Get Updates
Get notified of breaking news, exclusive insights, and must-see stories!

China Military: ತೈವಾನ್ ಬಳಿಕ ಫಿಲಿಪೈನ್ಸ್ ಜೊತೆ ಚೀನಾ ಕಿರಿಕ್?

ಮನಿಲಾ: ಇದು ಯಾಕೋ ಸರಿಯಾಗ್ತಿಲ್ಲ, ದಕ್ಷಿಣ ಚೀನಾ ಸಮುದ್ರದಲ್ಲಿ ಪ್ರತಿನಿತ್ಯವೂ ಕಿರಿಕ್ ಮುಂದುವರಿದಿದೆ. ಅದರಲ್ಲೂ ಇಷ್ಟುದಿನ ಚೀನಾ ಮತ್ತು ತೈವಾನ್‌ಗೆ ಮಾತ್ರ ಸೀಮಿತವಾಗಿದ್ದ ಈ ಫೈಟಿಂಗ್ ದಿಢೀರ್ ಫಿಲಿಪೈನ್ಸ್ ಜೊತೆಗೂ ಶುರುವಾಗಿದೆ. ಚೀನಾ ಸೇನೆ ತನ್ನ ನೌಕೆಯ ಮೇಲೆ ದಾಳಿ ಮಾಡಿದೆ ಎಂದು ಫಿಲಿಪೈನ್ಸ್ ಗಂಭೀರ ಆರೋಪ ಮಾಡಿದೆ. ಹಾಗೇ ಚೀನಾ ಸೇನೆ ವಿರುದ್ಧ ಆರೋಪಿಸಿ ವಿಡಿಯೋ ಒಂದನ್ನ ರಿಲೀಸ್ ಮಾಡಿದೆ.

ದಕ್ಷಿಣ ಚೀನಾ ಸಮುದ್ರ ಪ್ರದೇಶ ಅಂದರೆ ಸದಾ ಹೊತ್ತಿ ಉರಿಯುವ ಕಲ್ಲಿದ್ದಲು. ಆ ಜಾಗ ನೆಮ್ಮದಿ ಕಾಣಲು ಇನ್ನೆಷ್ಟು ಶತಮಾನ ಉರುಳಬೇಕು ಅಂತಾ ಗೊತ್ತಿಲ್ಲ. ಅದರಲ್ಲೂ ಇಲ್ಲಿ ಕಳೆದ 4 ವರ್ಷದಿಂದ ಫೈಟಿಂಗ್ ಬಲು ಜೋರಾಗಿದೆ. ತೈವಾನ್ & ಚೀನಾ ಮಧ್ಯೆ ದೊಡ್ಡ ಮಟ್ಟದಲ್ಲಿ ಸಂಘರ್ಷ ನಡೆಯುತ್ತಿದೆ. ಈ ಸಮಯಕ್ಕೆ ಫಿಲಿಪೈನ್ಸ್ ಕೂಡ ಅಖಾಡ ಪ್ರವೇಶ ಮಾಡಿದ್ದು, ಚೀನಾದ ವಿರುದ್ಧ ಆರೋಪ ಮಾಡಿದೆ. ಹಾಗಾದರೆ ಚೀನಾ ಈಗ ಫಿಲಿಪೈನ್ಸ್ ಜೊತೆ ಕಿರಿಕ್ ತೆಗೆದಿದ್ದು ಯಾಕೆ? ಯಾವ ವಿಚಾರದಲ್ಲಿ ಎರಡೂ ದೇಶಗಳ ನಡುವೆ ಜಗಳ ಶುರುವಾಗಿದೆ? ಬನ್ನಿ ತಿಳಿಯೋಣ.

Philippines Coast Guard accuses that China attacks with Water Cannon on its Boats

ನಮ್ಮ ದ್ವೀಪದ ಸಹವಾಸಕ್ಕೆ ಬರಬೇಡಿ!

ಹೌದು, ದಕ್ಷಿಣ ಚೀನಾ ಸಮುದ್ರದಲ್ಲಿ ಇರುವ ಶೋಲ್ ದ್ವೀಪಕ್ಕಾಗಿ ಚೀನಾ & ಫಿಲಿಪೈನ್ಸ್ ನಡುವೆ ಬೆಂಕಿ ಹೊತ್ತಿದೆ. ಶೋಲ್ ದ್ವೀಪದಲ್ಲಿ ತನ್ನ ಸೇನಾ ತುಕಡಿಗೆ ಸರಕು ಸಾಗಿಸುವುದಕ್ಕೆ ಅಡ್ಡಿ ಮಾಡುವ ಪ್ರಯತ್ನವಾಗಿ ಚೀನಾ ಕರಾವಳಿ ಕಾವಲುಪಡೆ ಜಲಫಿರಂಗಿ ಬಳಸಿದೆ. ಹೀಗೆ ಅಪಾಯಕಾರಿಯಾಗಿ ವರ್ತಿಸಿದೆ ಎಂದು ಫಿಲಿಪೈನ್ಸ್ ಸೇನೆ ಆರೋಪ ಮಾಡಿದೆ. ಹಾಗೇ ಇದೇ ವೇಳೆ ಚೀನಾಗೆ ಸವಾಲು ಹಾಕಿರುವ ಫಿಲಿಪೈನ್ಸ್, ದಕ್ಷಿಣ ಚೀನಾ ಸಮುದ್ರದ ವಿವಾದಾತ್ಮಕ ಶೋಲ್ ದ್ವೀಪವನ್ನ ಬಿಟ್ಟುಕೊಡುವ ಪ್ರಶ್ನೆ ಇಲ್ಲ ಎಂದು ಸ್ಪಷ್ಟವಾಗಿ ಹೇಳಿದೆ. ಹೀಗೆ ಎರಡೂ ದೇಶಗಳ ನಡುವೆ ಹೊತ್ತಿದ್ದ ಕೆಂಡಕ್ಕೆ ಪೆಟ್ರೋಲ್ ಸುರಿದಂತಾಗಿದೆ.

ಫಿಲಿಪೈನ್ಸ್ ಜೊತೆ ಅಮೆರಿಕ ಜಂಟಿ ಸಮರಭ್ಯಾಸ!

ಇದೇ ವರ್ಷದ ಏಪ್ರಿಲ್ ತಿಂಗಳಲ್ಲಿ ಅಮೆರಿಕ ಸೇನೆ ಫಿಲಿಪೈನ್ಸ್ ಜತೆ ಸಮರಭ್ಯಾಸ ಮಾಡಿತ್ತು. 17,000 ಸೈನಿಕರು ಸಮರಭ್ಯಾಸದಲ್ಲಿ ಭಾಗವಹಿಸಿದ್ದರು. 12,000 ಸೈನಿಕರು ಅಮೆರಿಕದಿಂದ ಅಗಮಿಸಿದ್ದರು. ಇದೆಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುತ್ತಿದ್ದ ಚೀನಾ ತಕ್ಷಣ ಅಮೆರಿಕ ಸೇನೆಗೆ, ಅಮೆರಿಕದ ನಾಯಕರಿಗೆ ಖಡಕ್ ಸಂದೇಶ ಕೊಟ್ಟಿತ್ತು. ನಮ್ಮ ತಂಟೆಗೆ ಬಂದರೆ ನಾಶ ಎನ್ನುವ ರೀತಿ ಚೀನಾ ಉತ್ತರ ನೀಡಿತ್ತು. ಈ ಘಟನೆ ಬಳಿಕ ಎರಡೂ ದೇಶಗಳ ನಡುವೆ ಸಭೆ ಕೂಡ ನಡೆದಿತ್ತು. ಆದ್ರೆ ಈಗ ನೋಡಿದರೆ ಫಿಲಿಪೈನ್ಸ್ ಮತ್ತು ಚೀನಾ ನಡುವೆ ದೊಡ್ಡ ಕಿಚ್ಚು ಹೊತ್ತಿದಂತೆ ಕಾಣುತ್ತಿದೆ.

Philippines Coast Guard accuses that China attacks with Water Cannon on its Boats

ತೈವಾನ್ ಜೊತೆಗೂ ಫುಲ್ ಫೈಟಿಂಗ್!

ದಕ್ಷಿಣ ಚೀನಾ ಸಮುದ್ರ ಎಂದರೆ ಸಂಘರ್ಷದ ನಾಡಾಗಿದೆ. ಈ ಭಾಗಕ್ಕಾಗಿ ಚೀನಾ ಹಾಗೂ ಅಮೆರಿಕ ನಡುವೆ ಮುಸುಕಿನ ಗುದ್ದಾಟ ನಡೆಯುತ್ತಿದೆ. ಅದರಲ್ಲೂ ತೈವಾನ್ & ಅಮೆರಿಕ ಸ್ನೇಹ ಕಂಡು ಚೀನಾ ಪದೇ ಪದೆ ಎಚ್ಚರಿಕೆ ನೀಡುತ್ತಿದೆ. ಇದೇ ಪರಿಸ್ಥಿತಿಯಲ್ಲಿ ಅಮೆರಿಕದ ನಾಯಕರು ಕೂಡ ದಕ್ಷಿಣ ಚೀನಾ ಸಮುದ್ರದ ರಾಷ್ಟ್ರಗಳನ್ನು ಎತ್ತಿಕಟ್ಟುತ್ತಿದ್ದಾರೆ, ಚೀನಾ ವಿರುದ್ಧ ಸಂಚು ರೂಪಿಸುತ್ತಿದ್ದಾರೆ ಎಂಬ ಆರೋಪ ಕೂಡ ಇದೆ. ಇಷ್ಟೆಲ್ಲದರ ಮಧ್ಯೆ ಈಗ ಫಿಲಿಪೈನ್ಸ್ ಕೂಡ ಚೀನಾ ಜೊತೆ ಕಿರಿಕ್ ಮಾಡಿಕೊಂಡಂತೆ ಕಾಣುತ್ತಿದೆ. ಚೀನಾ ಸೇನೆಯು ತನ್ನ ಮೇಲೆ ದಾಳಿ ಮಾಡಿದೆ ಎಂದು ಆರೋಪಿಸಿದೆ.

ಒಟ್ನಲ್ಲಿ ಇದೆಲ್ಲಾ ಏನೇ ಇರಲಿ, ಜಗತ್ತಿಗೆ ಈ ಸಮಯದಲ್ಲಿ ಯುದ್ಧ ಬೇಕಾಗಿಲ್ಲ. ಹೀಗಾಗಿ ಒಗ್ಗಟ್ಟಿನ ಮಂತ್ರ ಜಪಿಸಬೇಕು ಎಂಬ ಒತ್ತಾಯ ಕೇಳಿಬಂದಿದೆ. ದಕ್ಷಿಣ ಚೀನಾ ಸಮುದ್ರದ ವಿಚಾರವಾಗಿ ಸೂಕ್ತ ಚರ್ಚೆ ಹಾಗೂ ಸಂಧಾನ ನಡೆಯಲಿ ಎಂಬ ಒತ್ತಾಯ ಕೇಳಿಬರುತ್ತಿದೆ. ಆದರೆ ಆಗ್ರಹಕ್ಕೆ ಮನ್ನಣೆ ಸಿಗುತ್ತಾ? ಅಥವಾ ಈ ತಿಕ್ಕಾಟವು ಹೀಗೆ ಮುಂದುವರಿಯುತ್ತಾ? ಅಂತಾ ಕಾದು ನೋಡಬೇಕಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+