ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಕ್ಷಣಾ ಕ್ಷೇತ್ರದಲ್ಲಿ ರಷ್ಯಾ ಭಾರತದ ಪಾಲುದಾರ : ಮೋದಿ

By Mahesh
|
Google Oneindia Kannada News

ಮಾಸ್ಕೊ, ಡಿ.24: ಎರಡು ದಿನಗಳ ರಷ್ಯಾ ಪ್ರವಾಸದಲ್ಲಿರುವ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕೆಂಪು ಹಾಸಿನ ಭರ್ಜರಿ ಸ್ವಾಗತ ಸಿಕ್ಕಿದೆ. ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರ ಖಾಸಗಿ ಔತಣಕೂಟದ ನಂತರ ಮಾತನಾಡಿದ ಮೋದಿ, 'ರಕ್ಷಣಾ ಕ್ಷೇತ್ರದಲ್ಲಿ ರಷ್ಯಾ ಭಾರತದ ಪಾಲುದಾರ' ಎಂದು ಹೇಳಿದ್ದಾರೆ.

ಕ್ರೆಮ್ಲಿನ್ ನಲ್ಲಿ ಪ್ರಧಾನಿ ಮೋದಿ ಅವರಿಗೆ ಪುಟಿನ್ ಅವರು ಖಾಸಗಿ ಔತಣಕೂಟ ಏರ್ಪಡಿಸಿದ್ದರು. ಇದು ಭಾರತ ಹಾಗೂ ರಷ್ಯಾ ನಡುವಿನ 16ನೇ ವಾರ್ಷಿಕ ದ್ವಿಪಕ್ಷೀಯ ಮಾತುಕತೆಯಾಗಿದೆ. [ಭಾರತದಲ್ಲೇ ಎಕೆ 47 ತಯಾರಿಸಲಾಗುತ್ತದೆ, ಏಕೆ?]

'ಮೇಕ್ ಇನ್ ಇಂಡಿಯಾ' ಉಪಕ್ರಮದಡಿ ಸುಧಾರಿತ ರಕ್ಷಣಾ ಸಾಧನಗಳ ಜಂಟಿ ಉತ್ಪಾದನೆಯಲ್ಲಿ ಎರಡು ವ್ಯೂಹಾತ್ಮಕ ಪಾಲುದಾರರು ಜೊತೆಗೂಡಿ ಶ್ರಮಿಸುತ್ತಿವೆ. ಹಲವು ದಶಕಗಳಿಂದಲೂ ರಶ್ಯವು ಭಾರತದ ಅತಿ ಪ್ರಮುಖ ರಕ್ಷಣಾ ಪಾಲುದಾರ ರಾಷ್ಟ್ರವಾಗಿದೆ. [ಪುಟಿನ್ ಭಾರತ ಭೇಟಿ ಉದ್ದೇಶವಾದರೂ ಏನು?]

ಪ್ರಸಕ್ತ ಸನ್ನಿವೇಶದಲ್ಲಿ ಕೂಡಾ ಜಾಗತಿಕ ಮಾರುಕಟ್ಟೆಗೆ ಭಾರತದ ಪ್ರವೇಶದಲ್ಲಿ ಉಂಟಾಗಿರುವ ಸುಧಾರಣೆಯ ಹೊರತಾಗಿಯೂ ರಷ್ಯಾ ನಮ್ಮ ಪ್ರಮುಖ ರಕ್ಷಣಾ ಪಾಲುದಾರ ರಾಷ್ಟ್ರವಾಗಿಯೇ ಉಳಿದಿದೆ ಎಂದು ಮೋದಿ ಹೇಳಿದ್ದಾರೆ. ರಷ್ಯಾ ಪ್ರವಾಸದ ಇತ್ತೀಚಿನ ಚಿತ್ರಗಳು ಇಲ್ಲಿವೆ...

ಎರಡು ದಿನಗಳ ರಷ್ಯಾ ಪ್ರವಾಸದಲ್ಲಿ ಮೋದಿ

ಎರಡು ದಿನಗಳ ರಷ್ಯಾ ಪ್ರವಾಸದಲ್ಲಿ ಮೋದಿ

ಎರಡು ದಿನಗಳ ರಷ್ಯಾ ಪ್ರವಾಸಕ್ಕಾಗಿ ನರೇಂದ್ರ ಮೋದಿಯವರು ಬುಧವಾರ ಸಂಜೆ ಮಾಸ್ಕೋ ವಿಮಾನ ನಿಲ್ದಾಣದಲ್ಲಿ ಬಂದಿಳಿದರು. ನಂತರ ರಷ್ಯಾದ ಸುದ್ದಿ ಸಂಸ್ಥೆ ಇಟಾರ್-ಟಾಸ್ ಗೆ ನೀಡಿದ ಸಂದರ್ಶನದ ಸಾರಾಂಶ ಮುಂದಿದೆ.

ಭಾರತಕ್ಕೆ ರಷ್ಯಾ ಸದಾ ನೆರವು ನೀಡಿದೆ: ಮೋದಿ

ಭಾರತಕ್ಕೆ ರಷ್ಯಾ ಸದಾ ನೆರವು ನೀಡಿದೆ: ಮೋದಿ

ಭಾರತದ ಸಂಕಷ್ಟದ ಪರಿಸ್ಥಿತಿಯಲ್ಲಿ ಇತರೆ ರಾಷ್ಟ್ರಗಳು ಹಿಂದೆ ಸರಿದಾಗ, ರಷ್ಯಾವೂ ರಕ್ಷಣಾ ಸಲಕರಣೆಗಳನ್ನು ಒದಗಿಸಿ ಸಹಕರಿಸಿದೆ. ರಷ್ಯಾ ನೀಡಿದ ಬೆಂಬಲವನ್ನು ಭಾರತ ಎಂದಿಗೂ ಮರೆಯುವುದಿಲ್ಲ ಎಂದರು.

ರಾಷ್ಟ್ರಗೀತೆ ನುಡಿಸುವಾಗ ಮೋದಿ ನಡಿಗೆ

ರಾಷ್ಟ್ರಗೀತೆ ನುಡಿಸುವಾಗ ಮೋದಿ ನಡಿಗೆ

ರಾಷ್ಟ್ರಗೀತೆ ನುಡಿಸುವಾಗ ಮೋದಿ ಅವರು ಗೌರವ ರಕ್ಷೆ ನೀಡವಾಗ ಸಾಗುವಂತೆ ನಡೆದಿದ್ದು ಈಗ ಚರ್ಚೆಗೆ ಗ್ರಾಸವಾಗಿದೆ. ರಾಷ್ಟ್ರಗೀತೆಗೆ ಅಗೌರವ ತೋರಿದ್ದಾರೆ ಎಂದು ವಿಪಕ್ಷಗಳು ಟೀಕಿಸಿವೆ.

ರಕ್ಷಣಾ ಸಂಶೋಧನೆಯಲ್ಲಿ ಉಭಯ ದೇಶ ಭಾಗಿ

ರಕ್ಷಣಾ ಸಂಶೋಧನೆಯಲ್ಲಿ ಉಭಯ ದೇಶ ಭಾಗಿ

ಬ್ರಹ್ಮೋಸ್ ಕ್ಷಿಪಣಿ, ಸುಖೊಯ್-30 ಎಂಕೆಐ ವಿಮಾನ ಹಾಗೂ ಟಿ-90 ಟ್ಯಾಂಕರ್‌ಗಳ ಉತ್ಪಾದನೆ ಹಾಗೂ ಅಭಿವೃದ್ಧಿಯಲ್ಲಿ ಉಭಯ ರಾಷ್ಟ್ರಗಳು ಭಾಗಿಯಾಗಿವೆ. ರಕ್ಷಣಾ ಕ್ಷೇತ್ರದಲ್ಲಿ ಭಾರತ-ರಶ್ಯ ಮಾರಾಟಗಾರ- ಖರೀದಿದಾರ ಸಂಬಂಧವು ಜಂಟಿ ಸಂಶೋಧನೆ, ಅಭಿವೃದ್ಧಿ ಹಾಗೂ ಸುಧಾರಿತ ಸಲಕರಣೆಗಳ ಉತ್ಪಾದನೆಗೆ ಕೈಜೋಡಿಸಿವೆ

ಪರಮಾಣು ಇಂಧನ ಸ್ಥಾವರ ಸ್ಥಾಪನೆ

ಪರಮಾಣು ಇಂಧನ ಸ್ಥಾವರ ಸ್ಥಾಪನೆ

ಜಗತ್ತಿನಲ್ಲೇ ಅತ್ಯಧಿಕ ಸುರಕ್ಷಾ ಕ್ರಮಗಳಿಂದ ಕೂಡಿದ ಕನಿಷ್ಠ 12 ಪರಮಾಣು ಇಂಧನ ಸ್ಥಾವರಗಳನ್ನು ರಷ್ಯಾದ ನೆರವಿನೊಂದಿಗೆ ಸ್ಥಾಪಿಸಲು ಭಾರತ ಬದ್ಧವಾಗಿದೆ ಎಂದು ನಾಗರಿಕ ಪರಮಾಣು ಸಹಕಾರ ವಿಷಯವನ್ನು ಪ್ರಸ್ತಾಪಿಸಿರುವ ಮೋದಿ ಹೇಳಿದರು.

ದ್ವಿಪಕ್ಷೀಯ ಸಂಬಂಧಗಳ ಬೆಳವಣಿಗೆ

ದ್ವಿಪಕ್ಷೀಯ ಸಂಬಂಧಗಳ ಬೆಳವಣಿಗೆ

ದ್ವಿಪಕ್ಷೀಯ ವಹಿವಾಟನ್ನು 2025ರ ವೇಳೆಗೆ 30 ಶತಕೋಟಿ ಡಾಲರ್‌ಗಳಿಗೆ ಏರಿಸಬೇಕಾಗಿದೆ. ಅದೇ ರೀತಿ ಈ ಅವಧಿಗೆ ನಮ್ಮ ಹೂಡಿಕೆ ಪ್ರಮಾಣವನ್ನು 15 ಶತಕೋಟಿ ಡಾಲರ್‌ಗಳಿಗೆ ಏರಿಸಬೇಕಾಗಿದೆ.

ವಿಪತ್ತು ನಿರ್ವಹಣಾ ಕೇಂದ್ರಕ್ಕೆ ಭೇಟಿ

ವಿಪತ್ತು ನಿರ್ವಹಣಾ ಕೇಂದ್ರಕ್ಕೆ ಭೇಟಿ

EMERCOM ಎಂದು ಹೆಸರಾಗಿರುವ ರಷ್ಯಾದ ವಿಪತ್ತು ನಿರ್ವಹಣಾ ಕೇಂದ್ರ(ಎನ್ ಸಿಎಂಸಿ) ಕ್ಕೆ ಮೋದಿ ಅವರು ಭೇಟಿ ನೀಡಿದರು. ಸುನಾಮಿ ಬಗ್ಗೆ ಎಚ್ಚರಿಕೆ, ನೈಸರ್ಗಿಕ ವಿಕೋಪಗಳು, ಕೈಗಾರಿಕಾ ವಿಕೋಪಗಳನ್ನು ತಡೆಗಟ್ಟುವ ಬಗ್ಗೆ ಮೋದಿ ಅವಲೋಕಿಸಿದರು.

English summary
Prime Minister Narendra Modi arrived here on a two-day visit during which he will attend the 16th India-Russia annual summit.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X