ಭಾರತದ ಜತೆಗೆ ಮಾತುಕತೆಗೆ ಸಿದ್ಧ ಆದರೆ ಒಂದು ಷರತ್ತು: ಪಾಕಿಸ್ತಾನ

ಇಸ್ಲಾಮಾಬಾದ್, ಏಪ್ರಿಲ್ 26: ಪಾಕಿಸ್ತಾನವು ಭಾರತದೊಂದಿಗೆ ಮಾತುಕತೆಗೆ ಸಿದ್ಧವಿದೆ ಆದರೆ ಒಂದು ಷರತ್ತಿದೆ ಎಂದು ಪಾಕಿಸ್ತಾನ ವಿದೇಶಾಂಗ ಸಚಿವ ಮಹಮೂದ್ ಖುರೇಷಿ ತಿಳಿಸಿದ್ದಾರೆ.

ಜಮ್ಮು ಮತ್ತು ಕಾಶ್ಮೀರಕ್ಕೆ ಸಂಬಂಧಿಸಿದಂತೆ 2019 ರ ಆಗಸ್ಟ್ 5 ರಂದು ಭಾರತ ಕೈಗೊಂಡ ಏಕಪಕ್ಷೀಯ ನಿರ್ಧಾರಗಳನ್ನು ಮರುಪರಿಶೀಲಿಸಲು ಸಿದ್ಧವಿದ್ದರೆ ಮಾತ್ರ ಪಾಕಿಸ್ತಾನವು ಭಾರತದೊಡನೆ ಸಂಭಾಷಣೆಯ ಮೂಲಕ ಬಾಕಿ ಇರುವ ಸಮಸ್ಯೆಗಳನ್ನು ಬಗೆಹರಿಸಲು ಸಿದ್ದವಾಗಿದೆ ಎಂದಿದ್ದಾರೆ.

ಪಾಕಿಸ್ತಾನವು ಕಾಶ್ಮೀರ, ಸಿಯಾಚಿನ್, ಸರ್ ಕ್ರೀಕ್, ನೀರು ಮತ್ತು ಇತರ ಸಣ್ಣ ಸಮಸ್ಯೆಗಳನ್ನು ಒಳಗೊಂಡಂತೆ ಭಾರತದೊಂದಿಗೆ ವಿವಾದವನ್ನಿರಿಸಿಕೊಂಡಿದೆ. ಇದೆಲ್ಲದರ ಪರಿಹಾರವೆಂದರೆ ಮಾತುಕತೆಯೊಂದೇ ಆಗಿದೆ ಎಂದು ಡಾನ್ ಪತ್ರಿಕೆ ವರದಿ ಮಾಡಿದೆ.

Pak FM Qureshi Says Willing To Talk If India Revisits Its Aug 5, 2019 Decisions On J&K

ನಾವು ಯುದ್ಧಕ್ಕೆ ಹೋಗಲು ಸಾಧ್ಯವಿಲ್ಲ, ನಿಮಗೆ ತಿಳಿದಿದೆ, ಅದು ಪರಸ್ಪರ ನಾಶಕ್ಕೆ ಕಾರಣವಾಗಲಿದೆ.ಯಾವುದೇ ಸಂವೇದನಾಶೀಲ ವ್ಯಕ್ತಿಯು ಆ ನಿರ್ಧಾರ ತಾಳುವುದಿಲ್ಲ. ಆದ್ದರಿಂದ ಣಾವು ಮಾತುಕತೆ ನಡೆಸಬೇಕು. ಖುರೇಷಿ ಹೇಳಿದ್ದಾರೆ.

ಟರ್ಕಿಯ ಅನಾಡೋಲು ಏಜೆನ್ಸಿಗೆ ನೀಡಿದ ಮಾತನಾಡಿದ ಖುರೇಷಿ , ಆಗಸ್ಟ್ 5, 2019ರಂದು ತೆಗೆದುಕೊಂಡ ಕೆಲವು ನಿರ್ಧಾರಗಳನ್ನು ಭಾರತವು ಪುನಃ ಪರಿಶೀಲಿಸಲು ಸಿದ್ಧವಾಗಿದ್ದರೆ ಪಾಕಿಸ್ತಾನವು ಭಾರತದೊಡನೆ ಮಾತನಾಡಲು ಮತ್ತು ಬಾಕಿ ಇರುವ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಲು ಹೆಚ್ಚು ಸಂತೋಷದಿಂದ ಮುಂದಾಗಲಿದೆ." ಎಂದಿದ್ದಾರೆ. ಖುರೇಷಿ ತನ್ನ ಎರಡು ದಿನಗಳ ಟರ್ಕಿ ಭೇಟಿಯಲ್ಲಿದ್ದಾರೆ.

Recommended Video

      ಕೊರೋನಾಗೆ ಮನೆಯಲ್ಲೇ ಚಿಕಿತ್ಸೆ ಪಡೆದುಕೊಳ್ಳಿ ! | Oneindia Kannada

      ಆಗಸ್ಟ್ 5, 2019 ರಂದು ಪ್ರಧಾನಿ ನರೇಂದ್ರ ಮೋದಿ ಸಂವಿಧಾನದ 370 ನೇ ವಿಧಿಯನ್ನು ಮಾರ್ಪಡಿಸುವ ಮೂಲಕ ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿರುವ ವಿಶೇಷ ಸ್ಥಾನಮಾನವನ್ನು ಹಿಂಪಡೆಯುವ ದಿಟ್ಟ ಕ್ರಮ ಕೈಗೊಂಡಿದ್ದರು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+