ಕಪ್ಪುಪಟ್ಟಿಗೆ ಹೋಗದಿದ್ದರೂ ಪಾಕಿಸ್ತಾನಕ್ಕೆ ಅಮೆರಿಕದಿಂದ ಭಾರೀ ಆಘಾತ!
ನವದೆಹಲಿ, ಅಕ್ಟೋಬರ್ 14: ಪಾಕಿಸ್ತಾನವು ಚೀನಾ ಮತ್ತು ಮಲೇಶಿಯಾಗಳ ಸಹಾಯದಿಂದ ಕಪ್ಪುಪಟ್ಟಿಗೆ ಸೇರುವ ಸಂದರ್ಭದಿಂದ ಪಾರಾದರೂ, ಅಮೆರಿಕದಿಂದ ಅದು ಭಾರೀ ಆಘಾತ ಎದುರಿಸಲಿದೆ.
Financial Action Task Force (ಫಾಫ್ಟ್) ಪಾಕಿಸ್ತಾನವನ್ನು ಕಪ್ಪುಪಟ್ಟಿಗೆ ಸೇರಿಸಬೇಕು ಎಂಬ ಹಲವು ದೇಶಗಳ ಬೇಡಿಕೆಗೆ ಬೆಲೆ ನೀಡದೆ ಚೀನಾ, ಮಲೇಶಿಯಾ ಮತ್ತು ಟರ್ಕಿ ದೇಶಗಳು ಪಾಕಿಸ್ತಾನವನ್ನು ಕಪ್ಪುಪಟ್ಟಿಯ ಬದಲಾಗಿ ಗ್ರೇ ಪಟ್ಟಿಗೆ ಕಳಿಸುವುದು ಬಹುತೇಕ ಖಚಿತವಾಗಿದೆ. ಪಾಕಿಸ್ತಾನ ಕಪ್ಪುಪಟ್ಟಿಸೇರಬೇಕಾದರೆ ಮೂರಕ್ಕಿಂತ ಕಡಿಮೆ ದೇಶಗಳು ಮಾತ್ರ ಅದರ ಪರ ನಿಲ್ಲಬೇಕು. ಆದರೆ ಇದೀಗ ಚೀನಾ, ಮಲೇಶಿಯಾ ಮತ್ತು ಟರ್ಕಿ ದೇಶಗಳ ಬೆಂಬಲದಿಂದಾಗಿ ಕಪ್ಪುಪಟ್ಟಿಯ ಶಿಕ್ಷೆಯನ್ನು ಪಾಕಿಸ್ತಾನ ತಪ್ಪಿಸಿಕೊಳ್ಳಲಿದೆ. Financial Action Task Force ನ ನೇತೃತ್ವವನ್ನು ಸದ್ಯಕ್ಕೆ ಚೀನಾವೇ ವಹಿಸಿರುವುದೇ ಪಾಕಿಸ್ತಾನಕ್ಕೆ ಉಪಯೋಗವಾಗಿದೆ.

ಆದರೆ ಪಾಕಿಸ್ತಾನ ಕಪ್ಪು ಪಟ್ಟಿಗೆ ಸೇರುವುದರಿಂದ ಪಾರಾದರೂ, ಅದಕ್ಕೆ ಅಮೆರಿಕದ ಕಡೆಯಿಂದ ಸಿಗಬೇಕಿದ್ದ 10 ಬಿಲಿಯನ್ ಅಮೆರಿಕ ಡಾಲರ್ ಧನ ಸಹಾಯ ಇನ್ನು ಮುಂದೆ ಸಿಗುವದಿಲ್ಲ. ಗ್ರೇ ಪಟ್ಟಿಯಿಂದ ಆಚೆಬರುವುದಕ್ಕೆ ಪಾಕಿಸ್ತಾನಕ್ಕೆ 36 ಫ್ಯಾಫ್ಟ್ ಸದಸ್ಯರಲ್ಲಿ ಕನಿಷ್ಠ 15 ಸದಸ್ಯರ ಮತವಾದರೂ ಬೇಕು.
ಭಯೋತ್ಪಾದನೆಯ ನಿರ್ಮೂಲನೆಗೆ ವಿಶ್ವಸಂಸ್ಥೆ ಪಾಕಿಸ್ತಾನಕ್ಕೆ ಹಾಕಿರುವ ತಾಕೀತುಗಳನ್ನು ಪಾಲಿಸದೆ ಇದ್ದಲ್ಲಿ ಮತ್ತು ಜಾಗತಿಕ ಉಗ್ರರಿಗೆ ಶಿಕ್ಷೆ ನೀಡದೆ, ಭಯೋತ್ಪಾದನೆಗೆ ಬೆಂಬಲ ನೀಡಿದಲ್ಲಿ ಪಾಕಿಸ್ತಾನ ಗ್ರೇ ಲಿಸ್ಟ್ ನಲ್ಲೇ ಉಳಿಯಲಿದೆ.












Click it and Unblock the Notifications