ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಖಂಡಾಂತರ ಕ್ಷಿಪಣಿ ಪರೀಕ್ಷೆ ನಡೆಸಿದ ಪಾಕಿಸ್ತಾನ

|
Google Oneindia Kannada News

ಇಸ್ಲಾಮಾಬಾದ್, ಆಗಸ್ಟ್ 29: ಪಾಕಿಸ್ತಾನವು ಖಂಡಾಂತರ ಕ್ಷಿಪಣಿ ಪರೀಕ್ಷೆ ಮುಕ್ತಾಯಗೊಳಿಸಿದೆ ಎಂದು ಪಾಕ್ ಸೇನೆಯ ಮೇಜರ್ ಆಸಿಫ್ ಗಫೂರ್ ಟ್ವೀಟ್ ಮಾಡಿದ್ದಾರೆ.

ಅದರ ಜೊತೆಗೆ ವಿಡಿಯೋ ಕೂಡ ಟ್ವೀಟ್ ಮಾಡಿದ್ದಾರೆ.'' ಪಾಕಿಸ್ತಾನವು ಯಶಸ್ವಿಯಾಗಿ ಖಡಾಂತರ ಕ್ಷಿಪಣಿ ಪರೀಕ್ಷೆ ನಡೆಸಿದೆ. ಈ ಕ್ಷಿಪಣಿಯು 290 ಕಿ.ಮೀ ದೂರದವರೆಗೂ ಚಲಿಸಬಲ್ಲದು'' ಎಂದು ಹೇಳಿ ತಂಡಕ್ಕೆ ಶುಭಾಶಯ ತಿಳಿಸಿದ್ದಾರೆ.

ಖಂಡಾಂತರ ಕ್ಷಿಪಣಿ ಪರೀಕ್ಷೆ: ಭಾರತಕ್ಕೆ ಎಚ್ಚರಿಕೆ ರವಾನಿಸಿದ ಪಾಕಿಸ್ತಾನಖಂಡಾಂತರ ಕ್ಷಿಪಣಿ ಪರೀಕ್ಷೆ: ಭಾರತಕ್ಕೆ ಎಚ್ಚರಿಕೆ ರವಾನಿಸಿದ ಪಾಕಿಸ್ತಾನ

ಬುಧವಾರ ರಾತ್ರಿಯೇ ಕ್ಷಿಪಣಿ ಪರೀಕ್ಷೆ ನಡೆದಿದೆ ಹಾಗಾಗಿಯೇ ಆಗಸ್ಟ್ 28 ರಿಂದ 31ರವರೆಗೆ ಯಾವುದೇ ವಿಮಾನ ಹಾರಾಟ ನಡೆಸದಂತೆ ನೋಡಿಕೊಳ್ಳಲಾಗಿತ್ತು.

Pakistan Test Ballistic Missile Ghaznavi

ಜಮ್ಮು ಮತ್ತು ಕಾಶ್ಮೀರದಲ್ಲಿ ಪರಿಚ್ಛೇದ 370 ರದ್ದುಗೊಳಿಸಿರುವ ಬೆನ್ನಲ್ಲೇ ಪಾಕಿಸ್ತಾನಕ್ಕೆ ಭಾರತದ ವಿರುದ್ಧ ಮುನಿಸು ಉಂಟಾಗಿತ್ತು.

ಪಾಕಿಸ್ತಾನದ ಕಾರ್ಯಾಚರಣೆಯಲ್ಲಿ ನಿಯೋಜಿಸಲಾದ ಕ್ಷಿಪಣಿಗಳಲ್ಲಿ ಸಾಂಪ್ರದಾಯಿಕ ಮತ್ತು ಪರಮಾಣು ವಿಮಾನಗಳು ಸೇರಿವೆ, ಇವೆಲ್ಲವೂ ಭಾರತದತ್ತ ಗುರಿಯನ್ನು ಹೊಂದಿವೆ. ಸಾಂಪ್ರದಾಯಿಕ ಕ್ಷಿಪಣಿಗಳು 70-100 ಕಿ.ಮೀ ವ್ಯಾಪ್ತಿಯ ಹಫ್ತ್ 1 ಮತ್ತು 180-200 ಕಿ.ಮೀ ವ್ಯಾಪ್ತಿಯ ಹಫ್ತ್ 2 (ಅಬ್ದಾಲಿ). ಇದರ ಪರಮಾಣು ಸಾಮರ್ಥ್ಯದ ಕ್ಷಿಪಣಿಗಳು ಹಫ್ತ್ 3 (ಘಜ್ನವಿ, ಶ್ರೇಣಿ 290 ಕಿ.ಮೀ), ಹಫ್ತ್ 7 (ಬಾಬರ್ ಕ್ರೂಸ್ ಕ್ಷಿಪಣಿ, ಶ್ರೇಣಿ 350-700 ಕಿ.ಮೀ),ಹಫ್ತ್ 4 (ಶಾಹೀನ್ 1, ಶ್ರೇಣಿ 750 ಕಿ.ಮೀ), ಹಫ್ತ್ 5 (ಗೌರಿ, ಶ್ರೇಣಿ 1,250-1,500 ಕಿಮೀ) ಮತ್ತು ಹಫ್ತ್ 6 (ಶಾಹೀನ್ 2, ಶ್ರೇಣಿ 1,500-2,000 ಕಿಮೀ). ಕ್ಷಿಪಣಿಗಳು ಈಗ ಪಾಕಿಸ್ತಾನದ ಸಂಗ್ರಹದಲ್ಲಿವೆ. ಈ ಕ್ಷಿಪಣಿ ಕುರಿತು ಭಾರತಕ್ಕೂ ಎಚ್ಚರಿಕೆ ಸಂದೇಶ ರವಾನಿಸಿತ್ತು.

English summary
Pakistan Test Ballistic Missile Ghaznavi,Pakistan test-fired surface to surface ballistic missile Ghaznavi, Pakistan Armed Forces spokesperson Major General Asif Ghafoor said in a tweet on Thursday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X