ಭೂಮಿ ಜತೆ ಶನಿ ಚಿತ್ರ ಸೂಪರೋ ಸೂಪರ್

ವಾಷಿಂಗ್ಟನ್, ನ.14: ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನಾಸಾ ಮೊತ್ತ ಮೊದಲ ಬಾರಿಗೆ ಶನಿ ಹಾಗೂ ಭೂ ಗ್ರಹಗಳ ಸ್ವಾಭಾವಿಕ ಬಣ್ಣದ ರೋಮಾಂಚಕಾರಿ ಚಿತ್ರಗಳನ್ನು ಬಿಡುಗಡೆ ಮಾಡಿದೆ. ಶನಿ ಗ್ರಹ, ಅದರ ಏಳು ಚಂದ್ರ ಹಾಗೂ ಉಂಗುರಗಳು, ಭೂಮಿ, ಶುಕ್ರ ಹಾಗೂ ಮಂಗಳ ಇವೆಲ್ಲವುಗಳ ಚಿತ್ರಗಳು ಸಾಮಾನ್ಯ ಕಣ್ಣುಗಳಿಗೆ ಕಾಣುವಂತಿದೆ.

ನಾಸಾ ಕ್ಯಾಸಿನಿ ಬಾಹ್ಯಾಕಾಶ ನೌಕೆಯು ಹೊಸ ಚಿತ್ರಗಳನ್ನು ತೆಗೆದಿದ್ದು, ಅವುಗಳನ್ನು ಮಾನವ ಕಣ್ಣುಗಳಿಂದ ಸ್ಪಷ್ಟವಾಗಿ ನೋಡಬಹುದಾಗಿದೆ ಮತ್ತು ಅವುಗಳನ್ನು ವಾಷಿಂಗ್ಟನ್ ನಲ್ಲಿರುವ ಮ್ಯೂಸಿಯಂನಲ್ಲಿ ಪ್ರದರ್ಶನಕ್ಕೆ ಇರಿಸಲಾಗಿದೆ. ಕ್ಯಾಸಿನಿಯ ಚಿತ್ರೀಕರಣ ತಂಡವು 141 ವೈಡ್ ಆಂಗಲ್ ಚಿತ್ರಗಳನ್ನು ಸಂಸ್ಕರಿಸಿ ಹೊಸ ದೃಶ್ಯಾವಳಿಯನ್ನು ರೂಪಿಸಲಾಗಿದೆ.

ಶನಿ ಹಾಗೂ ಅದರ ಒಳಭಾಗದಲ್ಲಿರುವ ಉಂಗುರಗಳ ಚಿತ್ರಗಳನ್ನು ಸುಮಾರು 6,51,591 ಕಿ.ಮೀ. ದೂರದಿಂದ ತೆಗೆಯಲಾಗಿದ್ದು, ಅವುಗಳಲ್ಲಿ ಶನಿಗ್ರಹದ ಅತ್ಯಂತ ಹೊರಭಾಗದಲ್ಲಿರುವ ಎರಡನೆಯ ಉಂಗುರವಾದ 'E' ಉಂಗುರದ ಚಿತ್ರವನ್ನೂ ಸ್ಪಷ್ಟವಾಗಿ ತೆಗೆಯಲಾಗಿದೆ.

ಗ್ರಹಾಂತರದಿಂದ ಮೊದಲ ಬಾರಿಗೆ ತೆಗೆಯಲಾದ ಈ ಬೆರಗು ಮೂಡಿಸುವ ಚಿತ್ರಗಳು ಜಗತ್ತಿನ ಗಮನ ಸೆಳೆದಿವೆ. ನಾಸಾವು ಬಿಡುಗಡೆಗೊಳಿಸಿರುವ ಚಿತ್ರಗಳಲ್ಲಿ ಎನ್ಸೆಲಾಡಸ್ ಸೇರಿದಂತೆ ಶನಿಯ ಏಳು ಚಂದ್ರರನ್ನೂ ಸ್ಪಷ್ಟವಾಗಿ ಗುರುತಿಸಬಹುದಾಗಿದೆ. ಶನಿ, ಭೂ ಗ್ರಹದ ಚಿತ್ರಗಳು ಮುಂದಿವೆ ನೋಡಿ...

ನಾಸಾ ಹೊರ ಹಾಕಿರುವ ಚಿತ್ರ

ನಾಸಾ ಹೊರ ಹಾಕಿರುವ ಚಿತ್ರ

ನಾಸಾ ಹೊರ ಹಾಕಿರುವ ಚಿತ್ರದಲ್ಲಿ ಭೂ ಗ್ರಹದ ಮೇಲೆ ಚಂದ್ರ ಅಸ್ತಮಾನಗೊಳ್ಳುವ ಸುಂದರ ಚಿತ್ರ

ನಾಸಾ ಟಿವಿ

ನಾಸಾ ಟಿವಿ

ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಲ್ಲಿ Canadarm 2 ಗೆ ಹೊಂದಿಕೊಂಡಿರುವ Cygnus ಆಕಾಶಕಾಯ ಚಿತ್ರ ಹೊರ ಹಾಕಿರುವ ನಾಸಾ ಟಿವಿ

ESA ಚಿತ್ರಗಳು

ESA ಚಿತ್ರಗಳು

ಯುರೋಪಿನ ಬಾಹ್ಯಾಕಾಶ ಸಂಸ್ಥೆ European Space Agency ESA ಕಳಿಸಿರುವ ಚಿತ್ರ

ಡ್ರ್ಯಾಗನ್ ಕ್ಯಾಪ್ಸುಲ್

ಡ್ರ್ಯಾಗನ್ ಕ್ಯಾಪ್ಸುಲ್

ಭೂಮಿ ಸುತ್ತ ಕಕ್ಷೆಯಲ್ಲಿರುವ ಸ್ಪೇಸ್ X ಡ್ರ್ಯಾಗನ್ ಕ್ಯಾಪ್ಸುಲ್.

ಉಪಗ್ರಹ

ಉಪಗ್ರಹ

ಭೂಮಿಯ ಸುತ್ತ ಸುತ್ತುತ್ತಿರುವ ಉಪಗ್ರಹ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+