ತಲೆಬುಡ ಇಲ್ಲದ ಆರೋಪ: ಟ್ರಂಪ್ ವಿರುದ್ಧ ರೊಚ್ಚಿಗೆದ್ದ ಪನಾಮ ಅಧ್ಯಕ್ಷ!
ಡೊನಾಲ್ಡ್ ಟ್ರಂಪ್ ಅಮೆರಿಕದಲ್ಲಿ ಅಧಿಕಾರ ವಹಿಸಿಕೊಳ್ಳುವ ಮೊದಲೇ ನೂರಾರು ವಿವಾದ ಮೈಮೇಲೆ ಎಳೆದುಕೊಂಡು ಕೂತಿದ್ದಾರೆ. ಅದರಲ್ಲೂ ಅಮೆರಿಕದ ಅಕ್ಕಪಕ್ಕದ ದೇಶಗಳನ್ನೂ ಎದುರು ಹಾಕಿಕೊಂಡು, ತಮ್ಮ ಹೇಳಿಕೆ ಮೂಲಕ ಸಂಚಲನ ಸೃಷ್ಟಿ ಮಾಡುತ್ತಿದ್ದಾರೆ. ಈ ಪೈಕಿ ಪನಾಮ ಕಾಲುವೆ ವಿಚಾರದಲ್ಲಿ ಚೀನಾ ದೇಶವನ್ನು ಅಡ್ಡ ಎಳೆದು ತಂದ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ, ಪನಾಮ ದೇಶದ ಅಧ್ಯಕ್ಷರು ಕೊಟ್ಟ ಉತ್ತರ ಹೇಗಿತ್ತು ಗೊತ್ತೆ?
ಪನಾಮ ಕಾಲುವೆ & ಸೂಯೆಜ್ ಕಾಲುವೆ ಜಗತ್ತಿನ ರಕ್ತನಾಳ ಇದ್ದಂತೆ. ಯಾಕಂದ್ರೆ ಹೀಗೆ ಈ 2 ಕಾಲುವೆಗಳ ಮೂಲಕ ವಸ್ತುಗಳನ್ನು ಸಾಗಾಟ ಮಾಡುತ್ತಾ ಲಕ್ಷಾಂತರ ಕೋಟಿ ರೂಪಾಯಿ ಪ್ರತಿ ವರ್ಷ ಉಳಿತಾಯ ಮಾಡುತ್ತವೆ ಸರ್ಕಾರಗಳು. ಹೀಗಿದ್ದಾಗಲೇ, ಪನಾಮ ಕಾಲುವೆ ದಕ್ಷಿಣ ಅಮೆರಿಕ & ಉತ್ತರ ಅಮೆರಿಕದ ಪಾಲಿಗೆ ಅತ್ಯಂತ ಮುಖ್ಯವಾದ ಭಾಗ ಎನ್ನಬಹುದು.

ಮಧ್ಯ ಅಮೆರಿಕ ಭಾಗದಲ್ಲಿ ಬರುವ ಪನಾಮ ಕಾಲುವೆ ಬಳಸಿ ಸಾವಿರಾರು ಕಿಲೋ ಮೀಟರ್ ಸುತ್ತಿ ಬರುವುದನ್ನ ಉಳಿಸುತ್ತವೆ ಹಡಗುಗಳು. ಪನಾಮ ದೇಶ ಕೂಡ ಈ ಕಾಲುವೆ ಮೂಲಕ ಪ್ರತಿವರ್ಷ ಸಾವಿರಾರು ಕೋಟಿ ರೂಪಾಯಿ ಹಣ ದುಡಿಯುತ್ತೆ. ಆದರೆ ಕೆಲವು ದಿನಗಳಿಂದ ಈ ಕಾಲುವೆ ಮೇಲೆ ಟ್ರಂಪ್ ಅವರ ಕಣ್ಣು ಬಿದಿದ್ದು ಅಲ್ಲೋಲ ಕಲ್ಲೋಲ ಸೃಷ್ಟಿ ಮಾಡಿದೆ.
ಟ್ರಂಪ್ ವಿರುದ್ಧ ಪನಾಮ ಗರಂ!
ಕೆಲವು ದಿನಗಳ ಹಿಂದೆ ಡೊನಾಲ್ಡ್ ಟ್ರಂಪ್ ಅವರು ಪನಾಮ ಕಾಲುವೆಯ ಅಧಿಕಾರ ನಮಗೆ ಬಿಟ್ಟುಕೊಡಿ ಅನ್ನುವ ರೀತಿಯಲ್ಲೇ ಮಾತನಾಡಿದ್ದರು. ಈ ವಿವಾದ ತಣ್ಣಗಾಗುವ ಮೊದಲೇ ಮತ್ತೆ ಬಾಯಿಬಿಟ್ಟರು ಡೊನಾಲ್ಡ್ ಟ್ರಂಪ್, 2ನೇ ಬಾರಿಗೆ ಮತ್ತೊಂದು ಗಂಭೀರ ಆರೋಪ ಮಾಡಿದ್ದರು ಟ್ರಂಪ್. ಅಂದಹಾಗೆ ಪನಾಮ ಕಾಲುವೆ ನಿರ್ವಹಣೆ ಚೀನಾ ಸೈನಿಕರ ಕೈಯಲ್ಲಿ ಇದೆ ಎಂಬ ಆರೋಪ ಮಾಡಿದ್ದರು ಡೊನಾಲ್ಡ್ ಟ್ರಂಪ್.
ತಲೆಬುಡ ಇಲ್ಲದ ಆರೋಪ!
ಡೊನಾಲ್ಡ್ ಟ್ರಂಪ್ ಅವರ ಮಾತಿನ ವಿರುದ್ಧ ಪನಾಮ ಅಧ್ಯಕ್ಷರು ಮತ್ತೆ ರೊಚ್ಚಿಗೆದ್ದು ಈಗ ಖಡಕ್ ಪ್ರತಿಕ್ರಿಯೆ ನೀಡಿದ್ದಾರೆ. ಪನಾಮ ಅಧ್ಯಕ್ಷ ಜೋಸ್ ರೌಲ್ ಮುಲಿನೊ ಈಗ ರೊಚ್ಚಿಗೆದ್ದು ಕೂತಿದ್ದು, ಡೊನಾಲ್ಡ್ ಟ್ರಂಪ್ ಅವರು ಹೇಳುವಂತೆ ಪನಾಮ ಕಾಲುವೆಯ ಬಳಿ ಯಾವುದೇ ರೀತಿ ಚೀನಾ ಸೈನಿಕರು ಇಲ್ಲ ಎಂದಿದ್ದಾರೆ. ಅಲ್ಲದೆ ಇದು ತಲೆಬುಡ ಇಲ್ಲದ ಆರೋಪ ಎಂಬ ರೀತಿ ಖಡಕ್ ಉತ್ತರ ನೀಡಿದ್ದಾರೆ. ಇದು ಮತ್ತೊಮ್ಮೆ ಮಧ್ಯ ಅಮೆರಿಕ & ಉತ್ತರ ಅಮೆರಿಕದ ನಡುವೆ ಹೊಸ ತಿಕ್ಕಾಟಕ್ಕೆ ಕಾರಣವಾಗುವ ಮುನ್ಸೂಚನೆ ನೀಡುತ್ತಿದೆ.












Click it and Unblock the Notifications