ಈತನಿಗೆ 3 ಹೆಂಡತಿಯರು, ಮಕ್ಕಳು 35, ಟಾರ್ಗೆಟ್ 100! ಶುಭವಾಗಲಿ!

Written By:
Subscribe to Oneindia Kannada

ಈತನ ಹೆಸರು ಸರ್ದಾರ್ ಜನ್ ಮೊಹಮ್ಮದ್ ಖಿಲ್ಜಿ, ಕಟ್ಟಾ ಇಸ್ಲಾಂ ಧರ್ಮೀಯ, ಊರು ಪಾಕಿಸ್ತಾನದ ಕ್ವೆಟ್ಟಾ. ಈಗಾಗಲೇ ಈತನಿಗೆ 35 ಮಕ್ಕಳಿದ್ದು, ನೂರು ಮಕ್ಕಳ ತಂದೆಯಾಗುವ ಮಹದಾಸೆಯನ್ನು ಹೊಂದಿದ್ದಾನೆ.

ತನ್ನ ಕನಸು ಸಾಕಾರಗೊಳಿಸುವತ್ತ ಅವಿರತ ಪ್ರಯತ್ನ ನಡೆಸುತ್ತಲೇ ಇರುವ ಮೊಹಮ್ಮದ್ ಖಿಲ್ಜಿ, ಸದ್ಯ ನಾಲ್ಕನೇ ಮದುವೆಗೆ ವಧುವಿನ ಹುಡುಕಾಟದಲ್ಲಿದ್ದಾನೆ.(ಎಲ್ಲಿ ತನಕ ಇಸ್ಲಾಂ ಇರುತ್ತೆ ಅಲ್ಲಿ ತನಕ ಭಯೋತ್ಪಾದನೆ)

ನಾಲ್ಕನೇ ಮದುವೆಗೆ ಮೂವರು ಹೆಂಡತಿಯರ ಆಕ್ಷೇಪವೇನೂ ಇಲ್ಲ, ಬದಲಿಗೆ ಈತನ ಶತಕದ ಗುರಿಗೆ ಅವರ ಬೆಂಬಲವೂ ಇದೆ. ಜೊತೆಗೆ, ಇಸ್ಲಾಂನಲ್ಲಿ ನಾಲ್ಕು ಮದುವೆಗೆ ಅವಕಾಶ ಕೂಡಾ ಇದೆ.

Pakistani father of 35 is now searching for a fourth wife as he romps towards his goal of 100 children

ಮೂವರು ಹೆಂಡತಿಯರು ಮತ್ತು ಎಲ್ಲಾ 35 ಮಕ್ಕಳು ಜೊತೆಗೆ ಸಂಸಾರ ನಡೆಸುತ್ತಿದ್ದಾರೆ. 46ವರ್ಷದ ಮೊಹಮ್ಮದ್ ಖಿಲ್ಜಿ ಹೆಚ್ಚು ಮಕ್ಕಳನ್ನು ಹೊಂದುವುದರಿಂದ ಇಸ್ಲಾಂ ಧರ್ಮವನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದೇನೆ ಎನ್ನುವ ಧಾರ್ಮಿಕ ನಂಬಿಕೆಯಲ್ಲಿದ್ದಾನೆ.

ಮದುವೆ ಮುಂತಾದ ಶುಭ ಸಮಾರಂಭಗಳಿಗೆ ಸಕುಟುಂಬ ಪರಿವಾರದ ಸಮೇತ ಹೋಗುವ ಇವರೆಲ್ಲಾ ಬಹಳ ಅನ್ಯೋನ್ಯವಾಗಿದ್ದಾರೆ ಎನ್ನುವುದು ಗಮನಿಸಬೇಕಾದ ಅಂಶ.

ವೃತ್ತಿಯಲ್ಲಿ ಮೆಡಿಕಲ್ ಟೆಕ್ನಿಷಿಯನ್ ಆಗಿರುವ ಈತ, ಈಗ ನಾಲ್ಕನೇ ಮದುವೆಯ ತಯಾರಿಯಲ್ಲಿದ್ದಾನೆ. ನಾಲ್ಕನೇ ಮದುವೆಗೆ ವಧು ಹುಡುಕಲು ಈತನ ಇತರ ಮೂವರು ಪತ್ನಿಯರು ತಮ್ಮ ಪ್ರಯತ್ನ ಮಾಡುತ್ತಿದ್ದಾರೆ.

ತನ್ನ ಆರೋಗ್ಯದಲ್ಲಿ ಸಮತೋಲನ ಕಾಪಾಡಿಕೊಳ್ಳಲು ದಿನಾ ಹಾಲು, ಮಾಂಸ ತಿನ್ನುವ ಮೊಹಮ್ಮದ್ ಖಿಲ್ಜಿ ದಿನಕ್ಕೆ ಐದು ಬಾರಿ ನಮಾಜ್ ಮಾಡುತ್ತಾನಂತೆ.

ಬಹುಪತ್ನಿತ್ವಕ್ಕೆ ಇಸ್ಲಾಂನಲ್ಲಿ ಅವಕಾಶವಿದ್ದರೂ, ಉಳಿದ ಹೆಂಡತಿಯರ ಭಾವನೆಗೆ ಸ್ಪಂದಿಸುವುದು ಕೂಡಾ ಅಷ್ಟೇ ಮುಖ್ಯ. ದಕ್ಷಿಣ ಏಷ್ಯಾದ ದೇಶಗಳ ಪೈಕಿ, ಜನನ ಪ್ರಮಾಣದ ಅಂಕಿಅಂಶದಲ್ಲಿ ಪಾಕಿಸ್ತಾನ ಮೊದಲ ಸ್ಥಾನದಲ್ಲಿದೆ. (ಚಿತ್ರ: AFP)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
A Pakistani father of 35, husband of three is now searching for a fourth wife as he romps towards his goal of 100 children.
Please Wait while comments are loading...