಳಿಗಳಲ್ಲಿಯೇ ಮನೆಯ ಸೌರ ವಿದ್ಯುತ್ ದೀಪಗಳನ್ನು ಮತ್ತು ಸೌರಲಾಂದ್ರಗಳ ತಯಾರಿಕೆ, ಸ್ಥಾಪನೆ, ನಿರ್ವಹಣೆ ಮತ್ತು ದುರಸ್ತಿ ಮಾಡುವ ತರಬೇತಿ ಪಡೆದ ಆಫ್ರಿಕಾದ ಗ್ರಾಮೀಣ ಮಹಿಳಾ ಎಂಜಿನಿಯರುಗಳ ಸೋಲಾರ್ ಮಮಾಸ್ ಗುಂಪನ್ನು ಭೇಟಿ ಮಾಡಿದ ಮೋದಿ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
India and Tanzania have signed five agreements across various sectors to strengthen their bilateral ties during Prime Minister Narendra Modi's visit to the country. Here are the five agreements signed by the two countries
Please Wait while comments are loading...