ಪಬ್‌ಜಿ ಆಡುತ್ತಾ ಹುಟ್ಟಿದ ಪ್ರೀತಿ, ನಾಲ್ಕು ಮಕ್ಕಳೊಂದಿಗೆ ಪಾಕಿಸ್ತಾನ ಬಿಟ್ಟು ಭಾರತಕ್ಕೆ ಬಂದ ಮಹಿಳೆ!
ಇಸ್ಲಾಮಾಬಾದ್/ ನವದೆಹಲಿ, ಜುಲೈ. 03: ಈ ಪ್ರೀತಿ ಪ್ರೇಮ ಎಲ್ಲಿ ಯಾವಾಗ...ಹೇಗೆ..ಯಾರ ಮೇಲೆ ಹುಟ್ಟುತ್ತದೋ ಯಾರಿಗೂ ತಿಳಿಯದು. ಇದಕ್ಕೆ ದೇಶ, ಭಾಷೆಗಳ ಗಡಿಯಿಲ್ಲ. ಕಣ್ಣ ನೋಟದಲ್ಲಿ ಹುಟ್ಟುತ್ತಿದ್ದ ಪ್ರೇಮ ಈಗ ಮೊಬೈಲ್‌ಗಳ ಮೂಲಕ ಆರಂಭವಾಗುತ್ತಿದೆ. ಇದೇ ರೀತಿ ಗೇಮಿಂಗ್ ಆಪ್‌ಗಳಿಂದಲೂ ಪ್ರೇಮಾರಂಭವಾಗುತ್ತದೆ ಎಂಬುದು ಬೆಳಕಿಗೆ ಬಂದಿದೆ.
ಹೌದು, ಗೇಮಿಂಗ್ ಆಪ್ ಪಬ್ಜಿ ಮೂಲಕ ಪರಿಚಯವಾದ ವ್ಯಕ್ತಿಗೋಸ್ಕರ ತನ್ನ ದೇಶವನ್ನು ಬಿಟ್ಟು, ತನ್ನ ನಾಲ್ಕು ಮಕ್ಕಳೊಂದಿಗೆ ಮಹಿಳೆಯೊಬ್ಬರು ಪಾಕಿಸ್ತಾನ ಬಿಟ್ಟು ಭಾರತಕ್ಕೆ ಅಕ್ರಮವಾಗಿ ಪ್ರವೇಶಿಸಿದ್ದಾರೆ ಎನ್ನಲಾಗಿದೆ. ಪಾಕಿಸ್ತಾನದ ಮಹಿಳೆ ಸೀಮಾ ಗುಲಾಮ್ ಹೈದರ್ ದೆಹಲಿಯ ಬಳಿಯ ಗ್ರೇಟರ್ ನೋಯ್ಡಾದ ಸಚಿನ್ ಎಂಬ ವ್ಯಕ್ತಿಯ ಜೊತೆಗಿರಲು ಪಾಕಿಸ್ತಾನ ಬಿಟ್ಟು ಬಂದಿದ್ದಾರೆ.

ಸೀಮಾ ಮತ್ತು ಸಚಿನ್ ಮೊಬೈಲ್ ಗೇಮಿಂಗ್ ಅಪ್ಲಿಕೇಶನ್ PUBGಯಲ್ಲಿ ಇಬ್ಬರು ಪರಿಚಯವಾಗಿದ್ದರು. ಪರಿಚಯ ಪ್ರೀತಿಯಾಗಿ ಬದಲಾಗಿತ್ತು. ಹೀಗಾಗಿ ಸೀಮಾ ನೇಪಾಳದ ಮೂಲಕ ಅಕ್ರಮವಾಗಿ ಭಾರತವನ್ನು ಪ್ರವೇಶಿಸಿದರು. ಸಚಿನ್ ವಾಸಿಸುತ್ತಿದ್ದ ಗ್ರೇಟರ್ ನೋಯ್ಡಾವನ್ನು ತಲುಪಿದಾಗ ಆಕೆ ತನ್ನ ನಾಲ್ಕು ಮಕ್ಕಳೊಂದಿಗೆ ಬಂದಿದ್ದರು.
ಸೀಮಾ ಮತ್ತು ಸಚಿನ್ ಗೇಮಿಂಗ್ ಪ್ಲಾಟ್‌ಫಾರ್ಮ್ ಮೂಲಕ ಭೇಟಿಯಾಗಿ, ಆನ್‌ಲೈನ್‌ನಲ್ಲಿ ಪರಸ್ಪರ ಚಾಟ್ ಮಾಡಲು ಪ್ರಾರಂಭಿಸಿದರು. ಸೀಮಾ ಭಾರತಕ್ಕೆ ಬಂದ ನಂತರ, ಅವರು ಗ್ರೇಟರ್ ನೋಯ್ಡಾದ ರಬುಪುರ ಪ್ರದೇಶದಲ್ಲಿ ಬಾಡಿಗೆ ಅಪಾರ್ಟ್ಮೆಂಟ್ನಲ್ಲಿ ಒಟ್ಟಿಗೆ ವಾಸಿಸಲು ಪ್ರಾರಂಭಿಸಿದರು. ಇದಾದ ಕೆಲವೇ ದಿನಗಳಲ್ಲಿ, ಗ್ರೇಟರ್ ನೋಯ್ಡಾದಲ್ಲಿ ಪಾಕಿಸ್ತಾನಿ ಮಹಿಳೆಯೊಬ್ಬರು ಅಕ್ರಮವಾಗಿ ವಾಸಿಸುತ್ತಿದ್ದಾರೆ ಎಂಬ ಮಾಹಿತಿ ಸ್ಥಳೀಯ ಪೊಲೀಸರಿಗೆ ಸಿಕ್ಕಿತು.

ಇದಾದ ನಂತರ ಸಚಿನ್, ಸೀಮಾ ಮತ್ತು ಅವರ ನಾಲ್ಕು ಮಕ್ಕಳೊಂದಿಗೆ ಓಡಿಹೋಗಿದ್ದರು. ದಂಪತಿ ವಾಸವಿದ್ದ ಅಪಾರ್ಟ್‌ಮೆಂಟ್‌ನ ಮಾಲೀಕ ಬ್ರಿಜೇಶ್ ಅವರು ಮೇ ತಿಂಗಳಲ್ಲಿ ಮನೆಯನ್ನು ಬಾಡಿಗೆಗೆ ಪಡೆದಿದ್ದರು ಎಂದು ಪೊಲೀಸರಿಗೆ ತಿಳಿಸಿದ್ದಾರೆ. ಅವರು ನ್ಯಾಯಾಲಯದಲ್ಲಿ ವಿವಾಹವಾಗಿದಗದು, ನಾಲ್ಕು ಮಕ್ಕಳಿದ್ದಾರೆ ಎಂದು ಹೇಳಿದ್ದರು. ಮಹಿಳೆ ಪಾಕಿಸ್ತಾನದವರಂತೆ ತೋರುತ್ತಿಲ್ಲ, ಅವರು ಸಲ್ವಾರ್ ಸೂಟ್ ಮತ್ತು ಸೀರೆಗಳನ್ನು ಧರಿಸುತ್ತದ್ದರು ಎಂದು ಮನೆ ಮಾಲೀಕ ಪೊಲೀಸರಿಗೆ ತಿಳಿಸಿದ್ದಾರೆ.
ಗ್ರೇಟರ್ ನೋಯ್ಡಾದಲ್ಲಿ ಕಾನೂನುಬಾಹಿರವಾಗಿ ನೆಲೆಸಿದ್ದ ಪಾಕಿಸ್ತಾನಿ ಸೀಮಾ ಮತ್ತು ಆಕೆಯ ನಾಲ್ವರು ಮಕ್ಕಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪಾಕಿಸ್ತಾನಿ ಮಹಿಳೆ ಮತ್ತು ಅವರು ಮತ್ತು ಅವರ ನಾಲ್ಕು ಮಕ್ಕಳನ್ನು ತಮ್ಮ ಬಾಡಿಗೆ ನಿವಾಸದಲ್ಲಿ ಇರಲು ಅನುಮತಿಸಿದ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಗ್ರೇಟರ್ ನೋಯ್ಡಾದ ಪೊಲೀಸ್ ಉಪ ಕಮಿಷನರ್ ಹೇಳಿದ್ದಾರೆ ಎಂದು ವರದಿ ಮಾಡಿದೆ.
ತಾನು ಸೀಮಾಳನ್ನು ಮದುವೆಯಾಗಲು ಬಯಸುತ್ತೇನೆ ಎಂದು ಸಚಿನ್ ತನ್ನ ವಕೀಲರಿಗೆ ತಿಳಿಸಿದ್ದನೆಂದು ಹೇಳಲಾಗಿದೆ. ಮಹಿಳೆಯನ್ನು ನೋಯ್ಡಾ ಪೊಲೀಸರು ಬಂಧಿಸಿದ್ದು, ಪ್ರಸ್ತುತ ವಿಚಾರಣೆ ನಡೆಸುತ್ತಿದ್ದಾರೆ. ಹೆಚ್ಚುವರಿಯಾಗಿ, ಆಕೆಯ ಬಗ್ಗೆ ಹೆಚ್ಚಿನ ವಿವರಗಳನ್ನು ನೀಡಲು ಕೇಂದ್ರ ಗುಪ್ತಚರ ಸಂಸ್ಥೆಗಳನ್ನು ಸಂಪರ್ಕಿಸಲಾಗಿದೆ.












Click it and Unblock the Notifications