ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಸ್ಟ್ರಾಜೆನೆಕಾ ಕೊವಿಡ್ ಲಸಿಕೆ ಪ್ರಯೋಗ ಪುನರಾರಂಭ ಯಾವಾಗ?

|
Google Oneindia Kannada News

ಜ್ಯೂರಿಕ್, ಸೆಪ್ಟೆಂಬರ್ 11: ಆಸ್ಟ್ರಾಜೆನೆಕಾ ಕೊವಿಡ್ ಲಸಿಕೆಯ ಪ್ರಯೋಗ ಶೀಘ್ರವೇ ಪುನರಾರಂಭಗೊಳ್ಳಲಿದೆ ಎಂದು ಕಂಪನಿಯ ಸಿಇಒ ಪಾಸ್ಕಲ್ ಸಾರಿಯೊಟ್ ಹೇಳಿದ್ದಾರೆ. ಕೊವಿಡ್ 19 ಚಿಕಿತ್ಸೆಗಾಗಿ ನಡೆಸಲಾಗುತ್ತಿರುವ ಆಸ್ಟ್ರಾಜೆನೆಕಾ ಲಸಿಕೆ ಪ್ರಯೋಗ ಶೀಘ್ರದಲ್ಲೇ ಪುನರಾರಂಭವಾದರೆ, ಲಸಿಕೆಯು ಜನರನ್ನು ಕೊರೊನಾ ಸೋಂಕಿನಿಂದ ರಕ್ಷಿಸಲು ಸಮರ್ಥವಾಗಿದೆಯೇ ಎಂಬುದನ್ನು ಇದೇ ವರ್ಷದ ಅಂತ್ಯಕ್ಕೆ ಖಚಿತಪಡಿಸಿಕೊಳ್ಳಲಾಗುವುದು ಎಂದು ಪಾಸ್ಕಲ್ ತಿಳಿಸಿದ್ದಾರೆ.

ಆನ್‌ಲೈನ್ ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ಅವರು, ಬೆನ್ನುಹುರಿಯಲ್ಲಿ ತೊಂದರೆ ಕಾಣಿಸಿಕೊಂಡಿರುವ ಬಗ್ಗೆ ಇನ್ನಷ್ಟು ಪರೀಕ್ಷೆಗಳು ನಡೆಯಬೇಕಿದೆ. ಹಲವು ಪರೀಕ್ಷೆಗಳ ಬಳಿಕ ಅದು ಸ್ಪಷ್ಟವಾಗಲಿದ್ದು, ಪರೀಕ್ಷಾ ವರದಿಯನ್ನು ಸುರಕ್ಷತಾ ವಿಚಾರಗಳನ್ನು ಗಮನಿಸುವ ಸಮಿತಿಗೆ ಸಲ್ಲಿಸಬೇಕಾಗುತ್ತದೆ.

ಆಸ್ಟ್ರಾಜೆನೆಕಾ ಲಸಿಕೆ ಪ್ರಯೋಗ ಸ್ಥಗಿತ, ಇದು ಎಚ್ಚರಿಕೆ ಗಂಟೆ: WHOಆಸ್ಟ್ರಾಜೆನೆಕಾ ಲಸಿಕೆ ಪ್ರಯೋಗ ಸ್ಥಗಿತ, ಇದು ಎಚ್ಚರಿಕೆ ಗಂಟೆ: WHO

ಬಳಿಕವಷ್ಟೇ ಕಂಪನಿ ಮತ್ತು ಲಸಿಕೆಯ ಪ್ರಯೋಗ ಪುನರಾರಂಭಿಸುವ ಬಗ್ಗೆ ತಿಳಿಯಲು ಸಾಧ್ಯವಾಗುತ್ತದೆ ಎಂದು ಹೇಳಿದ್ದಾರೆ.

ಬೆನ್ನುಹುರಿಯಲ್ಲಿ ಊತ ಕಾಣಿಸಿಕೊಂಡಿತ್ತು

ಬೆನ್ನುಹುರಿಯಲ್ಲಿ ಊತ ಕಾಣಿಸಿಕೊಂಡಿತ್ತು

ಬ್ರಿಟಿಷ್ ಫಾರ್ಮಾ ಕಂಪನಿ ಆಸ್ಟ್ರಾಜೆನೆಕಾ ಕೊವಿಡ್ ಲಸಿಕೆ ಅಂತಿಮ ಹಂತದ ಪ್ರಯೋಗಗಳನ್ನು ಇತ್ತೀಚೆಗಷ್ಟೇ ಸ್ಥಗಿತಗೊಳಿಸಿದೆ. ಬ್ರಿಟನ್‌ನಲ್ಲಿ ಕೊವಿಡ್ ಲಸಿಕೆ ಪ್ರಯೋಗಕ್ಕೆ ಒಳಪಟ್ಟಿದ್ದ ವ್ಯಕ್ತಿಯೊಬ್ಬರಿಗೆ ಬೆನ್ನು ಹುರಿಯಲ್ಲಿ ಉರಿಯೂತ ಕಾಣಿಸಿಕೊಂಡಿರುವುದು ವರದಿಯಾದ ಬೆನ್ನಲ್ಲೇ ಲಸಿಕೆ ಪ್ರಯೋಗ ನಿಲ್ಲಿಸಲಾಗಿದೆ.

ಜಗತ್ತು ಆಸ್ಟ್ರಾಜೆನೆಕಾ ಲಸಿಕೆಯನ್ನು ಗಮನಿಸುತ್ತಿದೆ

ಜಗತ್ತು ಆಸ್ಟ್ರಾಜೆನೆಕಾ ಲಸಿಕೆಯನ್ನು ಗಮನಿಸುತ್ತಿದೆ

ಇತರೆ ಲಸಿಕೆಗಳ ಪ್ರಯೋಗಗಳಿಗೂ ಇದಕ್ಕೂ ಇರುವ ವ್ಯತ್ಯಾಸವೆಂದರೆ, ಇಡೀ ಜಗತ್ತು ಅವುಗಳನ್ನೆಲ್ಲ ಗಮನಿಸುತ್ತಿಲ್ಲ, ಅವರು ಪ್ರಯೋಗ ನಿಲ್ಲಿಸುತ್ತಾರೆ, ಅಧ್ಯಯನ ನಡೆಸುತ್ತಾರೆ ಹಾಗೂ ಮತ್ತೆ ಆರಂಭಿಸುತ್ತಾರೆ ಎಂದು ಹೇಳಿದ್ದಾರೆ.

ಆಸ್ಟ್ರಾಜೆನೆಕಾ ಷೇರು ಬೆಲೆ ಕುಸಿತ

ಆಸ್ಟ್ರಾಜೆನೆಕಾ ಷೇರು ಬೆಲೆ ಕುಸಿತ

ಲಸಿಕೆ ಪ್ರಯೋಗ ನಿಲ್ಲಿಸಿರುವುದರಿಂದ ಕೋವಿಡ್ ಚಿಕಿತ್ಸೆ ಲಸಿಕೆ ಹೊರ ಬರುವ ಸಮಯದ ಬಗ್ಗೆ ಅನುಮಾನಗಳು ಮೂಡಿದ್ದರ ಪರಿಣಾಮ ಆಸ್ಟ್ರಾಜೆನೆಕಾ ಷೇರು ಬೆಲೆಎ ಬುಧವಾರ ಕುಸಿದಿದೆ.

Recommended Video

Nirmala Sitharaman ಅವ್ರೇ ಕನ್ನಡಿಗರು ಏನ್ ಪಾಪ ಮಾಡಿದ್ರು? | Oneindia Kannada
300 ಕೋಟಿ ಡೋಸ್‌ಗಳಷ್ಟು ಲಸಿಕೆ ತಯಾರಿಸುವ ಸಾಮರ್ಥ್ಯ

300 ಕೋಟಿ ಡೋಸ್‌ಗಳಷ್ಟು ಲಸಿಕೆ ತಯಾರಿಸುವ ಸಾಮರ್ಥ್ಯ

ಆಸ್ಟ್ರಾಜೆನೆಕಾ ಎಲ್ಲಾ ರಾಷ್ಟ್ರಗಳಿಗೂ ಒಂದೇ ಸಮಯದಲ್ಲಿ ಲಸಿಕೆ ಪೂರೈಕೆ ಮಾಡುವ ಮೂಲಕ ಸಮಾನ ವಿತರಣೆ ಬಗ್ಗೆ ಗಮನ ನೀಡಲಿದೆ. ಕಂಪನಿ ಜಗತ್ತಿನಾದ್ಯಂತ ಸ್ಥಾಪಿಸಿರುವ ಕೇಂದ್ರಗಳ ಮೂಲಕ ಒಟ್ಟು 300 ಕೋಟಿ ಡೋಸ್‌ಗಳಷ್ಟು ಲಸಿಕೆ ತಯಾರಿಸುವ ಸಾಮರ್ಥ್ಯ ಹೊಂದಿದೆ ಎಂದು ಪಾಸ್ಕಲ್ ವಿವರಣೆ ನೀಡಿದ್ದಾರೆ.

English summary
UK-based pharma giant AstraZeneca Plc's CEO Pascal Soriot has said that the company is still aiming for the Oxford COVID-19 vaccine to be ready by this year-end.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X