ಪಾಕಿಸ್ತಾನ ನೆಲದಲ್ಲಿ ಉಗ್ರರ ಅಟ್ಟಹಾಸ, ತಾನು ಮಾಡಿದ್ದನ್ನ ತಾನೇ ಅನುಭವಿಸುತ್ತಿದೆ ಪಾಕ್ | Pakistan Military
ಪಾಕಿಸ್ತಾನ ಉಗ್ರರ ಪೋಷಕ ದೇಶವಾಗಿ ಮಾಡಬಾರದ್ದನ್ನೇಲ್ಲಾ ಮಾಡಿ, ತನ್ನ ಅಕ್ಕಪಕ್ಕದ ದೇಶಗಳಿಗೆ ನೆಮ್ಮದಿ ಕೊಡುತ್ತಿಲ್ಲ. ಅದರಲ್ಲೂ ಭಾರತದ ಕೈಯಲ್ಲಿ ಸರಿಯಾಗಿ ಪೆಟ್ಟು ತಿಂದರೂ ಪಾಕಿಸ್ತಾನ ತನ್ನ ಬುದ್ದಿ ಬದಲಾಯಿಸಿಕೊಂಡಿಲ್ಲ. ಇದರ ಪರಿಣಾಮ ಭಾರತ ಮತ್ತು ಪಾಕಿಸ್ತಾನ ನಡುವೆ ಕಳೆದ ವರ್ಷ ಒಂದು ಯುದ್ಧವೇ ನಡೆದು ಹೋಗಿತ್ತು, ಈ ಘಟನೆ ಬಳಿಕ ಕೂಡ ಪಾಕಿಸ್ತಾನ ಬದಲಾಗದೆ ಉಗ್ರರನ್ನ ಬೆಳೆಸುತ್ತಿದೆ ಎಂಬ ಆರೋಪ ಇದೆ. ಹೀಗಿದ್ದಾಗ ಇದೀಗ ಮತ್ತೊಮ್ಮೆ ಪಾಕಿಸ್ತಾನದಲ್ಲಿ ಉಗ್ರರು ಬಾಲ ಬಿಚ್ಚಿದ್ದು, ಪಾಕಿಸ್ತಾನ ಸೇನೆ ಮತ್ತು ಉಗ್ರರ ನಡುವೆ ದೊಡ್ಡ ಕಾಳಗ ನಡೆದಿದೆ.
ಹೌದು, ಪಾಕಿಸ್ತಾನ ತನ್ನ ಬುದ್ಧಿ ಸರಿ ಮಾಡಿಕೊಳ್ಳುವು ಬಿಡಿ ಅಕ್ಕಪಕ್ಕದ ದೇಶಗಳಿಗೂ ನೆಮ್ಮದಿ ನೀಡ್ತಿಲ್ಲ. ಒಂದೆಡೆ ಅಫ್ಘಾನಿಸ್ತಾನ ಪದೇ ಪದೇ ಪಾಕಿಸ್ತಾನ ವಿರುದ್ಧ ಗರಂ ಆಗುತ್ತಿದೆ, ಹೀಗಿದ್ದಾಗ ಭಾರತದ ಜೊತೆಗೆ ಕೂಡ ಪಾಕಿಸ್ತಾನ ಕಿರಿಕ್ ಮಾಡಲು ಕಾಯುತ್ತಲೇ ಇರುತ್ತದೆ. ಭಾರತ ಕೂಡ ಪಾಕಿಸ್ತಾನಕ್ಕೆ ಬುದ್ಧಿ ಕಲಿಸುತ್ತಾ ಬಂದಿದೆ. ಇಷ್ಟೆಲ್ಲದರ ನಡುವೆ, ತನ್ನ ನೆಲದಲ್ಲಿ ತಾನೇ ಸಾಕಿರುವ ಉಗ್ರರ ಕೈಯಲ್ಲಿ ಮೊನ್ನೆ ಮೊನ್ನೆಯಷ್ಟೇ ಸರಿಯಾಗಿ ಕಚ್ಚಿಸಿಕೊಂಡಿದೆ ಪಾಕಿಸ್ತಾನ. ಈಗ ಮತ್ತೊಮ್ಮೆ ಅದೇ ರೀತಿಯ ಘಟನೆ ನಡೆದಿದ್ದು, ಉಗ್ರರು ಪಾಕಿಸ್ತಾನದಲ್ಲಿ ಬಾಲ ಬಿಚ್ಚಿದ್ದಾರೆ.

ನಿಷೇಧಿತ ಸಂಘಟನೆಯಿಂದ ಭೀಕರ ದಾಳಿ
ವಾಯುವ್ಯ ಪಾಕಿಸ್ತಾನದ ಖೈಬರ್ ಪಖ್ತುನ್ಖ್ವಾ ಪ್ರಾಂತ್ಯದಲ್ಲಿ ಉಗ್ರರು ಹಾಗೂ ಪಾಕಿಸ್ತಾನ ಸೇನೆ ನಡುವೆ ಘೋರ ಕದನ ನಡೆದಿದೆ. ಪಾಕಿಸ್ತಾನದ ಗುಪ್ತಚರ ಮಾಹಿತಿ ಆಧಾರಿತ ಕಾರ್ಯಾಚರಣೆ ವೇಳೆ ನಡೆದ ಆತ್ಮಹತ್ಯೆ ದಾಳಿಯಲ್ಲಿ ಒಟ್ಟು ಇಬ್ಬರು ಭದ್ರತಾ ಸಿಬ್ಬಂದಿ ಸಾವನ್ನಪ್ಪಿದ್ದಾರೆ. ಈ ಬಗ್ಗೆ ಪಾಕಿಸ್ತಾನ ಸೇನೆ ಮಾಹಿತಿ ನೀಡಿದ್ದು, ಖೈಬರ್ ಪಖ್ತುನ್ಖ್ವಾ ಪ್ರಾಂತ್ಯದ ಬನ್ನು ಜಿಲ್ಲೆಯಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಐವರು ಉಗ್ರರು ಕೂಡ ಮೃತಪಟ್ಟಿದ್ದಾರೆ. ಫಿಟ್ನಾ-ಅಲ್-ಖವಾರಿಜ್ ಎಂಬ ನಿಷೇಧಿತ ಸಂಘಟನೆಗೆ ಈ ಉಗ್ರರು ಸೇರಿದ್ದಾರೆ, ಈ ಫಿಟ್ನಾ-ಅಲ್-ಖವಾರಿಜ್ ಎಂಬ ಹೆಸರು ನಿಷೇಧಿತ ತೆಹ್ರೀಕ್-ಎ-ತಾಲಿಬಾನ್ ಪಾಕಿಸ್ತಾನ್‌ಗೆ ಪರ್ಯಾಯ ಪದವಾಗಿದೆ.
ಸ್ಫೋಟಕ ತುಂಬಿದ ವಾಹನದಿಂದ ದಾಳಿ
ಆತ್ಮಹತ್ಯಾ ಬಾಂಬರ್ ಸೇರಿದಂತೆ ಖವಾರಿಜ್ ಸಂಘಟನೆ ಸದಸ್ಯರು ಇದೇ ಜಾಗದಲ್ಲಿ ಸೇರಿದ್ದಾರೆ ಎನ್ನುವ ಮಾಹಿತಿ ಹಿನ್ನೆಲೆ ಪಾಕಿಸ್ತಾನ ಸೇನೆ ಕಾರ್ಯಾಚರಣೆ ನಡೆಸಿತ್ತು. ಈ ವೇಳೆ ಪಾಕ್‌ನ ಭದ್ರತಾ ಪಡೆಗಳ ಬೆಂಗಾವಲು ಪಡೆ ವಾಹನಗಳನ್ನ ಉಗ್ರರು ಗುರಿಯಾಗಿಸಿ ದಾಳಿ ಶುರು ಮಾಡಿದ್ದಾರೆ. ದಿಢೀರ್ ಎಂದು ಈ ವೇಳೆ ಆತ್ಮಹತ್ಯಾ ದಾಳಿ ಕೂಡ ನಡೆಸಲಾಗಿದ್ದು, ತೀವ್ರವಾದ ಗುಂಡಿನ ಚಕಮಕಿಯ ನಂತರ ಐವರು ಉಗ್ರರ ಹೆಣ ಬೀಳಿಸಲಾಗಿದೆ. ಈ ಸಮಯದಲ್ಲೇ ಉಗ್ರರು ಸ್ಫೋಟಕ ತುಂಬಿದ ವಾಹನವನ್ನು ಮತ್ತೊಂದು ವಾಹನಕ್ಕೆ ಡಿಕ್ಕಿ ಹೊಡೆಸಿ ಸ್ಫೋಟಿಸಿದ್ದಾರೆ ಎಂದು ಆರೋಪಿಸಲಾಗಿದೆ. ಘಟನೆಯಲ್ಲಿ ಇಬ್ಬರು ಪಾಕ್ ಸೇನಾಧಿಕಾರಿಗಳು ಕೂಡ ಜೀವ ಬಿಟ್ಟಿದ್ದು, ತಾನೇ ಉಗ್ರರನ್ನು ಬೆಳೆಸಿ ಈಗ ತಾನೇ ಅದನ್ನ ಅನುಭವಿಸುವ ಪರಿಸ್ಥಿತಿ ಎದುರಾಗಿದೆ ಪಾಕಿಸ್ತಾನಕ್ಕೆ.












Click it and Unblock the Notifications