ಪಾಕಿಸ್ತಾನದಲ್ಲೂ ಟಿಕ್‌ಟಾಕ್ ಆ್ಯಪ್ ನಿಷೇಧ: ಕೊಟ್ಟ ಕಾರಣವೇನು?

ಇಸ್ಲಾಮಾಬಾದ್, ಅಕ್ಟೋಬರ್ 09: ಪಾಕಿಸ್ತಾನವೂ ಕೂಡ ಚೀನಾದ ಟಿಕ್‌ಟಾಕ್ ಆ್ಯಪ್‌ನ್ನು ನಿಷೇಧಿಸಿದೆ.

ಈ ಮೊದಲು ಭಾರತವು ಟಿಕ್‌ಟಾಕ್ ಆ್ಯಪ್ ಬ್ಯಾನ್ ಮಾಡಿತ್ತು. ಬಳಿಕ ಹಲವು ರಾಷ್ಟ್ರಗಳು ಕೂಡ ಈ ಕುರಿತು ಧ್ವನಿ ಎತ್ತಿದ್ದವು. ಇದೀಗ ಚೀನಾ ಮಿತ್ರರಾಷ್ಟ್ರ ಪಾಕಿಸ್ತಾನ ಸದ್ದಿಲ್ಲದೆ ಚೀನಾಗೆ ಶಾಕ್ ನೀಡಿದೆ.

ಪಾಕಿಸ್ತಾನ ಸರ್ಕಾರ ಈ ಹಿಂದೆ ಜುಲೈನಲ್ಲೇ ಚೀನಾಗೆ ಎಚ್ಚರಿಕೆ ನೀಡಿತ್ತು. ಟಿಕ್ ಟಾಕ್ ನಲ್ಲಿ ಅಶ್ಲೀಲ, ಅನೈತಿಕ, ಕಾನೂನು ಬಾಹಿರ ವಿಡಿಯೋಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಆ್ಯಪ್ ಅನ್ನು ನಿಷೇಧಿಸುವುದಾಗಿ ಎಚ್ಚರಿಸಿತ್ತು.

Pakistan Blocks Chinese App TikTok Over Vulgar Content Report

ಪಾಕಿಸ್ತಾನ ಸರ್ಕಾರದ ಸೂಚನೆಗಳನ್ನು ಪಾಲಿಸುವಲ್ಲಿ ಚೀನಾ ಆ್ಯಪ್ ವಿಫಲವಾಗಿದೆ. ಹೀಗಾಗಿ ಬ್ಯಾನ್ ಮಾಡುತ್ತಿದ್ದೇವೆ ಎಂದು ಪಾಕಿಸ್ತಾನ ಟೆಲಿಕಾಂ ಪ್ರಾಧಿಕಾರ ಆದೇಶ ಹೊರಡಿಸಿದೆ.

ಆದರೆ ಇಂತಹ ವಿಡಿಯೋಗಳು ಹೆಚ್ಚಾಗುತ್ತಿದ್ದರಿಂದ ಯುವಜನತೆ, ಮಕ್ಕಳ ಮೇಲೆ ಇದು ಕೆಟ್ಟ ಪರಿಣಾಮ ಬೀರುತ್ತಿದೆ ಎಂಬುದನ್ನು ಗಮನದಲ್ಲಿಟ್ಟುಕೊಂಡು ಇದೀಗ ಆ್ಯಪ್ ಅನ್ನು ಬ್ಲಾಕ್ ಮಾಡಿದೆ.

ಇದೇ ವೇಳೆ ಟಿಕ್ ಟಾಕ್ ಅಶ್ಲೀಲ ವಿಡಿಯೋಗಳನ್ನು ನಿಯಂತ್ರಣ ಮಾಡಿ. ತೃಪ್ತಿದಾಯಕ ಕಾರ್ಯವಿಧಾನವನ್ನು ಅಳವಡಿಸಿಕೊಂಡರೆ ತಮ್ಮ ನಿರ್ಧಾರವನ್ನು ಪರಿಶೀಲಿಸುವುದಾಗಿ ಪಾಕ್ ಟೆಲಿಕಾಂ ಸಂಸ್ಥೆ ತಿಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+