H-1Bವೀಸಾಗೆ ಭಾರತೀಯರಿಂದಲೇ ಅತೀ ಹೆಚ್ಚು 2.47 ಲಕ್ಷ ಅರ್ಜಿ
ನವದೆಹಲಿ, ಆಗಸ್ಟ್ 22: ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಧಿಕಾರಕ್ಕೆ ಬಂದ ನಂತರ ಎಚ್-1ಬಿ ವೀಸಾ ಸಂಖ್ಯೆಗಳ ಮೇಲೆ ನಿಯಂತ್ರಣ ಹೇರಿದ್ದರು. ಆದರೆ, ಇನ್ನೂ ಆಶಾಭಾವನೆಯಲ್ಲಿರುವ ಭಾರತೀಯರು ಬರೋಬ್ಬರಿ ಅರ್ಜಿಗಳನ್ನು ಸಲ್ಲಿಸಿದ್ದಾರೆ.
ಅಮೆರಿಕಾ ಹಣಕಾಸು ವರ್ಷದ ಕಳೆದ 9 ತಿಂಗಳಲ್ಲಿ 2.47 ಲಕ್ಷ ಭಾರತೀಯರು ಎಚ್-1ಬಿ ವೀಸಾಗೆ ಅರ್ಜಿ ಸಲ್ಲಿಸಿದ್ದಾರೆ. ಒಟ್ಟಾರೆ 3.36 ಲಕ್ಷ ಅರ್ಜಿಗಳು ಬಂದಿದ್ದರೆ ಇದರಲ್ಲಿ ಭಾರತೀಯರ ಅರ್ಜಿಗಳ ಪ್ರಮಾಣವೇ ಶೇಕಡಾ 74ರಷ್ಟಿದೆ. ಇನ್ನು ಚೀನಾದ ಕೇವಲ 36,362 ಜನರು ಎಚ್-1ಬಿ ವೀಸಾಗೆ ಅರ್ಜಿ ಸಲ್ಲಿಸಿದ್ದಾರೆ.

ಅಕ್ಟೋಬರ್ 1, 2016ರಿಂದ ಜೂನ್ 30, 2017ರ ಅವಧಿಯಲ್ಲಿ 2.47 ಲಕ್ಷ ಭಾರತೀಯರು ಅರ್ಜಿಗಳನ್ನು ಸಲ್ಲಿಸಿದ್ದಾರೆ. ಇನ್ನು 2015-16ಕ್ಕೆ ಹೋಲಿಸಿದರೆ ಅರ್ಜಿಗಳ ಸಂಖ್ಯೆಯಲ್ಲಿ ಇಳಿಕೆಯಾಗಿದೆ. ಈ ಅವಧಿಯಲ್ಲಿ 3 ಲಕ್ಷ ಜನ ಎಚ್-1ಬಿ ವೀಸಾಗೆ ಅರ್ಜಿ ಸಲ್ಲಿಸಿದ್ದರು.












Click it and Unblock the Notifications