• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಪಾಕಿಸ್ತಾನದ ಮೇಲೆ ಮೋದಿ ವಿಮಾನ ಹಾರಾಟಕ್ಕೆ ಒಪ್ಪಿಗೆ

|

ಇಸ್ಲಾಮಾಬಾದ್, ಜೂನ್ 11: ನರೇಂದ್ರ ಮೋದಿ ಅವರು ಪ್ರಯಾಣಿಸುವ ವಿಮಾನವು ತನ್ನ ವಾಯುಪ್ರದೇಶದ ಮೂಲಕ ಹಾರಾಡಲು ಪಾಕಿಸ್ತಾನವು 'ತಾತ್ವಿಕ' ಒಪ್ಪಿಗೆ ನೀಡಿದೆ.

ಜೂನ್ 13-14 ರಂದು ಮೋದಿ ಅವರು ಕಿರ್ಗಿಸ್ತಾನಕ್ಕೆ ತೆರಳುತ್ತಿದ್ದು, ಅಲ್ಲಿ ಶಾಂಘೈ ಸಹಕಾರ ಸಂಘ (ಎಸ್‌ಸಿಒ) ಶೃಂಗಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಮೋದಿ ಅವರು ಕಿರ್ಗಿಸ್ತಾನಕ್ಕೆ ತೆರಳಲು ಪಾಕಿಸ್ತಾನದ ವಾಯುಪ್ರದೇಶದ ಮೂಲಕವೇ ಹಾದು ಹೋಗಬೇಕಿದೆ.

ನಮ್ಮನ್ನು ಎಲ್ಲರೂ ದರೋಡೆ ಮಾಡ್ತಿದ್ದಾರೆ: ಭಾರತದ ವಿರುದ್ಧ ಟ್ರಂಪ್ ಮತ್ತೆ ಕಿಡಿ

ಭಾರತೀಯ ಸೈನ್ಯವು ಬಾಲಾಕೋಟ್‌ ಮೇಲೆ ದಾಳಿ ಮಾಡಿದ ನಂತರ ಪಾಕಿಸ್ತಾನವು ತನ್ನ ವಾಯುಪ್ರದೇಶದ ಮೇಲೆ ಭಾರತದ ವಿಮಾನಗಳು ಹಾರಾಡುವುದನ್ನು ನಿಷೇಧಿಸಿತ್ತು. ಹಾಗಾಗಿ ಮೋದಿ ಅವರು ಪ್ರಯಾಣಿಸಲಿರುವ ವಿಮಾನದ ಹಾರಾಟಕ್ಕೆ ಅನುಮತಿ ನೀಡಬೇಕೆಂದು ಭಾರತ ಸರ್ಕಾರವು ಪಾಕ್‌ ಬಳಿ ಮನವಿ ಮಾಡಿತ್ತು.

ಭ್ರಷ್ಟಾಚಾರ ಸಹಿಸೋಲ್ಲ! ಖಡಕ್ ಸಂದೇಶ ನೀಡಿದ ನಿರ್ಮಲಾ ಸೀತಾರಾಮ್

ಅಧಿಕೃತ ಒಪ್ಪಂದ ಈ ವರೆಗೆ ನೀಡಲಾಗಿಲ್ಲವಾದರೂ, ಒಪ್ಪಿಗೆ ನೀಡಲಾಗುವುದು ಎಂದು ಪಾಕಿಸ್ತಾನವು ಹೇಳಿದೆ. ಸಂಬಂಧಪಟ್ಟ ಪ್ರಕ್ರಿಯೆಗಳು ಪೂರ್ಣಗೊಂಡ ಬಳಿಕ ಅಧಿಕೃತ ಒಪ್ಪಿಗೆ ಸಿಗಲಿದೆ.

English summary
Pakistan allows Narendra Modi's plane to fly over its airspace. Modi is participating in the Shanghai Co-orporation organization in Khirgisthan's Bishkek on June 13-14.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X