ಮುಗೀತು ಇಮ್ರಾನ್ ಕಥೆ, ಪಾಕಿಸ್ತಾನಕ್ಕೆ ಮತ್ತೆ ನವಾಜ್ ಆಡಳಿತ?

ಪಾಕಿಸ್ತಾನ ಅನ್ನೋ ದೇಶವೊಂದರ ಕಥೆಯನ್ನ ಹೇಳುತ್ತಾ ಸಾಗಿದರೆ ಕಳೆದ 75 ವರ್ಷದಲ್ಲಿ, ಈ ದೇಶ ಮಾಡಿಕೊಂಡ ಎಡವಟ್ಟುಗಳ ರಾಶಿಯೇ ಹೊರಬೀಳುತ್ತದೆ. ಸಾಲು ಸಾಲು ಸಮಸ್ಯೆ ಹಾಗೂ ಹಲವು ಸಂಕಷ್ಟಗಳಲ್ಲಿ ಸಿಲುಕಿರುವ ಈ ದೇಶ ಇನ್ನೂ ಬದಲಾಗಿಲ್ಲ, ಮುಂದೆಯೂ ಬದಲಾಗುವ ಸೀನ್ ಕಾಣ್ತಿಲ್ಲ. ಇಂತಿಪ್ಪ ಪಾಕಿಸ್ತಾನದಲ್ಲಿ ಈಗ ಎಲೆಕ್ಷನ್ ನಡೆದಿದ್ದು ಇನ್ನೇನು ಕೆಲವೇ ಗಂಟೆಗಳಲ್ಲಿ ಮಾಜಿ ಪ್ರಧಾನಿ ನವಾಜ್‌ಗೆ ಪಟ್ಟಾಭಿಷೇಕ ಗ್ಯಾರಂಟಿ ಎನ್ನಲಾಗಿದೆ!

ಭಾರತದ ರಾಜಕೀಯ ಅಂದ್ರೆ ಇಡೀ ಜಗತ್ತಿಗೇ ಮಾದರಿ, ಯಾಕಂದ್ರೆ ನಮ್ಮ ದೇಶದಲ್ಲಿರುವ ರಾಜಕೀಯ ಸುವ್ಯವಸ್ಥೆ ಪಾಕಿಸ್ತಾನದ ರೀತಿಯ ದೇಶದಲ್ಲಿ ಕಾಣುವುದು ಕಷ್ಟ. ಪಾಕ್‌ನಲ್ಲಿ, ಬರೀ ರಕ್ತಸಿಕ್ತ ರಾಜಕೀಯ. ಈ ಮಾತಿಗೆ ಪುಷ್ಠಿ ನೀಡುವಂತೆ ಅಲ್ಲಿನ ಮಾಜಿ ಪ್ರಧಾನಿಯನ್ನ ಅಂದ್ರೆ ಇಮ್ರಾನ್ ಖಾನ್ ಅವರನ್ನ ಈಗಾಗಲೇ ಜೈಲಿಗೆ ಹಾಕಲಾಗಿದೆ. ಹಾಗೇ ಅಲ್ಲಿನ ಭ್ರಷ್ಟ ಮಾಜಿ ಪ್ರಧಾನಿ ನವಾಜ್ ಷರೀಫ್ ಅವರಿಗೆ ಮತ್ತೊಮ್ಮೆ ಪಟ್ಟ ಕಟ್ಟಲು ಎಲ್ಲಾ ಸಿದ್ಧತೆಗಳು ಸಾಗಿವೆ. ಈ ಮೂಲಕ ಅರಾಜಕತೆ ತವರೂರು ಪಾಕಿಸ್ತಾನದಲ್ಲಿ ಸಂಚಲನ ಸೃಷ್ಟಿಯಾಗಿದೆ.

Pakistan Election Results: Nawaz Sharif May Take Oath For 4Th Time As Pakistan PM

12.85 ಕೋಟಿ ಮತದಾರರು

ಚುನಾವಣೆ ಹಿನ್ನೆಲೆ ಪಾಕಿಸ್ತಾನದಲ್ಲಿ ಮೊಬೈಲ್‌, ಇಂಟರ್‌ನೆಟ್‌ ಸಂಪರ್ಕ ಸ್ಥಗಿತ ಮಾಡಿದ್ದು ಈಗಾಗಲೇ ಜನ ಮತ ಚಲಾಯಿಸಿದ್ದಾರೆ. ನವಾಜ್ ಷರೀಫ್ ಅವರ ಪಾಕಿಸ್ತಾನ್ ಮುಸ್ಲಿಂ ಲೀಗ್-ನವಾಜ್ ಅಂದ್ರೆ ಪಿಎಂಎಲ್-ಎನ್ ಪಕ್ಷ ಚುನಾವಣೆಯಲ್ಲಿ ದೊಡ್ಡ ಪಕ್ಷವಾಗಿ ಹೊರಹೊಮ್ಮುವ ಎಲ್ಲಾ ಸಾಧ್ಯತೆ ದಟ್ಟವಾಗಿದೆ. ಬಿಗಿ ಭದ್ರತೆ ನಡುವೆ ನಡೆದ ಮತದಾನಕ್ಕೆ ಉಗ್ರರು ತುಂಬಾನೇ ಟಾರ್ಚರ್ ಕೊಟ್ಟಿದ್ದಾರೆ. 12.85 ಕೋಟಿ ಮತದಾರರು ಹಕ್ಕು ಚಲಾಯಿಸಲು ದೇಶದಾದ್ಯಂತ ಸಾರ್ವಜನಿಕ ರಜಾ ದಿನ ಕೂಡ ಘೋಷಿಸಲಾಗಿತ್ತು. ಮತದಾನ ಮುಗಿದ ತಕ್ಷಣವೇ ಮತ ಎಣಿಕೆ ಆರಂಭವಾಗಿದೆ. ಹೀಗಾಗಿ ಇನ್ನೇನು ಕೆಲ ಗಂಟೆಯಲ್ಲಿ ರಿಸಲ್ಟ್ ಹೊರಬೀಳುತ್ತೆ ಎನ್ನಲಾಗಿದೆ.

ಸೇನೆಯ ಬೆಂಬಲದೊಂದಿಗೆ ಅಧಿಕಾರ?

ಅಂದಹಾಗೆ ಪಾಕಿಸ್ತಾನದ ಲೆಜೆಂಡ್ ಕ್ರಿಕೆಟರ್ ಕಂ ರಾಜಕಾರಣಿ ಇಮ್ರಾನ್ ಖಾನ್ ಸಂಕಷ್ಟ ಎದುರಿಸುತ್ತಿದ್ದಾರೆ. ಅದರಲ್ಲೂ ಇಮ್ರಾನ್ ಚುನಾವಣೆ ಎದುರಿಸಬಾರದು ಅನ್ನೋ ಕಾರಣ, ಹಲವು ರೀತಿಯ ನಿರ್ಬಂಧ ಹೇರಲಾಗಿತ್ತು ಎಂಬ ಆರೋಪವೂ ಇದೆ. ಪ್ರತಿಸ್ಪರ್ಧಿ ಇಮ್ರಾನ್ ಖಾನ್ ಪಕ್ಷದ ವಿರುದ್ಧ ಈ ರೀತಿಯಾಗಿ ನವಾಜ್ ಷರೀಫ್ ಪಕ್ಷ ನಡೆಸಿರುವ ದಬ್ಬಾಳಿಕೆ ಕೂಡ ಪಾಕಿಸ್ತಾನದಲ್ಲಿ ಹಿಂಸೆ ಎಬ್ಬಿಸುವ ಭಯ ಹುಟ್ಟಿಸಿದೆ. ಇಷ್ಟೆಲ್ಲಾ ಅಡೆತಡೆ ನಡುವೆ ಕೂಡ, ನವಾಜ್ ಷರೀಫ್ ಅವರು ಸೇನೆಯ ಬೆಂಬಲದೊಂದಿಗೆ ನಾಲ್ಕನೇ ಅವಧಿಗೆ ಅಧಿಕಾರ ಹಿಡಿಯುವ ವಿಶ್ವಾಸ ಹೊಂದಿದ್ದಾರೆ.

Pakistan Election Results: Nawaz Sharif May Take Oath For 4Th Time As Pakistan PM

265 ಸ್ಥಾನಕ್ಕೆ ಚುನಾವಣೆ

ಅಷ್ಟಕ್ಕೂ ಪಾಕಿಸ್ತಾನದ ಚುನಾವಣೆ ಆಯೋಗದ ಪ್ರಕಾರ ಪಾಕ್ ಸಂಸತ್‌ನ 266 ಸ್ಥಾನಗಳ ಪೈಕಿ 265 ಸ್ಥಾನಕ್ಕೆ ಚುನಾವಣೆ ನಡೆಸಲಾಗಿದೆ. 5,121 ಅಭ್ಯರ್ಥಿಗಳು ಮತ್ತು ನಾಲ್ಕು ಪ್ರಾಂತೀಯ ವಿಧಾನಸಭೆಗಳಿಗೆ ನಡೆದ ಚುನಾವಣೆಯಲ್ಲಿ 12,695 ಅಭ್ಯರ್ಥಿಗಳು ಕಣದಲ್ಲಿ ಇದ್ದಾರೆ. ಹೀಗೆ ಪಾಕಿಸ್ತಾನದ ಫಲಿತಾಂಶಕ್ಕೂ ಕೌಂಟ್‌ಡೌನ್ ಶುರುವಾಗಿದೆ. ಇನ್ನೇನು ಕೆಲವೇ ಗಂಟೆಗಳಲ್ಲಿ ರಿಸಲ್ಟ್ ಹೊರಬೀಳುವ ನಿರೀಕ್ಷೆ ಇದೆ.

ಒಟ್ನಲ್ಲಿ ಭಾರತದ ಶತ್ರು ದೇಶದಲ್ಲಿ ಚುನಾವಣೆ ಮುಕ್ತಾಯ ಆಗಿದೆ. ಇನ್ನೇನು ಅಲ್ಲಿ ಹೊಸ ಸರ್ಕಾರ ಕೂಡ ಅಸ್ತಿತ್ವಕ್ಕೆ ಬರಲಿದೆ. ಹೀಗಾಗಿ ಭಾರತ ಕೂಡ ಪಾಕಿಸ್ತಾನದ ಪರಿಸ್ಥಿತಿಯನ್ನು ಅತ್ಯಂತ ಸೂಕ್ಷ್ಮವಾಗಿ ಗಮನಿಸುತ್ತಿದೆ. ಈ ನಡುವೆ ಭಾರತ & ಪಾಕಿಸ್ತಾನ ಗಡಿಯಲ್ಲಿ ಹೆಚ್ಚು ಕಟ್ಟೆಚ್ಚರ ವಹಿಸಿದೆ ಭಾರತೀಯ ಸೇನೆ. ಪಾಕಿಸ್ತಾನದಲ್ಲಿ ಹಿಂಸಾಚಾರ ಭುಲೇಳುವ ಕುರಿತು, ಆತಂಕ ಕೂಡ ಆವರಿಸಿದೆ. ಹೀಗಾಗಿ ಅಕ್ಕಪಕ್ಕದ ದೇಶಗಳು ಅಲರ್ಟ್ ಆಗಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+