ಮೋದಿ ವಿರುದ್ದ ಮಾತನಾಡುತ್ತಿದ್ದಾಗ ಪಾಕ್ ರೈಲ್ವೆ ಸಚಿವರಿಗೆ ಆಗಿದ್ದೇನು ಗೊತ್ತಾ?
ಇಸ್ಲಾಮಾಬಾದ್, ಆಗಸ್ಟ್ 30: ಕಾಶ್ಮೀರಕ್ಕಾಗಿ ಅವಶ್ಯಕತೆಗಿಂತ ಹೆಚ್ಚು ತಲೆಕೆಡಿಸಿಕೊಂಡಿರುವ ಪಾಕಿಸ್ತಾನ, ಅವರ ಜೊತೆ ನಾವಿದ್ದೇವೆ ಎಂದು ಸಾರಲು "ಕಾಶ್ಮೀರಕ್ಕಾಗಿ ಮೂವತ್ತು ನಿಮಿಷ ಎದ್ದು ನಿಲ್ಲೋಣ" ಎಂದು ಪಾಕ್ ಪ್ರಧಾನಿಗಳು ಕರೆ ನೀಡಿದ್ದರು.
ಅದರಂತೇ, ಕಾರ್ಯಕ್ರಮವೊಂದರಲ್ಲಿ ಅಲ್ಲಿನ ರೈಲ್ವೆ ಸಚಿವರು, ಎದ್ದು ನಿಂತ ನಂತರ, ಭಾಷಣ ಮಾಡಲಾರಂಭಿಸಿ, ಭಾರತ ಮತ್ತು ಅದರಲ್ಲೂ ಪ್ರಮುಖವಾಗಿ ಮೋದಿ ವಿರುದ್ದ ಟೀಕೆ ಮಾಡಲಾರಂಭಿಸಿದರು.
ಪಾಕಿಸ್ತಾನದ ಗುರಿ ಭಾರತಕ್ಕಿಂತ ಹೆಚ್ಚಾಗಿ RSS! ಸಾಕ್ಷಿ ಇಲ್ಲಿದೆ ನೋಡಿ...
' Kashmiri Hour' ಎನ್ನುವ ಅಭಿಯಾನವನ್ನು ಪಾಕಿಸ್ತಾನದೆಲ್ಲಡೆ ಆಯೋಜಿಸಲಾಗಿತ್ತು. ರೈಲ್ವೆ ಸಚಿವ ಶೇಖ್ ರಶೀದ್ ಅಹಮದ್, ಈ ಕಾರ್ಯಕ್ರಮದಲ್ಲಿ ಭಾಗವಹಿಸಿ, ಭಾರತದ ಪ್ರಧಾನಿ, ಮೋದಿ ವಿರುದ್ದ ಮೈಕ್ ಹಿಡಿದುಕೊಂಡು ವಾಗ್ದಾಳಿ ನಡೆಸುತ್ತಿದ್ದರು.
ಆ ವೇಳೆ, ಇದ್ದಕ್ಕಿಂದ್ದಂತೇ ವಿದ್ಯುತ್ ಶಾಕ್ ಹೊಡೆದು, ಒಂದು ಕ್ಷಣ ರಶೀದ್ ತಬ್ಬಿಬ್ಬಾಗಿದ್ದು ಒಂದೆಡೆ, ಇನ್ನೊಂದು ಕಡೆ, ಈ ವಿಡಿಯೋ, ಸಾಮಾಜಿಕ ತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿ, ಅವರು ತೀವ್ರ ಮುಜುಗರ ಪಡುವಂತಾಯಿತು.
"ಭಾರತದ ಪ್ರಧಾನಿಯ ತಂತ್ರವೆಲ್ಲಾ ನಮಗೆ ತಿಳಿದಿದೆ" ಎಂದು ಹೇಳಿದಾಕ್ಷಣ ರಶೀದ್ ಅವರಿಗೆ ಇಲೆಕ್ಟ್ರಿಕ್ ಶಾಕ್ ಹೊಡಿದಿದೆ. ಕೂಡಲೇ ಸಾವರಿಸಿಕೊಂಡ ಅವರು, " ವಿದ್ಯುತ್ ಶಾಕ್ ನಂತರವೂ ಮೋದಿ ವಿರುದ್ದದ ಈ ಸಭೆಯ ಉತ್ಸಾಹವನ್ನು ಕುಗ್ಗಿಸಲು ಸಾಧ್ಯವಿಲ್ಲ" ಎಂದು ಹೇಳಿದರು. ನೆರೆದಿದ್ದವರೆಲ್ಲ ಚಪ್ಪಾಳೆ ಹೊಡೆದರು.
Sheikh Rasheed k mic mein Modi ne current bhej diya: pic.twitter.com/LsTobPov1q
— Naila Inayat नायला इनायत (@nailainayat) August 30, 2019
ಇದೇ ರಶೀದ್, ಬರುವ ಅಕ್ಟೋಬರ್ ತಿಂಗಳಲ್ಲಿ, ಕಾಶ್ಮೀರಕ್ಕಾಗಿ "ಭಾರತದ ಜೊತೆ ನಿರ್ಣಾಯಕ ಯುದ್ದ ನಡೆಯಲಿದೆ" ಎನ್ನುವ ಹೇಳಿಕೆಯನ್ನು ನೀಡಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದಾಗಿದೆ.