ಪಾಕಿಸ್ತಾನದ ನಟಿ, ಗಾಯಕಿ ರೇಷ್ಮಾಳನ್ನು ಗುಂಡಿಕ್ಕಿ ಹತ್ಯೆಗೈದ ಪತಿ

ಖೈಖರ್, ಆಗಸ್ಟ್ 09: ಪಾಕಿಸ್ತಾನದ ನಟಿ, ಗಾಯಕಿ ರೇಷ್ಮಾ ಅವರನ್ನು ಆಕೆಯ ಪತಿಯೇ ಗುಂಡಿಕ್ಕಿ ಕೊಂದಿರುವ ಘಟನೆ ನೌಶೇರಾ ಕಲಾನ್‌ ಪ್ರದೇಶದಲ್ಲಿ ನಡೆದಿದೆ ಎಂದು ಜಿಯೋ ಟಿವಿ ವರದಿ ಮಾಡಿದೆ.

ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿಈ ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದೆ. ಆರೋಪಿಯ ನಾಲ್ಕನೇ ಪತ್ನಿಯಾಗಿದ್ದಾರೆ. ರೇಷ್ಮಾ ಅವರು ಪತಿಯಿಂದ ದೂರವಾಗಿ ಹಾಕಿಮಾಬಾದ್‌ ಪ್ರದೇಶದಲ್ಲಿ ವಾಸವಾಗಿದ್ದರು.

ರೇಷ್ಮಾ ಅವರು ತಮ್ಮ ಸೋದರನ ಮನೆಯಲ್ಲಿದ್ದಾಗ, ಏಕಾಏಕಿ ದಾಳಿ ನಡೆಸಿ, ಗುಂಡಿನ ಮಳೆಗೆರೆಯಲಾಗಿದೆ. ನಂತರ ಆರೋಪಿ ಪರಾರಿಯಾಗಿದ್ದಾನೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಸ್ಥಳೀಯರ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Pak Actress-Singer Reshma Shot Dead, Allegedly By Husband

ಪಾಕಿಸ್ತಾನದ ಖೈಬರ್‌ ಪಂಕ್ತುಕ್ವದಲ್ಲಿ ಮಹಿಳೆಯರ ವಿರುದ್ಧ ನಡೆದಿರುವ ದುಷ್ಕೃತ್ಯ, ದೌರ್ಜನ್ಯಗಳಲ್ಲಿ ಇದು 15 ನೇ ಪ್ರಕರಣವಾಗಿದೆ. ಈ ಹಿಂದೆ ಪಾರ್ಟಿಗೆ ಹೋಗಲು ನಿರಾಕರಿಸಿದ್ದ ನಟಿ ಸುನ್ಬುಲ್‌ ಅವರನ್ನು ಫೆಬ್ರವರಿ 3ರಂದು ಗುಂಡಿಕ್ಕಿ ಕೊಲ್ಲಲಾಗಿತ್ತು.

ಪಾಕಿಸ್ತಾನದ ಜನಪ್ರಿಯ ಧಾರವಾಹಿ ಜೋಬಲ್‌ ಗೋಲುನದಲ್ಲಿ ರೇಷ್ಮಾ ನಟಿಸುತ್ತಿದ್ದರು. ಪಾಸ್ತೋ ಗಾಯನಕ್ಕೆ ಆಕೆ ಹೆಸರುವಾಸಿಯಾಗಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+