ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯುವಕರ ಮೇಲೆ ಆಕ್ಸ್‌ಫರ್ಡ್ ಲಸಿಕೆ ಪ್ರಯೋಗ: ಶೇ.90ರಷ್ಟು ಪರಿಣಾಮಕಾರಿ

|
Google Oneindia Kannada News

ಆಕ್ಸ್‌ಫರ್ಡ್‌ನ ಆಸ್ಟ್ರಾಜೆನೆಕಾ ಲಸಿಕೆ ಯುವಕರಲ್ಲಿ ಶೇ.90ರಷ್ಟು ಪರಿಣಾಮಕಾರಿ ಎಂದು ಸಾಬೀತಾಗಿದೆ.

ಯುಎಸ್ ಆಪರೇಷನ್ ವಾರ್ಪ್ ಸ್ಪೀಡ್ ಪ್ರೋಗ್ರಾಮ್ ಮೂಲಕ ಯುವಕರ ಮೇಲೆ ಲಸಿಕೆಯನ್ನು ಪ್ರಯೋಗಿಸಲಾಯಿತು, ಇದು ಶೇ.90ರಷ್ಟು ಪರಿಣಾಮಕಾರಿ ಎನ್ನುವುದು ತಿಳಿದುಬಂದಿದೆ.

 ಪೋಷಕರ ಪ್ರಶ್ನೆ: ಮಕ್ಕಳಿಗೂ ಕೊರೊನಾ ಲಸಿಕೆ ಕಡ್ಡಾಯವೇ? ಪೋಷಕರ ಪ್ರಶ್ನೆ: ಮಕ್ಕಳಿಗೂ ಕೊರೊನಾ ಲಸಿಕೆ ಕಡ್ಡಾಯವೇ?

ಮೊದಲು ಅರ್ಧ ಡೋಸ್‌ನ್ನು ನೀಡಲಾಗಿತ್ತು ಅದರಲ್ಲೇ ಲಸಿಕೆ ಶೇ.90ರಷ್ಟು ಪರಿಣಾಮಕಾರಿ ಎನ್ನುವುದು ತಿಳಿದುಬಂದಿದೆ.

Oxford Vaccines 90 Percent Efficacy In Covid Came In Younger Group

ಸಣ್ಣ ಪ್ರಮಾಣದ ಲಸಿಕೆಯು ಕೂಡ ದೊಡ್ಡ ಮಟ್ಟದಲ್ಲಿ ಪರಿಣಾಮವನ್ನು ಬೀರಬಲ್ಲದು ಎಂಬುದನ್ನು ತಿಳಿದು ಸಂತಸವಾಗಿದೆ. ಲಸಿಕೆಯ ಮಾನವರ ಮೇಲಿನ ಪರೀಕ್ಷೆಯ ಮಧ್ಯಂತರ ದತ್ತಾಂಶಗಳನ್ನು ಸಂಸ್ಥೆಯ ಸೋಮವಾರ ಬಿಡುಗಡೆ ಮಾಡಿದೆ.

ಬ್ರಿಟನ್‌ ಮತ್ತು ಬ್ರೆಜಿನ್‌ನಲ್ಲಿ ನಡೆದ ಅಂತಿಮ ಪರೀಕ್ಷೆಯಲ್ಲಿ ಇದು ಋಜುವಾತಾಗಿದೆ ಎಂದು ಸಂಸ್ಥೆ ತಿಳಿಸಿದೆ. ಜೊತೆಗೆ ಸುರಕ್ಷತೆಗೆ ಸಂಬಂಧಿಸಿದಂತೆ ಯಾವುದೇ ಗಂಭೀರ ಪರಿಣಾಮಗಳೂ ಕಾಣಿಸಿಕೊಂಡಿಲ್ಲ ಎಂದು ಹೇಳಿದೆ.

ಕೊರೊನಾದ ವಿರುದ್ಧ ಲಸಿಕೆಯು ತುಂಬಾ ಪರಿಣಾಮಕಾರಿಯಾಗಿದ್ದು, ಸಾರ್ವಜನಿಕ ಆರೋಗ್ಯ ತುರ್ತುಪರಿಸ್ಥಿತಿಯ ಮೇಲೆ ಗಂಭೀರ ಪರಿಣಾಮ ಬೀರಲಿದೆ ಎಂದು ಆಸ್ಟ್ರಾಝೆನಿಕಾ ಸಿಇಒ ಪಾಸ್ಕಲ್‌ ಸಾರಿಯಟ್‌ ಹೇಳಿದ್ದಾರೆ.

Recommended Video

Cyclone Nivar Effect: ಮಳೆ ಮಳೆ ... ಎಚ್ಚರ!! | Oneindia Kannada

ಒಂದೊಮ್ಮೆ ಲಸಿಕೆಯ ಎರಡು ಡೋಸ್‌ಗಳನ್ನು ಒಂದು ತಿಂಗಳ ಅಂತರದಲ್ಲಿ ನೀಡಿದಾಗ ಶೇ. 62ರಷ್ಟು ಪರಿಣಾಮಕಾರಿಯಾಗಿದೆ. ಹೀಗಾಗಿ ಎರಡೂ ರೀತಿಯ ಡೋಸ್‌ಗಳ ಲೆಕ್ಕ ತೆಗೆದುಕೊಂಡಾಗ ಲಸಿಕೆಯು ಸರಾಸರಿ ಶೇ.70ರಷ್ಟು ಪರಿಣಾಮಕಾರಿಯಾಗಿದೆ. ಒಟ್ಟಾರೆ ಲಸಿಕೆಯು ಶೇ. 60 ರಿಂದ 90ರಷ್ಟು ಪರಿಣಾಮಕಾರಿಯಾಗಿದೆ.

English summary
The dose of AstraZeneca Plc's Covid vaccine that showed the highest level of effectiveness was tested in a younger population than a bigger dose that showed less efficacy, according to the head of the U.S. Operation Warp Speed program.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X