• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಪಂಜ್‌ಶೀರ್‌ ಕಣಿವೆಯಲ್ಲಿ ತೀವ್ರವಾದ ತಾಲಿಬಾನ್ ವಿರೋಧಿ ಸಂಘರ್ಷ

|
Google Oneindia Kannada News

ಕಾಬೂಲ್‌, ಸೆಪ್ಟೆಂಬರ್ 01: ಅಫ್ಘಾನಿಸ್ತಾನವನ್ನು ಸಂಪೂರ್ಣವಾಗಿ ತಾಲಿಬಾನ್ ವಶಪಡಿಸಿಕೊಂಡಿದೆ ಆದರೂ ಪಂಜಶೀರ್ ಪ್ರದೇಶವನ್ನು ಆಕ್ರಮಿಸಿಕೊಳ್ಳುವಲ್ಲಿ ಸೋತಿದೆ.

ಇದೀಗ ಪಂಜ್‌ಶೀರ್‌ನಲ್ಲಿ ತಾಲಿಬಾನ್ ವಿರುದ್ಧ ಸಂಘರ್ಷ ಶುರುವಾಗಿದೆ. ಪಂಜ್‌ಶೀರ್‌ ಬಿಕ್ಕಟ್ಟಿನ ಕುರಿತು ಟ್ವೀಟ್ ಮಾಡಿರುವ ಹಿರಿಯ ತಾಲಿಬಾನ್ ಅಧಿಕಾರಿ ಅಮಿರ್ ಖಾನ್ ''ನನ್ನ ಸಹೋದರರೇ, ಮಾತುಕತೆಯ ಮೂಲಕ ಪಂಜ್‌ಶೀರ್‌ ಸಮಸ್ಯೆಯನ್ನು ಪರಿಹರಿಸಿಕೊಳ್ಳಲು ನಮ್ಮ ಕೈಲಾದಷ್ಟು ಪ್ರಯತ್ನಿಸಿದೆವು. ಆದರೆ ದುರದೃಷ್ಟವಶಾತ್ ಎಲ್ಲವೂ ವ್ಯರ್ಥವಾಯಿತು ಎಂದು ತಿಳಿಸಿದ್ದಾರೆ.

ರಾಷ್ಟ್ರೀಯ ಪ್ರತಿರೋಧ ಪಡೆಯ ಹೋರಾಟಗಾರರು ತಾಲಿಬಾನ್ ಉಗ್ರರನ್ನು ಗುರಿಯಾಗಿಸಿ ಪ್ರತಿದಾಳಿಯನ್ನು ನಡೆಸುತ್ತಲೇ ಇದ್ದಾರೆ. ಪತನಗೊಂಡಿರುವ ಅಫ್ಘಾನ್ ಭದ್ರತಾ ಪಡೆ ಮತ್ತು ತಾಲಿಬಾನ್ ವಿರೋಧಿ ಹೋರಾಟಗಾರರು ಒಂದಾಗಿರುವ ಹಿನ್ನೆಲೆಯಲ್ಲಿ ಸಶಸ್ತ್ರ ಸಂಘರ್ಷ ತೀವ್ರಗೊಳ್ಳುತ್ತಲೇ ಇದೆ.

ಈಗ ಮಾತುಕತೆ ವಿಫಲವಾಗಿದೆ ಮತ್ತು ಪಂಜ್‌ಶೀರ್‌ ಅನ್ನು ಮುಜಾಹಿದ್ದೀನ್ ಸುತ್ತುವರೆದಿದ್ದಾನೆ. ಶಾಂತಿಯುತ ರೀತಿಯಲ್ಲಿ ಸಮಸ್ಯೆಗಳನ್ನು ಪರಿಹರಿಸಲು ಬಯಸದ ಜನರು ಇನ್ನೂ ಒಳಗಾಗಿದ್ದಾರೆ.

ಪತನಗೊಂಡ ಸರ್ಕಾರದಲ್ಲಿ ರಕ್ಷಣಾ ಸಚಿವರಾಗಿದ್ದ ಬಿಸ್ಮಿಲ್ಲಾ ಮೊಹಮ್ಮದಿ ಅವರು ಪಂಜ್‌ಶೀರ್‌ಮೇಲೆ ಮಂಗಳವಾರ ರಾತ್ರಿ ತಾಲಿಬಾನ್ ಮತ್ತೆ ದಾಳಿ ನಡೆಸಿದೆ.

ತಮ್ಮ ಪಾಲಿಗೆ ಸಿಂಹಸ್ವಪ್ನವಾಗಿರುವ ಪಂಜ್‌ಶೀರ್‌ ಪ್ರಾಂತ್ಯಕ್ಕೆ ಇಂಟರ್‌ನೆಟ್‌ ಹಾಗೂ ದೂರವಾಣಿ ಸಂಪರ್ಕವನ್ನು ತಾಲಿಬಾನ್‌ ಕಡಿತಗೊಳಿಸಿದೆ. ಈ ಮೂಲಕ ಪಂಜ್‌ಶೀರ್‌ ಪ್ರಾಂತ್ಯದಿಂದ ಯಾವುದೇ ಮಾಹಿತಿ ಹೊರ ಜಗತ್ತಿಗೆ ತಿಳಿಯದಂತೆ ಮಾಡುವಲ್ಲಿ ತಾಲಿಬಾನ್‌ ಯಶಸ್ವಿಯಾಗಿದೆ.

ಪಂಜ್‌ಶೀರ್‌ ಪ್ರಾಂತ್ಯದಲ್ಲಿ ವಿರೋಧಿ ಪಡೆಗಳ ಮಧ್ಯೆ ಇಂಟರ್‌ನೆಟ್‌ ಮೂಲಕ ನಡೆಯುತ್ತಿರುವ ಸಂದೇಶ ವಿನಿಯವನ್ನು ತಡೆಯುವುದು ಹಾಗೂ ಟ್ವೀಟರ್‌ ಹಾಗೂ ಜನರು ಜಾಲತಾಣಗಳನ್ನು ಬಳಸದಂತೆ ನೋಡಿಕೊಳ್ಳಲು ತಾಲಿಬಾನ್‌ ಈ ಕ್ರಮ ಕೈಗೊಂಡಿದೆ ಎಂದು ಮೂಲಗಳು ತಿಳಿಸಿವೆ.

ಆಫ್ಘನ್‌ ಬಂಡಾಯ ಕಮಾಂಡರ್‌ ಅಹ್ಮದ್‌ ಶಾ ಮಸೌದ್‌ ಅವರ ಪುತ್ರ ಅಹ್ಮದ್‌ ಮಸೌದ್‌ ಅವರ ಜತೆಯೇ ಮಾಜಿ ಉಪಾಧ್ಯಕ್ಷ ಅಮ್ರುಲ್ಲಾ ಸಲೇಹ್‌ ಪಂಜ್‌ಶೀರ್‌ನಲ್ಲಿ ನೆಲೆಸಿದ್ದಾರೆ. ಟ್ವೀಟರ್‌ನಲ್ಲಿ ಸಕ್ರಿಯವಾಗಿರುವ ಮಾಜಿ ಉಪಾಧ್ಯಕ್ಷ ಅಮ್ರುಲ್ಲಾ ಸಹೇಹ್‌, ತಾಲಿಬಾನ್‌ ವಿರುದ್ಧ ನಿರಂತರ ಟ್ವಿಟ್‌ಗಳನ್ನು ಮಾಡುತ್ತಿದ್ದಾರೆ. ಇದು ತಾಲಿಬಾನಿಗಳಿಗೆ ತಲೆನೋವಾಗಿ ಪರಿಣಮಿಸಿದೆ.

ಹೀಗಾಗಿ ಅಮ್ರುಲ್ಲಾ ಅವರ ಟ್ವೀಟ್‌ಗೆ ಕಡಿವಾಣ ಹಾಕಲು ಮತ್ತು ಕಾಬೂಲ್‌ ವಿಮಾನ ನಿಲ್ದಾಣದ ಬಳಿ ಸಂಭವಿಸಿದ ಬಾಂಬ್‌ ಸ್ಫೋಟಕ್ಕೆ ಸಂಬಂಧಿಸಿದಂತೆ ಹೇಳಿಕೆ ನೀಡುವುದನ್ನು ತಡೆಯಲು ತಾಲಿಬಾನ್‌ ಬಯಸಿದೆ. ಜೊತೆಗೆ ಸಂವಹನವನ್ನು ತಡೆದರೆ ಪಂಜ್‌ಶೀರ್‌ ಮೇಲೆ ದಾಳಿ ಮಾಡುವುದು ಸುಲಭ ಎಂದು ತಾಲಿಬಾನ್‌ ಭಾವಿಸಿದೆ. ಹೀಗಾಗಿ ಸಂಪೂರ್ಣ ಪ್ರಾಂತ್ಯಕ್ಕೆ ಫೋನ್‌ ಹಾಗೂ ಇಂಟರ್‌ನೆಟ್‌ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

English summary
Clashes between the Taliban and National Resistance Front are taking place in parts of Panjshir province, local reports said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X