Plane Crash: 179 ಜನ ವಿಮಾನ ದುರಂತದಲ್ಲಿ ಬಲಿ? ದಕ್ಷಿಣ ಕೊರಿಯಾದಲ್ಲಿ ನೀರವ ಮೌನ
ವಿಮಾನ ಅಪಘಾತ, 181 ಜನರು ಪ್ರಯಾಣ ಮಾಡುತ್ತಿದ್ದ ವಿಮಾನ ಕ್ರಾಶ್ ಲ್ಯಾಂಡಿಂಗ್... ಅಂದಹಾಗೆ ಈ ರೀತಿ ಬೆಳ್ಳಂಬೆಳಗ್ಗೆ ಸುದ್ದಿ ಹರಡಿದ್ದೇ ತಡ ಇಡೀ ಪ್ರಪಂಚ ನಲುಗಿ ಹೋಗಿತ್ತು. ಯಾಕೆ ಅಂದ್ರೆ ದಕ್ಷಿಣ ಕೊರಿಯಾ ದೇಶದಲ್ಲಿ ಸಂಭವಿಸಿದ ಈ ವಿಮಾನ ದುರಂತವು ಇಡೀ ಜಗತ್ತಿನ ಅತ್ಯಂತ ಘೋರ ದುರಂತಗಳ ಪೈಕಿ ಒಂದಾಗಿದ್ದು, 2024ರ ಅತ್ಯಂತ ಕರಾಳ ವಿಮಾನ ಅಪಘಾತವೂ ಆಗಿದೆ. ಆರಂಭದಲ್ಲಿ 29 ಪ್ರಯಾಣಿಕರು ವಿಮಾನ ದುರಂತಕ್ಕೆ ಬಲಿಯಾಗಿದ್ದಾರೆ ಎನ್ನಲಾಗಿತ್ತು, ಆದರೆ ಈಗ ಹೊರಬಿದ್ದ ಸುದ್ದಿ ಹೃದಯಾಘಾತ ತರಿಸುವಂತೆ ಇದೆ.
ಹೌದು, ದಕ್ಷಿಣ ಕೊರಿಯಾ ದೇಶದಲ್ಲಿ ಇಂದು ಸಂಭವಿಸಿದ ಡೆಡ್ಲಿ ಪ್ಲೇನ್ ಕ್ರಾಶ್ ನೂರಾರು ಪ್ರಯಾಣಿಕರ ಜೀವ ತೆಗೆದಿದೆ. ಥೈಲ್ಯಾಂಡ್ ಮೂಲಕ ದಕ್ಷಿಣ ಕೊರಿಯಾಗೆ ಬಂದಿದ್ದ ವಿಮಾನ ಇನ್ನೇನು ಸುರಕ್ಷಿತವಾಗಿ ಲ್ಯಾಂಡ್ ಆಗಲಿದೆ ಬಿಡು ಅಂತಾನೇ ಎಲ್ಲರೂ ಅಂದುಕೊಂಡಿದ್ದರು. ಆದರೆ ನೋಡ ನೋಡುತ್ತಲೇ ಆಗಿದ್ದು ಬೇರೆ, ವಿಮಾನ ರನ್‌ವೇ ದಾಟಿ ಪಕಕ್ಕೆ ಹೋಗಿತ್ತು. ಹೀಗೆ ವಿಮಾನ ಸುರಕ್ಷಿತವಾಗಿ ಲ್ಯಾಂಡ್ ಆಗುವ ಬದಲು ಪೀಸ್ ಪೀಸ್ ಆಗಿತ್ತು.

ಒಂದೇ ವಾರದಲ್ಲಿ 2 ಭೀಕರ ಘಟನೆ
ಕೇವಲ ಒಂದೇ ವಾರದ ಅಂತರದಲ್ಲಿ, 2 ರಣಭೀಕರ ವಿಮಾನ ದುರಂತಗಳು ಸಂಭವಿಸಿವೆ. ಮೊನ್ನೆ ಮೊನ್ನೆ ಭೀಕರ ವಿಮಾನ ದುರಂತ ನೋಡಿ ನೊಂದಿದ್ದ ಜಗತ್ತಿಗೆ ಈಗ ಮತ್ತೊಂದು ಸ್ಫೋಟಕ ಸುದ್ದಿ ಸಿಕ್ಕಿದೆ. ಈ ಬಾರಿ ದಕ್ಷಿಣ ಕೊರಿಯಾ ದೇಶದಲ್ಲಿ ಭೀಕರ ವಿಮಾನ ದುರಂತ ಸಂಭವಿಸಿದ್ದು, 181 ಜನರು ಇದ್ದ ವಿಮಾನ ಕ್ರಾಶ್ ಲ್ಯಾಂಡಿಂಗ್ ಆಗಿದೆ. ಕೆಲ ದಿನಗಳ ಹಿಂದೆ ಕಝಕಿಸ್ತಾನ್ ದೇಶದಲ್ಲಿ ವಿಮಾನ ದುರಂತ ಸಂಭವಿಸಿ, 38 ಜನರು ಬಲಿಯಾಗಿದ್ದರು. ಇದೀಗ ದಕ್ಷಿಣ ಕೊರಿಯಾದ ದುರ್ಘಟನೆ 179 ಜನರನ್ನು ಬಲಿಪಡೆದಿದೆ.
181 ಜನರಲ್ಲಿ 179 ಜನರು ಬಲಿ?
ಲ್ಯಾಂಡಿಂಗ್ ಮಾಡುವ ಸಮಯದಲ್ಲಿ ರನ್‌ವೇ ಮೂಲಕ ಜಾರಿರುವ ದಕ್ಷಿಣ ಕೊರಿಯಾದ ಈ ವಿಮಾನ ನೇರ ರನ್‌ವೇ ಪಕ್ಕಕ್ಕೆ ಹೋಗಿ ಕ್ರಾಶ್ ಲ್ಯಾಂಡ್ ಆಗಿದೆ. 'ಜೆಜು ಏರ್ ಫ್ಲೈಟ್ 2216' ವಿಮಾನವು ಥೈಲ್ಯಾಂಡ್ ಮೂಲಕ ದಕ್ಷಿಣ ಕೊರಿಯಾಗೆ ಬರುತ್ತಿತ್ತು ಎನ್ನಲಾಗಿದೆ. ಆದರೆ ಈ ರೀತಿ ಥೈಲ್ಯಾಂಡ್ ಮೂಲಕ ದಕ್ಷಿಣ ಕೊರಿಯಾಗೆ ಬಂದು ಲ್ಯಾಂಡ್ ಆಗುವ ಸಮಯದಲ್ಲೇ ಭೀಕರ ದುರಂತ ಸಂಭವಿಸಿದೆ. ಮತ್ತೊಂದು ಕಡೆ 181 ಜನರಿದ್ದ ವಿಮಾನದಲ್ಲಿ 179 ಜನರು ಬಲಿಯಾಗಿದ್ದಾರೆ ಎನ್ನಲಾಗುತ್ತಿದ್ದು, ಭಯದ ವಾತಾವರಣ ನಿರ್ಮಾಣ ಆಗಿದೆ.












Click it and Unblock the Notifications