Pahalgam: ಪಾಪಿ ಪಾಕಿಸ್ತಾನದ ಮತ್ತೊಂದು ಕಿರಿಕ್, ಶಿಮ್ಲಾ ಒಪ್ಪಂದ ಮುರಿಯಲು ಕುತಂತ್ರ
ಪಾಕಿಸ್ತಾನದ ರಾಜಕಾರಣಿಗಳ ಮೈತುಂಬಾ ಬರೀ ವಿಷ ತುಂಬಿಕೊಂಡಿದ್ದು, ಅದೇ ವಿಷ ಈಗ ಇಡೀ ಪಾಕಿಸ್ತಾನದ ನೆಮ್ಮದಿಗೆ ಬೆಂಕಿ ಹಚ್ಚುತ್ತಿದೆ. ಒಂದು ಕಡೆ ಪಾಕಿಸ್ತಾನದ ಜನರು ಕೂಡ ಅಲ್ಲಿನ ರಾಜಕಾರಣಿಗಳ ಅಟ್ಟಹಾಸಕ್ಕೆ ನೊಂದು & ಬೆಂದು ಹೋಗಿದ್ದಾರೆ. ಇನ್ನೊಂದು ಕಡೆ ಬಡತನ ಇಡೀ ಪಾಕಿಸ್ತಾನ ಪ್ರದೇಶವನ್ನು ಆವರಿಸಿ ಕೊಲ್ಲುತ್ತಿದೆ. ಇಷ್ಟೆಲ್ಲಾ ಇದ್ದರೂ ಭಾರತದ ವಿರುದ್ಧ ಮತ್ತೆ ಪಾಪಿ ಪಾಕಿಸ್ತಾನ ಕಿಚ್ಚು ಹಚ್ಚಲು ಮುಂದಾಗಿದೆ.
ಪಾಕಿಸ್ತಾನ ಅನ್ನೋ ದೇಶದಿಂದ ಜಗತ್ತಿಗೆ ಹಲವು ಸಮಸ್ಯೆಗಳು ಇವೆ. ಒಂದು ನಯಾ ಪೈಸೆ ಉಪಯೋಗಕ್ಕೆ ಬಾರದ ಈ ದೇಶದಿಂದ ಭಯೋತ್ಪಾದನೆ & ಇತರ ಕೆಟ್ಟ ಚಟುವಟಿಕೆಗೆ ಸದಾ ಬೆಂಬಲ ಸಿಗುತ್ತಲೇ ಇದೆ. ಹೀಗಾಗಿಯೇ ಪಾಪಿ ಪಾಕಿಸ್ತಾನ ವಿರುದ್ಧ ಕ್ರಮಕ್ಕೆ ಜಾಗತಿಕವಾಗಿ ಕೂಡ ಆಕ್ರೋಶ ವ್ಯಕ್ತವಾಗುತ್ತಿದೆ, ಅದರಲ್ಲೂ ವಿಶ್ವಸಂಸ್ಥೆ ಬಾಗಿಲು ತಟ್ಟಿರುವ ಪಾಕಿಸ್ತಾನದ ವಿಚಾರ ಪ್ರಪಂಚಕ್ಕೂ ದೊಡ್ಡ ತಲೆನೋವು ತಂದಿದೆ. ಇಂತಹ ಸಮಯದಲ್ಲೇ ಪಾಪಿಸ್ತಾನದ ರಾಜಕಾರಣಿಗಳು ಶಿಮ್ಲಾ ಒಪ್ಪಂದ ಮುರಿಯಲು ಕುತಂತ್ರ ಮಾಡಿದ್ದಾರಂತೆ.

ಏನಿದು ಶಿಮ್ಲಾ ಒಪ್ಪಂದದ ಇತಿಹಾಸ?
ಭಾರತದ ಜೊತೆಗೆ ನೆಮ್ಮದಿಯಾಗಿ ಬದುಕುವ ಬದಲು ಪದೇ ಪದೇ ಪಾಕಿಸ್ತಾನ ಕಿರಿಕ್ ಮಾಡಿ ಹಿಂಸಾಚಾರಕ್ಕೆ ಮುಂದಾಗುತ್ತಿದೆ. ಇದರ ಪರಿಣಾಮ ಜಾಗತಿಕವಾಗಿ ಕೂಡ ನೆಮ್ಮದಿ ಹಾಳು ಬಿದ್ದೋಗಿದೆ. ಇನ್ನು ಅಫ್ಘಾನಿಸ್ತಾನ ಜೊತೆಗೂ ಪಾಕಿಸ್ತಾನದ ಕಿರಿಕ್ ಮಾಡಿಕೊಂಡು ಅಲ್ಲೂ ಹೆಸರು ಹಾಳು ಮಾಡಿಕೊಂಡಿದೆ. ಹೀಗಿದ್ದಾಗ ಭಾರತದ ವಿರುದ್ಧ ಇದೀಗ ವಿಷ ಕಾರುತ್ತಿರುವ ಪಾಕಿಸ್ತಾನದ ರಾಜಕಾರಣಿಗಳು, ಶಿಮ್ಲಾ ಒಪ್ಪಂದ ಮುರಿಯಲು ನಿರ್ಧಾರ ಮಾಡಿದ್ದಾರೆ. ಈ ಹಿನ್ನೆಲೆ ಇನ್ನಷ್ಟು ತಿಕ್ಕಾಟ ಹೆಚ್ಚಾಗುವ ಭೀತಿ ಆವರಿಸಿದೆ. ಹಾಗಾದ್ರೆ, ಶಿಮ್ಲಾ ಒಪ್ಪಂದ ಅಂದ್ರೆ ಏನು?












Click it and Unblock the Notifications