ಪನಾಮಾದಲ್ಲಿ 12 ವರ್ಷ ಮೇಲ್ಪಟ್ಟವರಿಗೆ ಈ ಎರಡು ಕೊರೊನಾ ಲಸಿಕೆ

ಪನಾಮಾ, ಜುಲೈ 13: ಪನಾಮಾದಲ್ಲಿ 12 ವರ್ಷ ಹಾಗೂ ಅದಕ್ಕಿಂತ ಮೇಲ್ಪಟ್ಟವರಿಗೆ ಕೊರೊನಾ ಲಸಿಕೆ ನೀಡಲು ಫೈಜರ್ ಹಾಗೂ ಬಯೋಎನ್‌ಟೆಕ್‌ಗೆ ಅನುಮತಿ ನೀಡಲಾಗಿದೆ.

ಫೈಜರ್ ಲಸಿಕೆಯ ಪೂರ್ಣ ಡೋಸ್ ಪಡೆದುಕೊಂಡವರು ಡೆಲ್ಟಾ ವೈರಸ್ ವಿರುದ್ಧ ಐದು ಪಟ್ಟು ಕಡಿಮೆ ಪ್ರತಿಕಾಯಗಳನ್ನು ಹೊಂದಬಹುದಾದ ಸಾಧ್ಯತೆಗಳಿವೆ ಎಂದು ಅಧ್ಯಯನ ತಿಳಿಸಿತ್ತು. ವೈರಸ್‌ನ್ನು ಪತ್ತೆ ಹಚ್ಚಲು ಮತ್ತು ಹೋರಾಡಲು ಸಮರ್ಥವಾಗಿರುವ ಈ ಪ್ರತಿಕಾಯಗಳ ಮಟ್ಟವು ವಯಸ್ಸು ಹೆಚ್ಚಾದಂತೆ ಕಡಿಮೆಯಾಗಿದೆ ಎಂದು ಅಧ್ಯಯನವು ತಿಳಿಸಿದೆ.

ಅಲ್ಲದೆ, ಪ್ರತಿಕಾಯಗಳ ಮಟ್ಟವು ಕಾಲಾನಂತರದಲ್ಲಿ ಕುಸಿಯುತ್ತವೆ, ಹೀಗಾಗಿ ದುರ್ಬಲರಿಗೆ ಹೆಚ್ಚಿನ ಪ್ರಮಾಣದ ಲಸಿಕೆ ನೀಡಬೇಕಾದ ಅಗತ್ಯವನ್ನು ಅಧ್ಯಯನ ಸಾಬೀತುಪಡಿಸಿತ್ತು.

Panama Allows Pfizer-BioNTech Vaccine For Those As Young As 12

ಈ ಕುರಿತು ದಿ ಲ್ಯಾನ್ಸೆಟ್ ಜರ್ನಲ್‌ನಲ್ಲಿ ಪ್ರಕಟವಾಗಿತ್ತು. 12 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಲಸಿಕೆ ನೀಡುವ ಪ್ರಕ್ರಿಯೆಗೆ ಯಾವಾಗ ಚಾಲನೆ ನೀಡಲಾಗುತ್ತದೆ ಎಂಬುದರ ಕುರಿತು ಮಾಹಿತಿ ಇಲ್ಲ.

ಬಯೋಎನ್‌ಟೆಕ್ ಅಭಿವೃದ್ಧಿಪಡಿಸಿರುವ ಫೈಜರ್ ಲಸಿಕೆಯು ಜಗತ್ತನ್ನು ಕಾಡುತ್ತಿರುವ ಡೆಲ್ಟಾ ಕೊರೊನಾವೈರಸ್ ವಿರುದ್ಧ ಹೆಚ್ಚು ಪರಿಣಾಮಕಾರಿಯಲ್ಲ ಎಂಬ ಅಂಶ ಇತ್ತೀಚೆಗೆ ಬಹಿರಂಗಗೊಂಡಿತ್ತು.

ಭಾರತದಲ್ಲೂ 12 ವರ್ಷದೊಳಗಿನ ಮಕ್ಕಳಿಗೆ ಕೊರೊನಾ ಲಸಿಕೆ ನೀಡಲು ಪ್ರಯೋಗ ನಡೆಯುತ್ತಿದೆ, ಶೀಘ್ರವೇ ಅನುಮತಿ ದೊರೆಯುವ ಸಾಧ್ಯತೆ ಇದೆ.

Recommended Video

      ತಲೈವಾ ರಾಜಕೀಯದಿಂದ ಹಿಂದೆ ಸರಿಯಲು ಕಾರಣವಾಗಿದ್ದು ಏನು ಗೊತ್ತಾ? | Oneindia Kannada

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+