ತಲೆಮಾರುಗಳು ಮರೆಯದಂತಹ ದಾಳಿ ಮಾಡುತ್ತೇವೆ: ಪಾಕ್ ಎಚ್ಚರಿಕೆ

Posted By:
Subscribe to Oneindia Kannada

ಇಸ್ಲಾಮಾಬಾದ್, ನ 25 (ಪಿಟಿಐ) : ನಮಗಿರುವ ಮಿಲಿಟರಿ ಸಾಮರ್ಥ್ಯದ ಮುಂದೆ ಭಾರತ ನಮಗೆ ಲೆಕ್ಕವೇ ಅಲ್ಲ. ನಾವೇನಾದರೂ ಸರ್ಜಿಕಲ್ ಸ್ಟ್ರೈಕ್ ನಡೆಸಿದರೆ, ಭಾರತದ ತಲೆಮಾರುಗಳು ಮರೆಯಬಾರದು ಅಂತಹ ದಾಳಿ ನಡೆಸುತ್ತೇವೆ ಎಂದು ಪಾಕಿಸ್ತಾನದ ಮಿಲಿಟರಿ ಮುಖ್ಯಸ್ಥ ಜನರಲ್ ರಹೀಲ್ ಷರೀಫ್ ಎಚ್ಚರಿಕೆ ನೀಡಿದ್ದಾರೆ.

ಸಮಾರಂಭವೊಂದರಲ್ಲಿ ಮಾತನಾಡುತ್ತಿದ್ದ ರಹೀಲ್ ಷರೀಫ್, ನಮ್ಮ ಮಿಲಿಟರಿ ಭಾರತದ ಎಲ್ಲಾ ದಾಳಿಯನ್ನು ಎದುರಿಸುವ ಶಕ್ತಿಯನ್ನು ಹೊಂದಿದೆ. ಸರ್ಜಿಕಲ್ ದಾಳಿ ನಾವು ನಡೆಸಿದರೆ, ಭಾರತದ ಪಠ್ಯ ಪುಸ್ತಕದಲ್ಲಿ ಅದರ ಬಗ್ಗೆ ಅಳವಡಿಸುವಂತೆ ಮಾಡುತ್ತೇವೆಂದು ಷರೀಫ್ ಹೇಳಿದ್ದಾರೆ. (ನಿವೃತ್ತಿಗೂ ಮುನ್ನ ಭಾರತದ ವಿರುದ್ದ ರಕ್ತಾಕ್ಷರ)

Retiring Pakistan Military Chief General Raheel Sharif warning to India

ಸೇವಾ ನಿವೃತ್ತಿಯ ಅಂಚಿನಲ್ಲಿರುವ ಷರೀಫ್, ಮೋದಿ ಸರಕಾರಕ್ಕೆ ಈಗಾಗಲೇ ಸ್ಪಷ್ಟ ಸಂದೇಶವನ್ನು ನೀಡಿದ್ದೇವೆ. ಭಾರತದ ವಿರುದ್ದ ಹೋರಾಡ ಬೇಕಾದರೆ ನಾವು ಸಿದ್ದರಾಗಿದ್ದೇವೆ. ತಾಲಿಬಾಲ್ ಗಳಿಗೆ ಈಗಾಗಲೇ ನಾವು ಪಾಠ ಕಲಿಸಿದ್ದೇವೆ ಎಂದು ಷರೀಫ್ ಕಿಡಿಕಾರಿದ್ದಾರೆ.

ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಭಾರತದ ಪಡೆಗಳು ದಾಳಿ ನಡೆಸುತ್ತಿದ್ದರೂ, ಅದನ್ನು ನಿರಾಕರಿಸಿರುವ ಷರೀಫ್, ಇದೇ ನವೆಂಬರ್ 29ರಂದು ಸೇವೆಯಿಂದ ನಿವೃತ್ತರಾಗಲಿದ್ದಾರೆ.

ಇದೇ ಸಂದರ್ಭದಲ್ಲಿ ಮಾತಾನಾಡುತ್ತಿದ್ದ ಏರ್ ಚೀಫ್ ಮಾರ್ಷಲ್ ಸೊಹೈಲ್ ಅಮನ್, ಪಾಕಿಸ್ತಾನಕ್ಕೆ ಭಾರತ ಲೆಕ್ಕವೇ ಅಲ್ಲ ಮತ್ತು ಭಾರತವನ್ನು ನಾವು ಗಣನೆಗೇ ತೆಗೆದುಕೊಂಡಿಲ್ಲ. ಭಾರತ ಮೊದಲು ಕಾಶ್ಮೀರ ಸೇರಿದಂತೆ ತನ್ನ ಸಮಸ್ಯೆಗಳಲ್ಲು ಬಗೆಹರಿಸಿಕೊಳ್ಳಲಿ ಎಂದು ಅಮನ್ ಹೇಳಿದ್ದಾರೆ.

ಪಾಕಿಸ್ತಾನ - ಚೀನಾ ಮಧ್ಯೆ ನಡೆಯುತ್ತಿರುವ ಇಕಾನಮಿಕ್ ಕಾರಿಡರ್ ಪ್ರಾಜೆಕ್ಟನ್ನು ಉಲ್ಲೇಖಿಸಿ, ಪಾಕಿಸ್ತಾನದಲ್ಲಿ ನಡೆಯುತ್ತಿರುವ ಕೆಲವೊಂದು ಬೆಳವಣಿಗೆಗಳನ್ನು ನಮ್ಮ ಶತ್ರು ರಾಷ್ಟ್ರಗಳು ಸಹಿಸುತ್ತಿಲ್ಲ ಎಂದು ಅಮನ್ ಹೆಳಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
If we were to carry out any surgical strikes inside India, they will teach their future generations in their educational institutions about how Pakistan conducted those strikes, Pakistan Military Chief Raheel Sharif warning to India.
Please Wait while comments are loading...