• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಪಾಕ್ CJ ಗುಲ್ಜಾರ್‌ರಿಂದ ಪುನರ್‌ನಿರ್ಮಾಣಗೊಂಡ ದೇಗುಲ ಉದ್ಘಾಟನೆ

|
Google Oneindia Kannada News

ಇಸ್ಲಾಮಾಬಾದ್, ನವೆಂಬರ್ 09: ಕಿಡಿಗೇಡಿಗಳಿಂದ ಧ್ವಂಸಗೊಂಡಿದ್ದ ದೇವಾಲಯ ಮರುನಿರ್ಮಾಣಗೊಂಡಿದ್ದು, ಪಾಕಿಸ್ತಾನ ಮುಖ್ಯ ನ್ಯಾಯಮೂರ್ತಿ ಗಲ್ಜಾರ್ ಉದ್ಘಾಟಿಸಿದ್ದಾರೆ.

ಕಳೆದ ವರ್ಷ ಡಿಸೆಂಬರ್ ತಿಂಗಳಿನಲ್ಲಿ ಸ್ಥಳೀಯ ಧರ್ಮಗುರುಗಳು ಹಾಗೂ ಇತರರ ನೇತೃತ್ವದ ಗುಂಪೊಂದು ದೇವಾಲಯದ ಮೇಲೆ ದಾಳಿ ಮಾಡಿ ಅದನ್ನು ಸಂಪೂರ್ಣವಾಗಿ ಕೆಡವಿತ್ತು.

ಈ ದೇವರ ಮೀನುಗಳಿಗೆ ಆಹಾರ ಹಾಕಿದರೆ ಚರ್ಮ ರೋಗ ಮಾಯ!ಈ ದೇವರ ಮೀನುಗಳಿಗೆ ಆಹಾರ ಹಾಕಿದರೆ ಚರ್ಮ ರೋಗ ಮಾಯ!

ಇದೀಗ ಪಾಕಿಸ್ತಾನದ ಕರಕ್, ಖೈಬರ್ ಫಕ್ತುನ್‌ಕ್ವಾ ಪ್ರದೇಶದಲ್ಲಿ ಮರು ನಿರ್ಮಾಣಗೊಂಡಿರುವ ಶ್ರೀ ಪರಮಹಂಸ ಜೀ ಮಹಾರಾಜ್ ದೇವಾಲಯವನ್ನು ಗುಲ್ಜಾರ್ ಅಹ್ಮದ್ ಉದ್ಘಾಟಿಸಿದ್ದಾರೆ ಎಂದು ಎಕ್ಸ್‌ಪ್ರೆಸ್ಟ ಟ್ರಿಬ್ಯೂನ್ ವರದಿ ಮಾಡಿದೆ.

ಈ ಕುರಿತು ನ್ಯಾ. ಗುಲ್ಜಾರ್ ಮಾತನಾಡಿ, ಅಲ್ಪಸಂಖ್ಯಾತರ ಹಕ್ಕುಗಳ ರಕ್ಷಣೆಗೆ ಸುಪ್ರೀಂಕೋರ್ಟ್ ಬದ್ಧವಾಗಿದೆ. ಈ ಬದ್ಧತೆ ಭವಿಷ್ಯದಲ್ಲಿಯೂ ಮುಂದುವರೆಯಲಿದೆ ಎಂದು ಹೇಳಿದ್ದಾರೆ.

ಪ್ರತಿಯೊಬ್ಬರೂ ತಮ್ಮ ಧಾರ್ಮಿಕ ಪವಿತ್ರ ಸ್ಥಳಗಳನ್ನು ಗೌರವಿಸುತ್ತಾರೆ. ಯಾರ ಧಾರ್ಮಿಕ ಸ್ಥಳಕ್ಕೆ ಹಾನಿ ಮಾಡುವ ಅಧಿಕಾರ ಯಾರಿಗೂ ಇಲ್ಲ ಎಂದು ತಿಳಿಸಿದ್ದಾರೆ.
ಪಾಕಿಸ್ತಾನದ ಸಂವಿಧಾನದ ಪ್ರಕಾರ ಬೇರೆಲ್ಲಾ ಸಮುದಾಯಗಳಂತೆ ಹಿಂದೂಗಳಿಗೂ ಸಮಾನ ಹಕ್ಕುಗಳಿವೆ.

ಪಾಕಿಸ್ತಾನದಲ್ಲಿರುವ ಐತಿಹಾಸಿಕ ದೇವಾಲಯವನ್ನು ಪುನರಾರಂಭಿಸಿದರೆ , ಸಾವಿರಾರು ಹಿಂದೂಗಳು ಅವುಗಳಿಗೆ ಭೇಟಿ ನೀಡುತ್ತಾರೆ. ಇದು ವಿಶ್ವ ಮಟ್ಟದಲ್ಲಿ ದೇಶಕ್ಕೆ ಕೀರ್ತಿ ತಂದುಕೊಡಲಿದೆ ಎಂದರು.

ಅಲ್ಪಸಂಖ್ಯಾತರ ಧಾರ್ಮಿಕ ಸ್ವಾತಂತ್ರ್ಯದ ರಕ್ಷಣೆಯ ಭರವಸೆಯ ವಾಗ್ದಾನವನ್ನು ಸುಪ್ರೀಂಕೋರ್ಟ್ ನೀಡುತ್ತದೆ. ಅಲ್ಪಸಂಖ್ಯಾತರಿಗೆ ರಕ್ಷಣೆ ನೀಡುವುದು ಸಂವಿಧಾನದ ಅಡಿಯಲ್ಲಿ ಎಲ್ಲರ ಕರ್ತವ್ಯವೂ ಆಗಿದೆ ಎಂದರು.

ಕರಕ್‌ನಲ್ಲಿ ನಡೆದ ದೇಗುಲ ಧ್ವಂಸ ಘಟನೆಯತ್ತ ಸಕಾಲಕ್ಕೆ ಗಮನಿಸಿದ್ದಕ್ಕಾಗಿ ಮುಖ್ಯ ನ್ಯಾಯಮೂರ್ತಿಗೆ ಕೃತಜ್ಞತೆ ಸಲ್ಲಿಸುವುದಾಗಿ ಪಾಕಿಸ್ತಾನದ ಹಿಂದೂ ಕೌನ್ಸಿಲ್‌ನ ಪೋಷಕ ಹಾಗೂ ಪಿಟಿಐ ಮುಖಂಡ ರಮೇಶ್ ಕುಮಾರ್ ತಿಳಿಸಿದ್ದಾರೆ.

ಇದೇ ವರ್ಷ ಆಗಸ್ಟ್ ತಿಂಗಳಲ್ಲಿ ಪಾಕಿಸ್ತಾನದಲ್ಲಿ ಹಿಂದೂ ದೇವಸ್ಥಾನಗಳ ಮೇಲೆ ದಾಳಿ ನಡೆದಿದ್ದು, ರಹೀಮ್‌ ಯಾ ಖಾನ್‌ ಜಿಲ್ಲೆಯ ಭೋಂಗ್‌ ನಗರದಲ್ಲಿ ಗಣೇಶನ ದೇವಾಲಯವನ್ನು ಉದ್ರಿಕ್ತರ ಗುಂಪು ಧ್ವಂಸಗೊಳಿಸಿತ್ತು.

ಘಟನೆ ಬಗ್ಗೆ ಪಾಕಿಸ್ತಾನದ ರಾಜಕಾರಣಿ ಹಾಗೂ ಹಿಂದೂ ಸಮುದಾಯದ ನಾಯಕ ರಮೇಶ್‌ ಕುಮಾರ್‌ ವಂಕ್ವಾಣಿ ವಿಡಿಯೋಗಳನ್ನು ಹಂಚಿಕೊಂಡಿದ್ದರು, ಉದ್ರಿಕ್ತರ ಗುಂಪು ಮೂರ್ತಿಗಳನ್ನು, ದೇವಸ್ಥಾನವನ್ನು ಧ್ವಂಸ ಮಾಡುತ್ತಿರುವುದು ಸ್ಪಷ್ಟವಾಗಿ ಕಾಣುತ್ತಿತ್ತು.

ಕಳೆದ ವಾರ ಎಂಟು ವರ್ಷದ ಹಿಂದೂ ಬಾಲಕನೋರ್ವ ಪ್ರಾರ್ಥನಾ ಸ್ಥಳದ ಬಳಿ ಮೂತ್ರ ಮಾಡಿದ್ದ ಕೇಸ್‌ನಲ್ಲಿ ಜಾಮೀನು ಪಡೆದ ಬಳಿಕ ಉದ್ರಿಕ್ತರ ಗುಂಪು ದೇವಸ್ಥಾನದ ಮೇಲೆ ದಾಳಿ ನಡೆಸಿದೆ.

ವೈರಲ್‌ ಆಗಿರುವ ವಿಡಿಯೋದಲ್ಲಿ ಗುಂಪೊಂದು ಕೈಯಲ್ಲಿ ದೊಣ್ಣೆಗಳನ್ನು ಹಿಡಿದುಕೊಂಡು ರಾಜಾರೋಷವಾಗಿ ಪಟ್ಟಣದಲ್ಲಿ ಧಾರ್ಮಿಕ ಘೋಷಣೆಗಳನ್ನು ಕೂಗುತ್ತಾ ಹೋಗುತ್ತಿರುವುದು ದಾಖಲಾಗಿತ್ತು.

English summary
Chief Justice of Pakistan (CJP) Gulzar Ahmed inaugurated the rebuilt Shri Param Hans Ji Maharaj temple in Karak, Khyber-Pakhtunkhwa (KP) on the occasion of Diwali and felicitated the community on the special occasion, The Express Tribune reported.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
Desktop Bottom Promotion