ತೆಹರಾನ್ ವಿಮಾನ ದುರಂತದ ಚಿತ್ರಗಳು
ತೆಹರಾನ್, ಆ.10: ಲಘು ಪ್ರಯಾಣಿಕರ ವಿಮಾನವೊಂದು ವಸತಿ ಸಮುಚ್ಚಯಕ್ಕೆ ಡಿಕ್ಕಿ ಹೊಡೆದ ದುರ್ಘಟನೆ ಭಾನುವಾರ ಸಂಭವಿಸಿದೆ. ಡಿಕ್ಕಿ ಹೊಡೆದ ವಿಮಾನ ಹೊತ್ತಿ ಉರಿದಿದ್ದು, ಪ್ರಯಾಣಿಕರೆಲ್ಲರ ಸುಟ್ಟು ಕರಕಲಾದ ದಾರುಣ ಘಟನೆ ನಡೆದಿದೆ.
ತೆಹರಾನ್ ನ ವಸತಿ ಸಮುಚ್ಚಯಕ್ಕೆ ಇರಾನ್ 141 ತಬಾನ್ ಏರ್ ವಿಮಾನ ಭಾನುವಾರ ಬೆಳಗ್ಗೆ ವಿಮಾನ ನಿಲ್ದಾಣದಿಂದ ಟೇಕಾಫ್ ಆದ ಕೆಲ ಕ್ಷಣಗಳಲ್ಲೇ ನಿಯಂತ್ರಣ ಕಳೆದುಕೊಂಡಿದೆ. ವಿಮಾನದ ಸಮತೋಲನ ಕಾಯ್ದುಕೊಳ್ಳಲು ಪೈಲಟ್ ಗಳು ಮಾಡಿದ ಪ್ರಯತ್ನ ವ್ಯರ್ಥವಾಗಿ ಸಮೀಪದ ವಸತಿ ಸಮುಚ್ಚಯಕ್ಕೆ ಡಿಕ್ಕಿ ಹೊಡೆದಿದೆ.
ವಿಮಾನ ಡಿಕ್ಕಿ ಹೊಡೆದ ಪರಿಣಾಮ ಇಂಜಿನ್ ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ವಿಮಾನ ಹೊತ್ತಿ ಉರಿದಿದೆ. ಈ ವಿಮಾನದಲ್ಲಿ ಸುಮಾರು 40 ಮಂದಿ ಪ್ರಯಾಣಿಕರಿದ್ದರು. ಎಲ್ಲರೂ ಬೆಂಕಿಗೆ ಆಹುತಿಯಾಗಿರುವ ಶಂಕೆ ವ್ಯಕ್ತವಾಗಿದೆ ಎಂದು ಸ್ಥಳೀಯ ಟಿವಿ ಸುದ್ದಿ ಪ್ರಸಾರ ಮಾಡಿದೆ. ಆದರೆ, ಈ ಬಗ್ಗೆ ಅಧಿಕೃತ ಮಾಹಿತಿ ಇನ್ನೂ ಹೊರ ಬಿದ್ದಿಲ್ಲ. ಇರಾನ್ 141 ಲಘು ವಿಮಾನ ಉಕ್ರೇನಿನ ತಂತ್ರಜ್ಞಾನ ಬಳಸಿ ತಯಾರಿಸಲಾದ ವಿಮಾನವಾಗಿದೆ.

ವಸತಿ ಸಮುಚ್ಚಯಕ್ಕೆ ಡಿಕ್ಕಿ ಹೊಡೆದ ವಿಮಾನ
ಲಘು ಪ್ರಯಾಣಿಕರ ವಿಮಾನವೊಂದು ವಸತಿ ಸಮುಚ್ಚಯಕ್ಕೆ ಡಿಕ್ಕಿ ಹೊಡೆದ ದುರ್ಘಟನೆ ಭಾನುವಾರ ಸಂಭವಿಸಿದೆ. ಡಿಕ್ಕಿ ಹೊಡೆದ ವಿಮಾನ ಹೊತ್ತಿ ಉರಿದಿದ್ದು, ಪ್ರಯಾಣಿಕರೆಲ್ಲರ ಸುಟ್ಟು ಕರಕಲಾದ ದಾರುಣ ಘಟನೆ ನಡೆದಿದೆ.
|
ಸ್ಥಳೀಯರಿಂದ ದುರಂತದ ಮೊದಲ ಚಿತ್ರಗಳು
ಸ್ಥಳೀಯರಿಂದ ದುರಂತದ ಮೊದಲ ಚಿತ್ರಗಳು ಟ್ವಿಟ್ಟರ್ ಮೂಲಕ ಹೊರ ಹಾಕಲಾಗಿದೆ.
|
ವಿಮಾನದ ತುಂಡಾದ ಒಂದು ಭಾಗದ ಚಿತ್ರ
ವಿಮಾನದ ತುಂಡಾದ ಒಂದು ಭಾಗದ ಚಿತ್ರ ಇಲ್ಲಿದೆ ನೋಡಿ
|
ದುರಂತದ ಸುದ್ದಿ ಖಚಿತಪಡಿಸಿದ ಮಾಧ್ಯಮಗಳು
ದುರಂತದ ಸುದ್ದಿಯನ್ನು ತ್ವರಿತವಾಗಿ ಟ್ವೀಟ್ ಮಾಡಿ ಖಚಿತಪಡಿಸಿದ ಸ್ಥಳೀಯ ಮಾಧ್ಯಮಗಳು
|
ವಿಮಾನ ದುರಂತ ಚಿತ್ರ ಏರ್ ಲೈವ್
ವಿಮಾನ ದುರಂತ ಚಿತ್ರ ಟ್ವೀಟ್ ಮಾಡಿದ ಏರ್ ಲೈವ್ ನೆಟ್












Click it and Unblock the Notifications