ಸೆರೆಸಿಕ್ಕಿದ್ದ ಭಾರತೀಯ ಯೋಧನನ್ನು ಬಿಡುಗಡೆಗೊಳಿಸಿದ ಪಾಕಿಸ್ತಾನ

Posted By:
Subscribe to Oneindia Kannada

ನವದೆಹಲಿ, ಜನವರಿ 21: ಕಳೆದ ವರ್ಷ ಸೆಪ್ಟಂಬರ್ ನಲ್ಲಿ ತಿಳಿಯದೇ ಪಾಕಿಸ್ತಾನದ ಗಡಿಯೊಳಕ್ಕೆ ಶಸ್ತ್ರ ಸಹಿತವಾಗಿ ಪ್ರವೇಶಿಸಿ ಅಲ್ಲಿನ ಸೈನಿಕರಿಂದ ಬಂಧಿಸಲ್ಪಟ್ಟಿದ್ದ ಭಾರತೀಯ ಸೈನಿಕ ಚಂದು ಬಾಬುಲಾಲ್ ಚಹ್ವಾಣ್ ಅವರನ್ನು ಪಾಕಿಸ್ತಾನ ಸರ್ಕಾರ ಶನಿವಾರ ಬಿಡುಗಡೆಗೊಳಿಸಿದೆ.

ಭಾರತೀಯ ಸೇನೆಯ 37ನೇ ರಾಷ್ಟ್ರೀಯ ರೈಫಲ್ಸ್ ನ ಈ ಯೋಧ, ಸರ್ಜಿಕಲ್ ಸ್ಟ್ರೈಕ್ ಗೂ ಮುನ್ನ ಜಮ್ಮು ಕಾಶ್ಮೀರ ಗಡಿ ಪ್ರದೇಶದಲ್ಲಿ ನಿಯೋಜಿತನಾಗಿದ್ದ. ಆದರೆ, ಸೆಪ್ಟಂಬರ್ 30ರಂದು ಆತ ತನಗೆ ತಿಳಿಯದಂತೆ ಪಾಕಿಸ್ತಾನ ಗಡಿಯೊಳಕ್ಕೆ ಪ್ರವೇಶಿಸಿದ್ದರಿಂದಾಗಿ ಅಲ್ಲಿನ ಸೈನ್ಯ ಸೆರೆ ಹಿಡಿದಿತ್ತು.

Pakistan to release Indian soldier, who strayed across LoC

ಮಹಾರಾಷ್ಟ್ರದ ದುಲೆ ಜಿಲ್ಲೆಯವರಾದ ಚಂದು ಅವರ ಬಿಡುಗಡೆ ಬಗ್ಗೆ ಪಾಕಿಸ್ತಾನ ಸರ್ಕಾರ ಇತ್ತೀಚೆಗೆ ಮಾಹಿತಿ ನೀಡಿತ್ತು. ಚಂದು ವಿರುದ್ಧದ ತನಿಖೆಯು ಪೂರ್ಣಗೊಂಡಿದ್ದು ಆತನು ಪ್ರಮಾದವಶಾತ್ ತಪ್ಪು ಮಾಡಿರುವುದರಿಂದ ಆತನನ್ನು ಬಿಡುಗಡೆಗೊಳಿಸುತ್ತಿರುವುದಾಗಿ ಹೇಳಿತ್ತು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Pakistan on Saturday said it was returning in a 'goodwill gesture' Indian soldier Chandu Babulal Chavan, who inadvertently crossed the LoC last year.
Please Wait while comments are loading...