ಭಾರತದ ಮಿರಾಜ್ ಫೈಟರ್ ದಾಳಿ ಭೀತಿಗೆ ಬೆಚ್ಚಿಬಿದ್ದ ಕರಾಚಿ: ಅಸಲಿಗೆ ನಡೆದಿದ್ದೇನು?
ಭಾರತದ ಯುದ್ದ ವಿಮಾನಗಳು ಗಡಿ ನಿಯಂತ್ರಣ ಪ್ರದೇಶವನ್ನು ದಾಟಿ ಪಾಕಿಸ್ತಾನದಲ್ಲಿ ಗಸ್ತು ತಿರುಗುತ್ತಿವೆ ಎನ್ನುವ ಸುದ್ದಿಗೆ ಪಾಕಿಸ್ತಾನದ ಪ್ರಮುಖ ವಾಣಿಜ್ಯ ನಗರ ಕರಾಚಿ ಅಕ್ಷರಸಃ ಬೆಚ್ಚಿಬಿದ್ದ ಘಟನೆ ನಡೆದಿದೆ.
Recommended Video
ಮಂಗಳವಾರ (ಜೂನ್ 11) ರಾತ್ರಿ, ಭಾರತೀಯ ವಾಯುಪಡೆಯ ಫೈಟರ್ ಜೆಟ್ ಗಳು ಮತ್ತೊಮ್ಮೆ ನಿಯಂತ್ರಣ ರೇಖೆಯನ್ನು (ಎಲ್‌ಒಸಿ) ದಾಟಿ ಕರಾಚಿ ಮಹಾನಗರದ ಆಕಾಶದ ಮೇಲೆ ಸುಳಿದಾಡುತ್ತಿವೆ ಎನ್ನುವ ಸುದ್ದಿ ಸಾಮಾಜಿಕ ತಾಣದಲ್ಲಿ ಹರಿದಾಡಲಾರಂಭಿಸಿತು.
ಮೊದಲೇ, ಗಡಿಯಲ್ಲಿ ಉಗ್ರರರನ್ನು ಸದೆಬಡಿಯುವ ಕೆಲಸ ಜೋರಾಗಿರುವ ನಡೆಯುತ್ತಿರುವ ಈ ಹೊತ್ತಿನಲ್ಲಿ, ಸಾಮಾಜಿಕ ತಾಣದಲ್ಲಿ ಹರಿದಾಡಿದ ಸುದ್ದಿಗೆ ಕರಾಚಿಯ ಜನತೆ ಮತ್ತು ಪಾಕಿಸ್ತಾನದ ಮಿಲಿಟರಿ ಹೌಹಾರಿತು.
ಕರಾಚಿಯ ನಿವಾಸಿಯೊಬ್ಬರು ರಾತ್ರಿ ಹೊತ್ತು ಹಾರಾಡುತ್ತಿದ್ದ ಯುದ್ದವಿಮಾನದ ವಿಡಿಯೋವನ್ನು ಟ್ವಿಟ್ಟರ್ ನಲ್ಲಿ ಶೇರ್ ಮಾಡಿರುವುದು ದೊಡ್ಡ ಆವಾಂತರಕ್ಕೆ ಕಾರಣವಾಯಿತು. ಪಾಕಿಸ್ತಾನ ಈ ಸುದ್ದಿಗೆ ತಲ್ಲಣಗೊಂಡಿತು. ಮುಂದೆ ಓದಿ..

ಭಾರತದ ವಾಯುಪಡೆಯ ಮಿರಾಜ್ ಫೈಟರ್
ಪಾಕಿಸ್ತಾನದ ಸಿಂಧ್ ಮತ್ತು ಕರಾಚಿ ಪ್ರದೇಶದ ಬಾನಂಗಣದಲ್ಲಿ, ಭಾರತದ ವಾಯುಪಡೆಯ ಮಿರಾಜ್ ಫೈಟರ್ ಗಳು ಗಸ್ತು ತಿರುಗುತ್ತಿವೆ ಎನ್ನುವ ಒಕ್ಕಣೆ ಬರೆದು, ವಿಡಿಯೋ ಸಮೇತ ಟ್ವಿಟ್ಟರ್ ನಲ್ಲಿ ಹಾಕಲಾಗಿದ್ದ ಪೋಸ್ಟ್ ಇಷ್ಟೆಲ್ಲಾ ಆವಾಂತರಕ್ಕೆ ಕಾರಣವಾಯಿತು.

ಬಾಲಕೋಟ್ ಸರ್ಜಿಕಲ್ ಸ್ಟ್ರೈಕ್
ಭಾರತದಿಂದ ಇನ್ನೊಂದು ಬಾಲಕೋಟ್ ಸರ್ಜಿಕಲ್ ಸ್ಟ್ರೈಕ್ ಎಂದೇ ಕರಾಚಿ ಜನರು ಭಯಭೀತರಾದರು. ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಾ ಸಾಗಿದ ಈ ಸುದ್ದಿಯಿಂದ, ಪಾಕಿಸ್ತಾನದ ಅಧಿಕಾರಿಗಳೂ ಬೆಚ್ಚಿಬಿದ್ದರು. ಮುಂಜಾಗೃತಾ ಕ್ರಮವಾಗಿ ಇಡೀ ಕರಾಚಿ ನಗರಕ್ಕೆ ವಿದ್ಯುತ್ ಸರಬರಾಜು ನಿಲ್ಲಿಸಲಾಯಿತು.

ಗಾಬರಿಗೊಂಡ ಕರಾಚಿವಾಸಿಗಳು
ವಿದ್ಯುತ್ ನಿಲ್ಲಿಸಿದ್ದರಿಂದ ಮತ್ತಷ್ಟು ಗಾಬರಿಗೊಂಡ ಕರಾಚಿವಾಸಿಗಳು ಮನೆಯೊಳಗೆ ಸೇರಿಕೊಂಡರು. ಇಷ್ಟೆಲ್ಲಾ ಆವಾಂತರ ಆದ ಮೇಲೆ, ಪಾಕಿಸ್ತಾನದ ಪತ್ರಕರ್ತರೊಬ್ಬರು, ಬಾನಂಗಣದಲ್ಲಿ ಹಾರಾಡುತ್ತಿದ್ದದ್ದು ಭಾರತದ ವಿಮಾನಗಳಲ್ಲ, ಪಾಕಿಸ್ತಾನದ ವಿಮಾನಗಳು ಎಂದು ಸ್ಪಷ್ಟನೆ ನೀಡಿದ ಮೇಲೆ, ಕರೆಂಟ್ ವಾಪಸ್ ಬಂತು, ಪರಿಸ್ಥಿತಿ ತಿಳಿಯಾಯಿತು.

ಪಾಕ್ ಬೆಚ್ಚಿಬಿದ್ದದ್ದು ವ್ಯಾಪಕ ಅಪಹಾಸ್ಯಕ್ಕೆ
ಈ ಘಟನೆ, ಕಳೆದ ವರ್ಷದ ಫೆಬ್ರವರಿಯಲ್ಲಿ ಉಗ್ರ ಶಿಬಿರಗಳ ಮೇಲೆ ದಾಳಿ ನಡೆದ ಘಟನೆ ಮತ್ತೆ ನೆನಪಿಸುವಂತಾಯಿತು ಎಂದು ಪಾಕ್ ವ್ಯಕ್ತಿಯೊಬ್ಬರು ಟ್ವಿಟ್ಟರ್ ನಲ್ಲಿ ತಮ್ಮ ಅನುಭವ ಹಂಚಿಕೊಂಡಿದ್ದಾರೆ. ಸುಳ್ಳುಸುದ್ದಿಗೆ ಪಾಕ್ ಬೆಚ್ಚಿಬಿದ್ದದ್ದು ವ್ಯಾಪಕ ಅಪಹಾಸ್ಯಕ್ಕೆ ಈಡಾಯಿತು.












Click it and Unblock the Notifications