• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಮ್ರಾನ್ ಖಾನ್ ಪ್ರಧಾನಿಯಾಗಿ ಅಧಿಕಾರಾವಧಿ ಪೂರೈಸಿದರೆ ಪಾಕಿಸ್ತಾನ ದಿವಾಳಿ: ಭುಟ್ಟೊ

|
Google Oneindia Kannada News

ಇಸ್ಲಾಮಾಬಾದ್, ಮೇ 21: ಇಮ್ರಾನ್ ಖಾನ್ ಪಾಕಿಸ್ತಾನದ ಪ್ರಧಾನಿಯಾಗಿ ಅಧಿಕಾರಾವಧಿ ಪೂರೈಸಿದರೆ ದೇಶ ದಿವಾಳಿಯಾಗಲಿದೆ ಎಂದು ಪಾಕಿಸ್ತಾನ ಪೀಪಲ್ಸ್ ಪಾರ್ಟಿ ಮುಖ್ಯಸ್ಥ ಬಿಲವಾಲ್ ಭುಟ್ಟೊ ಹೇಳಿದ್ದಾರೆ.

ಯುವಕರ ಭರವಸೆಗೆ ಆದ್ಯತೆ ನೀಡದೆ ಕೊನೆಗಾಣಿಸುವುದು ಪಾಕಿಸ್ತಾನ ತೆಹ್ರೀಕ್ ಇ ಇನ್ಸಾಫ್ ಮಾಡಿದ ದೊಡ್ಡ ಅಪರಾಧ ಎಂದಿರುವ ಅವರು, ಸದ್ಯ ಪಾಕಿಸ್ತಾನದ ಅರ್ಥಿಕತೆಯು ಗಂಭೀರ ಸ್ಥಿತಿಯಲ್ಲಿದ್ದು, ಕೋವಿಡ್ ಸಾಂಕ್ರಾಮಿಕವು ಆರ್ಥಿಕತೆಯ ಮೇಲೆ ದೊಡ್ಡ ಪೆಟ್ಟು ನೀಡಿದೆ ಎಂದಿದ್ದಾರೆ.

ಸದ್ಯದ ಪರಿಸ್ಥಿತಿಯಲ್ಲಿ ಭಾರತದೊಂದಿಗೆ ಯಾವುದೇ ವ್ಯಾಪಾರ ಸಾಧ್ಯವಿಲ್ಲ: ಇಮ್ರಾನ್ ಖಾನ್ಸದ್ಯದ ಪರಿಸ್ಥಿತಿಯಲ್ಲಿ ಭಾರತದೊಂದಿಗೆ ಯಾವುದೇ ವ್ಯಾಪಾರ ಸಾಧ್ಯವಿಲ್ಲ: ಇಮ್ರಾನ್ ಖಾನ್

ಕೊರೊನಾ ಸೋಂಕಿಗೂ ಮೊದಲೇ ದೇಶದ ಆರ್ಥಿಕತೆಯನ್ನು ಇಮ್ರಾನ್ ಖಾನ್ ಹಾಳು ಮಾಡಿದ್ದಾರೆ, ಈಗಿರುವ ಆಡಳಿತದಿಂದಾಗಿ ಉಂದಿನ ಸಾರ್ಕಾರಗಳು ದಶಕಗಳವರೆಗೆ ತೊಂದರೆ ಅನುಭವಿಸಬೇಕಾಗುತ್ತದೆ.

ದತ್ತಿ ಸಂಸ್ಥೆಯ ಮಾದರಿಯಲ್ಲಿ ದೇಶವನ್ನಾಳುವ ಇಮ್ರಾನ್ ಖಾನ್ ಯೋಜನೆ ವಿಫಲವಾಗಿದೆ ಎಂದು ಪಿಪಿಪಿ ಮುಖ್ಯಸ್ಥ ಬುಟ್ಟೊ ಆರೋಪಿಸಿದ್ದಾರೆ.

ಸ್ವಾತಂತ್ರ್ಯದ ಬಳಿಕ ಪಾಕಿಸ್ತಾನದಲ್ಲಿ ಎಲ್ಲಾ ಪ್ರಧಾನಿಗಳು ಸೇರಿ ಕೂಡಿಸಿದ್ದಕ್ಕಿಂತ ಹೆಚ್ಚು ಹಾನಿಯನ್ನು ಇಮ್ರಾನ್ ಖಾನ್ ಒಬ್ಬರೇ ಮಾಡಿದ್ದಾರೆ ಎಂದು ಭುಟ್ಟೊ ಹೇಳಿದ್ದು, ಇಮ್ರಾನ್ ಖಾನ್ ಮತ್ತು ಅವರ ಬೆಂಬಲಿಗರು ಹಣ ಲೂಟಿ ಮಾಡಿದ ಬಳಿಕ ಪರ್ವೇಜ್ ಮುಷರಫ್ ಅವರಂತೆಯೇ ಲಂಡನ್‌ಗೆ ಪಲಾಯನ ಮಾಡುತ್ತಾರೆ ಎಂದು ಆರೋಪಿಸಿದ್ದಾರೆ.

English summary
Pakistan Peoples Party Chairman Bilawal Bhutto Zardari ripped into Imran Khan, saying the country will go bankrupt if the incumbent prime minister completes his five year tenure.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X