ಸಿಖ್ಖರಿಗೆ ಇಮ್ರಾನ್ ಖಾನ್ ನೀಡಿದ ಭರವಸೆ ಏನು?

ಇಸ್ಲಾಮಾಬಾದ್, ಸೆಪ್ಟೆಂಬರ್ 3: ಪಾಕಿಸ್ತಾನದ ನರೋವಲ್ ಜಿಲ್ಲೆಯಲ್ಲಿರುವ ಕರ್ತಾರ್ ಪುರ ಹಾಗೂ ನಂಕಾನಾ ಸಾಹಿಬ್ ಗುರುದ್ವಾರಗಳಿಗೆ ಯಾತ್ರಾರ್ಥಿಗಳಿಗೆ ಭೇಟಿ ನೀಡುವ ಅವಕಾಶವನ್ನು ಪಾಕಿಸ್ತಾನ ಸರ್ಕಾರ ನೀಡಲಿದೆ ಎಂದು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಭರವಸೆ ನೀಡಿದ್ದಾರೆ.

ಪಾಕಿಸ್ತಾನ ಮೂಲದ ಸಿಖ್ ಬಾಲಕಿಯನ್ನು ಅಪಹರಿಸಿ ಬಲವಂತವಾಗಿ ಮುಸ್ಲಿಂ ಧರ್ಮಕ್ಕೆ ಮತಾಂತರ ಮಾಡಿರುವ ಘಟನೆ ಬೆನ್ನಲ್ಲೇ ಇಮ್ರಾನ್ ಖಾನ್ ಭರವಸೆಯೊಂದು ನೀಡಿದ್ದಾರೆ.

ಗುರುನಾನಕ್ ದೇವ್‌ ಜಿ ಅವರ 550ನೇ ಜನ್ಮ ದಿನಾಚರಣೆ ಪ್ರಯುಕ್ತ ಕರ್ತಾರ್ ಪುರ ಹಾಗೂ ನಂಕಾನಾ ಸಾಹಿಬ್ ಗುರುದ್ವಾರಗಳಿಗೆ ಯಾತ್ರಾರ್ಥಿಗಳಿಗೆ ಭೇಟಿ ನೀಡುವ ಅವಕಾಶವನ್ನು ಪಾಕಿಸ್ತಾನ ಸರ್ಕಾರ ನೀಡಲಿದೆ ಎಂದು ಪಾಕ್ ಪ್ರಧಾನಿ ಇಮ್ರಾನ್ ಖಾನ್ ತಿಳಿಸಿದ್ದಾರೆ.

Pakistan President Imran Khan Promise To Sikhs

ಇಸ್ಲಾಮಾಬಾದ್‌ನ ಗವರ್ನರ್ ಹೌಸ್‌ನಲ್ಲಿ ನಡೆದ ಅಂತಾರಾಷ್ಟ್ರೀಯ ಸಿಖ್ ಸಮಾವೇಶದ ಸಂದರ್ಭದಲ್ಲಿ ಇಮ್ರಾನ್ ಖಾನ್ ಮಾತನಾಡಿ ಪಾಕಿಸ್ತಾನದಲ್ಲಿರುವ ಪ್ರತಿಯೊಬ್ಬ ಪ್ರಜೆಯ ಆಸೆಗಳನ್ನು ನೋಡಿಕೊಳ್ಳುವುದು ನಮ್ಮ ಕರ್ತವ್ಯ ಎಂದರು.

ಕರ್ತಾರ್‌ಪುರ ಮತ್ತು ನಂಕಾನಾ ಸಾಹಿಬ್ ಸಿಖ್ಖರಿಗೆ ಪವಿತ್ರವಾಗಿದ್ದು, ಮೆಕ್ಕಾ ಮತ್ತು ಮದೀನಾ ಮುಸ್ಲಿಮರಿಗೆ. ಸಿಖ್ ಯಾತ್ರಾರ್ಥಿಗಳಿಗೆ ಸಾಧ್ಯವಾದಷ್ಟು ಸುಲಭವಾಗಿ ಪ್ರವೇಶ ಕಲ್ಪಿಸುವುದಾಗಿ ಭರವಸೆ ನೀಡಿದ್ದೇನೆ ಎಂದು ಅವರು ಹೇಳಿದರು.

ಭಾರತ ಮತ್ತು ಪಾಕಿಸ್ತಾನವು ಕರ್ತಾರ್‌ಪುರ ಕಾರಿಡಾರ್‌ನಲ್ಲಿ ಸರಣಿ ಸಭೆಗಳನ್ನು ನಡೆಸಿದ್ದು, ಇದು ಡೇರಾ ಬಾಬಾ ನಾನಕ್ ಸಾಹಿಬ್ (ಭಾರತದ ಪಂಜಾಬ್‌ನಲ್ಲಿದೆ) ಮತ್ತು ಪಾಕಿಸ್ತಾನದ ಗುರುದ್ವಾರ ದರ್ಬಾರ್ ಸಾಹಿಬ್ ಕರ್ತಾರ್‌ಪುರದ ಸಿಖ್ ದೇವಾಲಯಗಳನ್ನು ಸಂಪರ್ಕಿಸುತ್ತದೆ.

ಪಾಕಿಸ್ತಾನದಲ್ಲಿ ಬಲವಂತದ ಮತಾಂತರದ ಎರಡು ಘಟನೆಗಳು ನಡೆದಿದ್ದು, ಆ ದೇಶದಲ್ಲಿ ಅಲ್ಪಸಂಖ್ಯಾತರ ಶೋಚನೀಯ ಪರಿಸ್ಥಿತಿ ಕುರಿತು ಬೇರೆ ರಾಷ್ಟ್ರಗಳು ಛೀಮಾರಿ ಹಾಕಿದ ಬಳಿಕ ಇಮ್ರಾನ್ ಖಾನ್ ಇಂತಹ ಹೇಳಿಕೆಗಳನ್ನು ನೀಡಿದ್ದಾರೆ.

ಹಲವು ದಿನಗಳವರೆಗೆ ನಾಪತ್ತೆಯಾಗಿದ್ದ ಜಗ್ಜಿತ್ ಕೌರ್ (19) ಅವರನ್ನು ಬಲವಂತವಾಗಿ ಇಸ್ಲಾಂಗೆ ಮತಾಂತರಗೊಳಿಸಿ ಪಾಕಿಸ್ತಾನದಲ್ಲಿ ಮುಸ್ಲಿಂ ವ್ಯಕ್ತಿಯನ್ನು ಮದುವೆಯಾಗುವಂತೆ ಮಾಡಿದ ನಂತರ ಗುರುವಾರ ಪತ್ತೆಯಾಗಿದ್ದರು.

ಗುರುದ್ವಾರ ತಂಬು ಸಾಹಿಬ್‌ನ 'ಗ್ರಂಥಿ' (ಪಾದ್ರಿ) ಭಗವಾನ್ ಸಿಂಗ್ ಅವರ ಪುತ್ರಿ, ಅವರು ಗನ್‌ಪಾಯಿಂಟ್‌ನಲ್ಲಿ ಇಸ್ಲಾಂಗೆ ಮತಾಂತರಗೊಂಡರು.

ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ಸುಕ್ಕೂರ್‌ನಲ್ಲಿರುವ ತನ್ನ ಕಾಲೇಜಿನಿಂದ ರೇಣುಕಾ ಕುಮಾರಿ ಎಂದು ಗುರುತಿಸಲ್ಪಟ್ಟ ಇನ್ನೊಬ್ಬ ಬಾಲಕಿಯನ್ನು ಅಪಹರಿಸಲಾಗಿದೆ ಎಂಬುದು ವರದಿಯಾಗಿದೆ.

ಈ ಅಪರಾಧಗಳನ್ನು ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಕೋರಿ ಭಾರತವು ಪಾಕಿಸ್ತಾನಕ್ಕೆ ಮಾಡಿದ ಮನವಿ ಬೆನ್ನಲ್ಲೇ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+