ಮೋದಿ ವಿಮಾನ ನಮ್ಮ ಮೇಲೆ ಹೋಗುವಂತಿಲ್ಲ ಎಂದ ಪಾಕಿಸ್ತಾನ

Recommended Video

      ಮೋದಿ ವಿಮಾನ ಪಾಕಿಸ್ತಾನದ ಮೇಲೆ ಹೋಗುವಂತಿಲ್ಲವಂತೆ | Oneindia Kannada

      ಇಸ್ಲಾಮಾಬಾದ್, ಸೆಪ್ಟೆಂಬರ್ 18: ಪ್ರಧಾನಿ ನರೇಂದ್ರ ಮೋದಿ ಅವರ ಮುಂಬರುವ ಅಮೆರಿಕ ಪ್ರವಾಸದ ವೇಳೆ ವಿಮಾನವು ತನ್ನ ವಾಯು ನೆಲೆಯ ಮೂಲಕ ಹಾದುಹೋಗಲು ಅವಕಾಶ ನೀಡಬೇಕೆಂಬ ಭಾರತದ ಮನವಿಯನ್ನು ಪಾಕಿಸ್ತಾನ ತಿರಸ್ಕರಿಸಿದೆ.

      ಬುಧವಾರ ಬೆಳಿಗ್ಗೆ ಭಾರತವು ಸೆ. 21-27ರಿಂದ ಅಮೆರಿಕ ಪ್ರವಾಸ ಕೈಗೊಳ್ಳಲಿರುವ ಪ್ರಧಾನಿ ನರೇಂದ್ರ ಮೋದಿ ಅವರ ಪ್ರಯಾಣಕ್ಕೆ ಪಾಕಿಸ್ತಾನದ ವಾಯು ಪ್ರದೇಶವನ್ನು ಬಳಸಿಕೊಳ್ಳಲು ಅವಕಾಶ ನೀಡುವಂತೆ ಮನವಿ ಮಾಡಿತ್ತು.

      ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪಾಕಿಸ್ತಾನದ ವಿದೇಶಾಂಗ ಸಚಿವ ಶಾ ಮಹಮೂದ್ ಖುರೇಷಿ, ನಮ್ಮ ವಾಯುನೆಲೆಯ ಮೇಲೆ ಪ್ರಧಾನಿ ಮೋದಿ ಅವರ ವಿಮಾನ ಹಾದುಹೋಗಲು ನಾವು ಅವಕಾಶ ನೀಡುವುದಿಲ್ಲ ಎಂದು ಹೇಳಿದ್ದಾರೆ.

      Pakistan Denies Indias Request Allow Air Space Modis Flight US Visit

      ಭಾರತವು ಮೊದಲು ಮನವಿ ಮಾಡಿದಾಗ ಈ ಬಗ್ಗೆ ಉನ್ನತ ನಾಯಕರ ಅಭಿಪ್ರಾಯ ಪಡೆದು ಪ್ರಕಟಿಸುವುದಾಗಿ ಪಾಕಿಸ್ತಾನ ತಿಳಿಸಿತ್ತು. ಬಳಿಕ ಅದು ವಾಯುನೆಲೆಯನ್ನು ಬಳಸಿಕೊಳ್ಳಲು ಅವಕಾಶ ಕೊಡುವುದಿಲ್ಲ ಎಂದು ಸ್ಪಷ್ಟಪಡಿಸಿದೆ.

      ಈ ತಿಂಗಳ ಆರಂಭದಲ್ಲಿ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರ ವಿದೇಶ ಪ್ರಯಾಣದ ವೇಳೆ ಕೂಡ ವಾಯುನೆಲೆಯನ್ನು ಬಳಸಿಕೊಳ್ಳಲು ಪಾಕಿಸ್ತಾನ ಅನುಮತಿ ನಿರಾಕರಿಸಿತ್ತು. ಬಾಲಕೋಟ್ ಮೇಲೆ ಭಾರತದ ವಾಯುಪಡೆಗಳ ದಾಳಿಯ ಬಳಿಕ ಪಾಕಿಸ್ತಾನವು ತನ್ನ ವಾಯುನೆಲೆಯಲ್ಲಿ ಭಾರತದ ವಿಮಾನಗಳ ಹಾರಾಟಕ್ಕೆ ನಿಷೇಧ ಹೇರಿತ್ತು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+