• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಪಾಕಿಸ್ತಾನ: ಶಾಲೆಯಲ್ಲಿ ಬಾಂಬ್ ಸ್ಫೋಟ, 7 ಮಂದಿ ಸಾವು

|

ಪೇಶಾವರ್, ಅಕ್ಟೋಬರ್ 27: ಪಾಕಿಸ್ತಾನದಲ್ಲಿ ಮಸೀದಿ ಬಳಿ ಶಾಲೆಯಲ್ಲಿ ಬಾಂಬ್ ಸ್ಫೋಟ ಸಂಭವಿಸಿದ್ದು, ಕನಿಷ್ಠ 7 ಮಂದಿ ಮೃತಪಟ್ಟಿದ್ದು, 70 ಮಂದಿ ಗಾಯಗೊಂಡಿದ್ದಾರೆ.

ವಾಯುವ್ಯ ಪಾಕಿಸ್ತಾನದ ನಗರ ಪೇಶಾವರದ ಹೊರವಲಯದಲ್ಲಿ ಮಂಗಳವಾರ ಬೆಳಗಿನ ಜಾವ ಬಾಂಬ್ ಸ್ಫೋಟ ಸಂಭವಿಸಿದೆ.

ಲೆಬನಾನ್‌ನಲ್ಲಿ ಮತ್ತೆ ಮಹಾ ಸ್ಫೋಟ, ಉಗ್ರರ ಕೋಟೆ ಉಡೀಸ್

ಏಳು ಮಂದಿ ಮಕ್ಕಳು ಮೃತಪಟ್ಟಿದ್ದು, 70 ಮಂದಿ ಗಾಯಗೊಂಡಿದ್ದಾರೆ. ಜಮಿಯಾ ಝುಬೈರಿಯಾ ಮದ್ರಸಾದಲ್ಲಿ ಇಸ್ಲಾಂ ಬಗ್ಗೆ ಪಾದ್ರಿಯೊಬ್ಬರು ಮಕ್ಕಳಿಗೆ ಉಪನ್ಯಾಸ ನೀಡುತ್ತಿದ್ದ ವೇಳೆ ಬಾಂಬ್ ಸ್ಫೋಟಗೊಂಡಿದೆ ಎಂದು ಪೊಲೀಸ್ ಅಧಿಕಾರಿ ವಖರ್ ಅಜಿಮ್ ಹೇಳಿದ್ದು, ಯಾರೋ ಮದ್ರಸಾದಲ್ಲಿ ಬ್ಯಾಗ್ ನ್ನು ಬಿಟ್ಟು ಹೋದ ಸ್ವಲ್ಪ ಹೊತ್ತಿನಲ್ಲಿ ಬಾಂಬ್ ಸ್ಫೋಟಗೊಂಡಿದೆ ಎಂದು ಆರಂಭಿಕ ತನಿಖೆಯಿಂದ ತಿಳಿದುಬಂದಿದೆ ಎಂದರು.

ಖ್ವೆಟ್ಟಾದ ನೈರುತ್ಯ ಸಿಟಿಯಲ್ಲಿ ಬಾಂಬ್ ದಾಳಿ ನಡೆದು ಮೂವರು ಮೃತಪಟ್ಟ ನಂತರ ಈ ದಾಳಿ ನಡೆದಿದೆ.ಗಾಯಗೊಂಡವರಲ್ಲಿ ಹಲವರ ಸ್ಥಿತಿ ಗಂಭೀರವಾಗಿದ್ದು ಸಾವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಯಿದೆ ಎಂದು ಆಸ್ಪತ್ರೆಗಳ ಅಧಿಕಾರಿಗಳು ತಿಳಿಸಿದ್ದಾರೆ.

ಪಾಕಿಸ್ತಾನದ ಖೈಬರ್ ಪಕ್ತುಂಖ್ವಾ ಪ್ರಾಂತ್ಯದ ರಾಜಧಾನಿ ಪೇಶಾವರ ಆಗಿದ್ದು, ಇಲ್ಲಿ ಇತ್ತೀಚಿನ ವರ್ಷಗಳಲ್ಲಿ ಹಲವು ಉಗ್ರರ ದಾಳಿಗಳು ನಡೆಯುತ್ತಿವೆ, ಆದರೆ ಪಂಥೀಯ ಹಿಂಸಾಚಾರವು ಪಾಕಿಸ್ತಾನದಾದ್ಯಂತ ಮಸೀದಿಗಳು ಅಥವಾ ಸೆಮಿನರಿಗಳಲ್ಲಿ ಜನರನ್ನು ಕೊಂದು, ಗಾಯಗೊಳಿಸಿವೆ.

English summary
At least seven people were killed and more than 70 injured in an explosion at a seminary in Pakistan’s Peshawar city on Tuesday morning, Dawn reported. Some children are also among the dead though numbers have not yet been confirmed.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X