ಭಾರತದ ಮೇಲೆ "ಅಣ್ವಸ್ತ್ರ" ಬಳಸುತ್ತೇವೆ ಎಂದ ಪಾಕ್, ನಮ್ಮ ಬೆಂಬಲಕ್ಕೆ ಬಂದ ಅಫ್ಘಾನಿಸ್ತಾನ!
India Pakistan Tensions: ಭಾರತ ಹಾಗೂ ಪಾಕಿಸ್ತಾನದ ನಡುವೆ ದಿನದಿಂದ ದಿನಕ್ಕೆ ಉದ್ವಿಗ್ನ ಪರಿಸ್ಥಿತಿ ಹೆಚ್ಚಾಗುತ್ತಿದೆ. ಭಾರತ vs ಪಾಕಿಸ್ತಾನದ ನಡುವೆ ಯುದ್ಧ ಆಗಬಹುದು ಎನ್ನುವ ಲೆಕ್ಕಾಚಾರ ಇದೆ. ಭಾರತದ ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಉಗ್ರರು 26 ಜನರನ್ನು ಕೊಂದಿದ್ದು. ಇದಕ್ಕೆ ಪ್ರತೀಕಾರ ತೆಗೆದುಕೊಳ್ಳಬೇಕು ಎಂದು ಭಾರತೀಯರು ಆಗ್ರಹಿಸುತ್ತಿದ್ದಾರೆ. ಈ ರೀತಿ ಇರುವಾಗಲೇ ಪಾಕಿಸ್ತಾನವೂ ಇದೀಗ ಅಣ್ವಸ್ತ್ರವನ್ನು ಬಳಸುವ ಎಚ್ಚರಿಕೆಯನ್ನು ನೀಡಿದೆ. ಭಾರತದೊಂದಿಗೆ ಯುದ್ಧ ಮಾಡುವುದು ಬೇಡ ಎಂದು ಈಗಾಗಲೇ ಪಾಕಿಸ್ತಾನಕ್ಕೆ ಅಲ್ಲಿನ ರಾಜಕಾರಣಿಗಳು ಹಾಗೂ ತಜ್ಞರೇ ಹೇಳುತ್ತಿದ್ದಾರೆ. ಭಾರತದೊಂದಿಗೆ ಯುದ್ಧ ಮಾಡಿದರೆ, ಪಾಕಿಸ್ತಾನಕ್ಕೆ ನಷ್ಟವಾಗುವುದೇ ಹೆಚ್ಚು ಅಂತ ಹೇಳಲಾಗಿದೆ. ಇದೀಗ ಭಾರತದ ವಿರುದ್ಧ ಮತ್ತೊಂದು ಹೇಳಿಕೆಯನ್ನು ಪಾಕ್ ನೀಡಿದೆ.
ಭಾರತ vs ಪಾಕಿಸ್ತಾನ್ ನಡುವೆ ಈಗಾಗಲೇ ಕಾರ್ಗಿಲ್ ಯುದ್ಧವಾಗಿದ್ದು. ಈ ಯುದ್ಧದಲ್ಲಿ ಪಾಕಿಸ್ತಾನವು ಹೀನಾಯವಾಗಿ ಸೋತಿದೆ. ಆದರೆ, ಇದೀಗ ಭಾರತ ಹಾಗೂ ಪಾಕಿಸ್ತಾನದ ನಡುವೆ ಮತ್ತೊಮ್ಮೆ ಸಂಘರ್ಷ ಏರ್ಪಟ್ಟಿದೆ. ಈ ಬಾರಿ ಯುದ್ಧ ಅಥವಾ ದಾಳಿ - ಪ್ರತಿ ದಾಳಿ ನಡೆದರೆ ಭೀಕರವಾಗಿ ಇರಲಿದೆ ಎಂದೇ ಹೇಳಲಾಗುತ್ತಿದೆ. ಭಾರತವು ದಾಳಿಗೆ ಸಜ್ಜಾಗಿದ್ದು ಯಾವುದೇ ಕ್ಷಣದಲ್ಲಾದರೂ ನಮ್ಮ ಮೇಲೆ ದಾಳಿ ಮಾಡಬಹುದು ಎಂದು ಪಾಕಿಸ್ತಾನದ ರಕ್ಷಣಾ ಸಚಿವ ಖ್ವಾಜಾ ಮೊಹಮ್ಮದ್ ಆಸಿಫ್ ಹೇಳಿದ್ದಾರೆ. ಉಗ್ರರಿಗೆ ಬುದ್ಧಿ ಕಲಿಸುತ್ತೇವೆ ಎನ್ನುತ್ತಿದ್ದಂತೆಯೇ ಈ ವಿಷಯದಲ್ಲಿ ಪಾಕ್ ಸಹ ಅಲರ್ಟ್ ಆಗಿದ್ದು. ಭಾರತ ನಮ್ಮ ಮೇಲೆ ದಾಳಿ ಮಾಡಿದರೆ ತೀವ್ರ ಪ್ರತಿದಾಳಿ ಮತ್ತು ಅಣ್ವಸ್ತ್ರ ಬಳಸುವ ಬೆದರಿಕೆಯನ್ನು ಸಹ ಹಾಕಿದೆ. ಈ ವಿಚಾರ ಇದೀಗ ಭಾರೀ ಚರ್ಚೆಗೆ ಕಾರಣವಾಗಿದೆ.

ಪಹಲ್ಗಾಮ್ ದಾಳಿಯನ್ನು ನಾವೇ ಮಾಡಿರುವುದಾಗಿ ದಿ ರೆಸಿಸ್ಟಂಟ್ ಫ್ರಂಟ್ ಎನ್ನುವ ಉಗ್ರ ಸಂಘಟನೆ ಹೇಳಿದೆ. ಈ ಉಗ್ರ ಸಂಘಟನೆಗೆ ಪಾಕಿಸ್ತಾನದ ಬೆಂಬಲವಿದೆ ಎಂದು ಭಾರತವು ವಾದಿಸಿದೆ. ಈ ದಾಳಿಯ ಹಿಂದೆ ಪಾಕಿಸ್ತಾನ ಮೂಲಕದ ನಿಷೇಧಿತ ಜೈಶ್ ಎ ಮೊಹಮ್ಮದ್ ಸಂಘಟನೆಯ ಕೈವಾಡವಿದೆ. ಪಾಕಿಸ್ತಾನವು ಇದರಲ್ಲಿ ಶಾಮೀಲಾಗಿದೆ ಎನ್ನುವ ಅನುಮಾನವನ್ನು ಭಾರತ ವ್ಯಕ್ತಪಡಿಸಿದೆ. ಈ ಹಿನ್ನೆಲೆಯಲ್ಲಿ ಸಿಂಧೂ ನದಿ ಜಲ ಒಪ್ಪಂದ ರದ್ದು ಸೇರಿದಂತೆ 5 ಕಠಿಣ ಕ್ರಮಗಳನ್ನು ಭಾರತವು ಈಗಾಗಲೇ ತೆಗೆದುಕೊಂಡಿದೆ. ಅಲ್ಲದೇ ಉಗ್ರರ ದಾಳಿಗೆ ಪ್ರತೀಕಾರ ಮಾತನ್ನು ಈಗಾಗಲೇ ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ. ಈ ರೀತಿ ಇರುವಾಗಲೇ ಅಣ್ವಸ್ತ್ರ ಬಳಕೆಯ ಮಾತು ಮುನ್ನೆಲೆಗೆ ಬಂದಿದೆ.
ನಾವು ಅಣ್ವಸ್ತ್ರ ಬಳಸುತ್ತೇವೆ ಎಂದ ಪಾಕ್!
ಭಾರತ ಹಾಗೂ ಪಾಕಿಸ್ತಾನ ಸೇರಿದಂತೆ ಕೆಲವೇ ಪ್ರಮುಖ ರಾಷ್ಟ್ರಗಳ ಬಳಿ ಮಾತ್ರ ಅಣ್ವಸ್ತ್ರವಿದೆ. ಅಣ್ವಸ್ತ್ರ ದಾಳಿಯನ್ನು ಮಾಡಿದರೆ ಅಪಾಯ ಕಟ್ಟಿಟ್ಟ ಬುತ್ತಿ. ವಿಶ್ವವು ಅಣ್ವಸ್ತ್ರ ಬಳಕೆಯ ಅಪಾಯವನ್ನು ಈಗಾಗಲೇ ನೋಡಿದೆ. ಅಮೆರಿಕ ದೇಶವು ಜಪಾನ್‌ನ ಮೇಲೆ ಬಳಸಿದ ಅಣ್ವಸ್ತ್ರ ದಾಳಿಯ ಭೀಕರತೆಯನ್ನು ವಿಶ್ವ ಇಲ್ಲಿಯ ವರೆಗೆ ಮರೆತಿಲ್ಲ. ಈ ವಿಚಾರವಾಗಿ ಮಾತನಾಡಿರುವ ಪಾಕ್, ಕಾಲ ಸನ್ನಿಹಿತವಾಗಿದೆ. ನಮ್ಮ ಸೇನೆಯನ್ನು ಬಲಪಡಿಸಿಕೊಳ್ಳುತ್ತಿದ್ದೇವೆ. ತೀವ್ರ ಸಂಕಷ್ಟ ಎದುರಾದರೆ, ಏನೆಲ್ಲಾ ನಿರ್ಧಾರವನ್ನು ತೆಗೆದುಕೊಳ್ಳಲು ಸಾಧ್ಯವೋ ಅದನ್ನೆಲ್ಲವೂ ತೆಗೆದುಕೊಳ್ಳಲಿದ್ದೇವೆ. ಪಾಕ್ ಅಸ್ತಿತ್ವಕ್ಕೆ ನೇರ ಅಪಾಯ ಸೃಷ್ಟಿಯಾದರೆ ಅಣ್ವಸ್ತ್ರ ಉಪಯೋಗಿಸಲಿದ್ದೇವೆ ಎಂದಿದೆ.

ಭಾರತದ ಬೆಂಬಲಕ್ಕೆ ಬಂದ ಅಫ್ಘಾನಿಸ್ತಾನ!
ಭಾರತ ಹಾಗೂ ಪಾಕಿಸ್ತಾನದ ನಡುವೆ ಯುದ್ಧ ಪರಿಸ್ಥಿತಿ ಸಂಕಷ್ಟ ಎದುರಾಗಿರುವಾಗಲೇ ಭಾರತಕ್ಕೆ ಬೆಂಬಲ ನೀಡುವುದಾಗಿ ಅಫ್ಘಾನಿಸ್ತಾನ ಘೋಷಿಸಿದೆ. ತಾಲಿಬಾನ್ ವಿದೇಶಾಂಗ ಸಚಿವಾಲಯವು ಭಾರತದೊಂದಿಗಿನ ಸಂಬಂಧವನ್ನು ಮುಂದಕ್ಕೆ ಕೊಂಡೊಯ್ಯುಲು ಬದ್ಧವಾಗಿರುವುದಾಗಿ ಹೇಳಿದೆ. ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯನ್ನು ಖಂಡಿಸಿದ್ದು. ಭಾರತಕ್ಕೆ ತನ್ನ ಬೆಂಬಲ ಸೂಚಿಸಿದೆ.












Click it and Unblock the Notifications