ಪಾಕ್ ಪ್ರಧಾನಿ ಹುದ್ದೆಗೆ ಶೆಹಬಾಜ್ ಅಭ್ಯರ್ಥಿ: ಇಮ್ರಾನ್ ಆಟ ಅಂತ್ಯ ಎಂದ ವಿಪಕ್ಷ ನಾಯಕಿ
ಇಸ್ಲಮಾಬಾದ್, ಮಾರ್ಚ್ 23: ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ವಿರುದ್ಧ ಅವಿಶ್ವಾಸ ನಿರ್ಣಯ ಅಂಗೀಕಾರಗೊಂಡರೆ, ಪಾಕಿಸ್ತಾನ್ ಮುಸ್ಲಿಂ ಲೀಗ್-ನವಾಜ್ (ಪಿಎಂಎಲ್-ಎನ್) ಪಕ್ಷದ ಮುಖ್ಯಸ್ಥ ಶೆಹಬಾಜ್ ಷರೀಫ್ ಅವರನ್ನು ಪಾಕಿಸ್ತಾನ ಪ್ರಧಾನ ಮಂತ್ರಿ ಹುದ್ದೆಗೆ ತನ್ನ ಅಭ್ಯರ್ಥಿಯನ್ನಾಗಿ ಮಾಡಲು ಪಿಎಂಎಲ್-ಎನ್ ಪಕ್ಷ ಮುಂದಾಗಿದೆ.
ಪಾಕಿಸ್ತಾನದ ಪ್ರತಿಪಕ್ಷಗಳು ಪ್ರಧಾನ ಮಂತ್ರಿಯ ಮುಂದಿನ ಅಭ್ಯರ್ಥಿಯ ನೇಮಕಾತಿಯ ಬಗ್ಗೆ ಸಭೆ ಸೇರಿ ನಿರ್ಧಾರ ಮಾಡಲಿದೆ. ಆದರೆ ಪಿಎಂಎಲ್-ಎನ್ ಶೆಹಬಾಜ್ ಷರೀಫ್ ಅವರನ್ನು ನಾಮನಿರ್ದೇಶನ ಮಾಡುತ್ತದೆ ಎಂದು ಸೋಮವಾರ ಪಿಎಂಎಲ್-ಎನ್ ಉಪಾಧ್ಯಕ್ಷೆ ಮರ್ಯಮ್ ನವಾಜ್ ಹೇಳಿದರು.
"ಇಮ್ರಾನ್ ಖಾನ್! ನಿಮ್ಮ ಆಟ ಮುಗಿದಿದೆ," ಎಂದು ಹೇಳಿದ ಮರಿಯಮ್ ನವಾಜ್, ಆಡಳಿತಾರೂಢ ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ಅಧಿಕೃತವಾಗಿ ಮುರಿದುಬಿದ್ದಿದೆ ಎಂದು ಉಲ್ಲೇಖ ಮಾಡಿದ್ದಾರೆ. "ಆಟದಲ್ಲಿ ಸೋತ ನಂತರ ಯಾರೂ ತನ್ನ ರಕ್ಷಣೆಗೆ ಬರುವುದಿಲ್ಲ ಎಂದು ಪ್ರಧಾನಿಗೆ ತಿಳಿದಿದೆ," ಎಂದು ಮರಿಯಮ್ ನವಾಜ್ ಹೇಳಿದರು. ಪಾಕಿಸ್ತಾನದ ದೈನಿಕ ದಿ ಎಕ್ಸ್‌ಪ್ರೆಸ್ ಟ್ರಿಬ್ಯೂನ್ ವರದಿ ಮಾಡಿದೆ.

ಇಸ್ಲಾಮಾಬಾದ್ ಹೈಕೋರ್ಟ್‌ನ ಹೊರಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮರ್ಯಮ್ ನವಾಜ್, "ತನ್ನ ವಿರುದ್ಧ ಅಂತರರಾಷ್ಟ್ರೀಯ ಪಿತೂರಿ ಇದೆ ಎಂದು ಇಮ್ರಾನ್ ಖಾನ್ ನಂಬಿದ್ದಾರೆ. ಆದರೆ ಅವರೇ ತಮ್ಮ ವಿರುದ್ಧವೇ ಪಿತೂರಿ ನಡೆಸುತ್ತಾರೆ. ತಮ್ಮ ಕರ್ತವ್ಯವನ್ನು ಪೂರೈಸಿದ್ದರೆ ಒಂದು ಮಿಲಿಯನ್ ಜನರನ್ನು ಸಜ್ಜುಗೊಳಿಸಲು ಯಾವುದೇ ಕಾರಣವಿರಲಿಲ್ಲ," ಎಂದು ಹೇಳಿದೆ.
ಪ್ರಧಾನಿ ಇಮ್ರಾನ್ ಖಾನ್ ವಿರುದ್ಧ ಅವಿಶ್ವಾಸ ಮತ
ಪ್ರಧಾನಿ ಇಮ್ರಾನ್ ಖಾನ್ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲು ಪಾಕಿಸ್ತಾನದ ರಾಷ್ಟ್ರೀಯ ಅಸೆಂಬ್ಲಿ ಶುಕ್ರವಾರ ಸಭೆ ಸೇರಲಿದೆ. ಪಾಕಿಸ್ತಾನ್ ಮುಸ್ಲಿಂ ಲೀಗ್-ನವಾಜ್ (ಪಿಎಂಎಲ್-ಎನ್) ಮತ್ತು ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ (ಪಿಪಿಪಿ) ಸುಮಾರು 100 ಶಾಸಕರು ಮಾರ್ಚ್ 8 ರಂದು ರಾಷ್ಟ್ರೀಯ ವಿಧಾನಸಭೆ ಸಚಿವಾಲಯದ ಮುಂದೆ ಅವಿಶ್ವಾಸ ನಿರ್ಣಯವನ್ನು ಸಲ್ಲಿಸಿದರು. ಆರ್ಥಿಕ ಬಿಕ್ಕಟ್ಟು ಮತ್ತು ಸುರುಳಿಯಾಕಾರದ ಹಣದುಬ್ಬರಕ್ಕೆ ಖಾನ್ ನೇತೃತ್ವದ ಪಿಟಿಐ ಸರ್ಕಾರ ಕಾರಣವಾಗಿದೆ ಎಂದು ಆರೋಪಿಸಿದರು.
ಇಮ್ರಾನ್ ಖಾನ್‌ನ ಪಿಟಿಐ ಪಕ್ಷದ 23 ಸಂಸದರೂ ಕೂಡಾ ಇಮ್ರಾನ್ ಖಾನ್ ಜೊತೆಯಾಗಿದ್ದಾರೆ. ಸರ್ಕಾರ ರಚನೆ ಮಾಡಬೇಕಾದರೆ, 172 ಸಂಸದರ ಬಲ ಅಗತ್ಯವಾಗಿದೆ. ಬಂಡಾಯದ ಕಾರಣ ಕೇವಲ 155 ಸಂಸದರ ಬೆಂಬಲ ಹೊಂದಿ ಇಮ್ರಾನ್ ಖಾನ್ ಪರದಾಡುವಂತಾಗಿದೆ. ಮಾರ್ಚ್ 25ರಂದು ಅವರ ಭವಿಷ್ಯ ನಿರ್ಧಾರವಾಗಲಿದೆ.
ಪಾಕಿಸ್ತಾನ ಪ್ರಧಾನ ಮಂತ್ರಿ ಇಮ್ರಾನ್ ಖಾನ್ ವಿರುದ್ಧದ ವಿರೋಧ ವಿಪಕ್ಷಗಳು ಮಂಡಿಸಿರುವ ಅವಿಶ್ವಾಸ ನಿರ್ಣಯದ ಚರ್ಚೆಗೆ ಮಾ.25ರಂದು ಸಂಸತ್ ಅಧಿವೇಶನ ಕರೆಯಲಾಗಿದೆ ಎಂದು ಪಾಕಿಸ್ತಾನ ರಾಷ್ಟ್ರೀಯ ಅಸೆಂಬ್ಲಿ ಸ್ಪೀಕರ್ ಅಸಾದ್ ಕೈಸರ್ ತಿಳಿಸಿದ್ದಾರೆ. (ಒನ್‌ಇಂಡಿಯಾ ಸುದ್ದಿ)












Click it and Unblock the Notifications