ಬೆಲೆ ರೂ. 300 ದಾಟಿದರೂ ಭಾರತದ ಟೊಮೋಟೊ ಬೇಡವೆಂದ ಪಾಕ್

ಇಸ್ಲಮಾಬಾದ್, ಸೆಪ್ಟೆಂಬರ್ 27: ಪಾಕಿಸ್ತಾನದಲ್ಲಿ ಟೊಮೋಟೊ ದರದಲ್ಲಿ ಭಾರೀ ಏರಿಕೆಯಾಗಿದೆ. ಅದು ಎಷ್ಟು ಅಂತೀರಾ, ಕೆಜಿಗೆ 300 ರೂಪಾಯಿ ದಾಟಿ ಟೊಮೋಟೊ ದರ ಮುನ್ನುಗ್ಗುತ್ತಿದೆ. ಆದರೆ, ಭಾರತದಿಂದ ಬಂದ ಟೊಮೆಟೋ ಮಾತ್ರ ಬೇಡವೆಂದು ಅಲ್ಲಿನ ಸರಕಾರ ಪಟ್ಟು ಹಿಡಿದು ಕೂತಿದೆ.

ಭಾರತದಿಂದ ಯಾವುದೇ ಕಾರಣಕ್ಕೂ ಟೊಮೋಟೊವನ್ನು ಅಮದು ಮಾಡಿಕೊಳ್ಳುವುದಿಲ್ಲ ಎಂದು ಪಾಕಿಸ್ತಾನದ ಆಹಾರ ಸಚಿವ ಸಿಕಿಂದರ್‌ ಹಯಾತ್‌ ಬೋಸಾನ್‌ ಹೇಳಿದ್ದಾರೆ.

Pakistan rejects Indian tomatoes though prices soar

ಸಾಮಾನ್ಯವಾಗಿ ಪಾಕಿಸ್ತಾನ ತನ್ನ ದೇಶದಲ್ಲಿ ಟೊಮೋಟೊ ಕೊರತೆ ಉಂಟಾದರೆ ಭಾರತದಿಂದ ಅಮದು ಮಾಡಿಕೊಳುತಿತ್ತು. ಆದರೆ, ಈ ಬಾರಿ ಭಾರತದಿಂದ ಟೊಮೋಟೊ ಸಾಗಿಸುವ ವಾಹನಗಳನ್ನು ಪಾಕಿಸ್ತಾನದ ಗಡಿಯಲ್ಲಿ ತಡೆಯಲಾಗಿದೆ.

ಹಾಗೆ ನೋಡಿದರೆ ಟೊಮೋಟೊ ಆಮದು ಮಾಡಿಕೊಳ್ಳಲು ಸಿಂಧ್‌ ಪ್ರಾಂತ್ಯದ ಮಾರಾಟಗಾರರು ಕಾತುರಾಗಿದ್ದಾರೆ. ಆದರೆ ಸರಕಾರ ಮಾತ್ರ ಅದಕ್ಕೆ ಅವಕಾಶ ನೀಡುತ್ತಿಲ್ಲ.

"ಕೆಲವೇ ದಿನಗಳಲ್ಲಿ ಬಲೂಚಿಸ್ತಾನದಿಂದ ಟೊಮೋಟೊ ಮತ್ತು ಈರುಳ್ಳಿಯನ್ನು ಸರಬರಾಜು ಮಾಡಿಕೊಳ್ಳಲಾಗುವುದು. ಯಾವುದೇ ಕಾರಣಕ್ಕೂ ಭಾರತದಿಂದ ಮಾತ್ರ ತರಕಾರಿಗಳನ್ನು ಅಮದು ಮಾಡಿಕೊಳ್ಳುವುದಿಲ್ಲ," ಎಂದು ರಕ್ಷಣಾ ಸಚಿವರು ಖಡಕ್ ಆಗಿ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+