Earthquake: ಮ್ಯಾನ್ಮಾರ್, ಥೈಲ್ಯಾಂಡ್ ಭೂಕಂಪ; ಕಟ್ಟಡಗಳು ನೆಲಸಮ 1600 ಮಂದಿ ಸಾವು
ಮ್ಯಾನ್ಮಾರ್ ಮತ್ತು ಥೈಲ್ಯಾಂಡ್‌ನಲ್ಲಿ ಸಂಭವಿಸಿದ ಪ್ರಬಲ ಭೂಕಂಪ ಎರಡೂ ದೇಶಗಳನ್ನು ಜರ್ಝರಿತಗೊಳಿಸಿದೆ. ಶನಿವಾರ ಸಂಜೆ ವೇಳೆಗೆ ಸಾವಿನ ಸಂಖ್ಯೆ 1,600 ದಾಟಿದೆ. ಘಟನೆಯಲ್ಲಿ 3,400 ಮಂದಿ ಗಾಯಗೊಂಡಿದ್ದಾರೆ. ಇನ್ನೂ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದ್ದು ಸಾವಿನ ಸಂಖ್ಯೆ ಮತ್ತಷ್ಟು ಜಾಸ್ತಿಯಾಗುವ ಸಾಧ್ಯತೆ ಇದೆ.
ಭೂಕಂಪದಿಂದಾಗಿ ರಸ್ತೆಗಳು ವ್ಯಾಪಕ ಬಿರುಕು ಬಿಟ್ಟಿದೆ. ದೊಡ್ಡ ದೊಡ್ಡ ಕಟ್ಟಡಗಳು ನೆಲಕ್ಕುರುಳಿವೆ. ಚೀನಾ, ಥೈಲ್ಯಾಂಡ್, ವಿಯೆಟ್ನಾಂ ಮತ್ತು ಭಾರತದ ಕೆಲವು ಭಾಗಗಳಲ್ಲಿ ಭೂಕಂಪನದ ಅನುಭವವಾಗಿದೆ. ಭಾರತದಲ್ಲಿ ಯಾವುದೇ ಹಾನಿ ಅಥವಾ ಗಾಯದ ವರದಿಗಳಾಗಿಲ್ಲ. ಮ್ಯಾನ್ಮಾರ್ ನಲ್ಲಿ ನಡೆದ ಭೂಕಂಪವು ಥೈಲ್ಯಾಂಡ್‌ನಲ್ಲಿ ಕನಿಷ್ಠ ಆರು ಮಂದಿ ಮೃತಪಟ್ಟರು ಬ್ಯಾಂಕಾಕ್‌ನ ಚತುಚಕ್ ಮಾರುಕಟ್ಟೆಯಲ್ಲಿ ಗಗನಚುಂಬಿ ಕಟ್ಟಡ ಕುಸಿದ ಪರಿಣಾಮ ಹಲವು ಮಂದಿ ಮೃತಪಟ್ಟಿದ್ದಾರೆ.

7.7 ತೀವ್ರತೆಯ ಭೂಕಂಪದ ಕೇಂದ್ರಬಿಂದುವು ಮಂಡಲೇ ಬಳಿ 10 ಕಿಲೋಮೀಟರ್ ಆಳದಲ್ಲಿ ಆಗಿದೆ ಎಂದು ಯುಎಸ್‌ಜಿಎಸ್ ತಿಳಿಸಿದೆ. ಬಳಿಕ 6.4 ತೀವ್ರತೆಯ ಪ್ರಬಲವಾದ ಮತ್ತೊಂದು ಕಂಪನ ಸಂಭವಿಸಿದೆ. ಬಳಿಕ 10ಕ್ಕಿಂತ ಹೆಚ್ಚು ಬಾರಿ ಕಂಪನ ಸಂಭವಿಸಿದೆ.
ಉತ್ತರ ಥೈಲ್ಯಾಂಡ್‌ನಲ್ಲಿ ಸಂಭವಿಸಿದ ಭೂಕಂಪ ಬ್ಯಾಂಕಾಕ್ ಅನ್ನು ಸಹ ತಲುಪಿದವು, ಅಲ್ಲಿ ಕಟ್ಟಡಗಳು ಅಲುಗಾಡುತ್ತಿದ್ದಂತೆ ನಿವಾಸಿಗಳು ಬೀದಿಗಳಿಗೆ ಓಡಿಬಂದರು. ಬ್ಯಾಂಕಾಕ್‌ನ ಚತುಚಕ್‌ನಲ್ಲಿ ಕಟ್ಟಡ ಕುಸಿದು ನಗರದ ಕೆಲವು ಭಾಗಗಳಲ್ಲಿ ಸಾರ್ವಜನಿಕ ಸಾರಿಗೆ ಸೇವೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಯಿತು.
ಮುಂದುವರೆದ ರಕ್ಷಣಾ ಕಾರ್ಯಾಚರಣೆ
ಮ್ಯಾನ್ಮಾರ್ ನಲ್ಲಿ ರಕ್ಷಣಾ ಕಾರ್ಯಾಚರಣೆಗಳಿಗೆ ಹಾನಿಯಾದ ರಸ್ತೆಗಳು ಮತ್ತು ಮೂಲಸೌಕರ್ಯಗಳು ಅಡ್ಡಿಯಾಗಿದೆ ಎಂದು ವಿಶ್ವಸಂಸ್ಥೆಯ ಮಾನವೀಯ ವ್ಯವಹಾರಗಳ ಸಮನ್ವಯ ಕಚೇರಿ (OCHA) ತಿಳಿಸಿದೆ ಎಂದು ರಾಯಿಟರ್ಸ್ ವರದಿ ಮಾಡಿದೆ.
"ಯಂಗೂನ್-ನೇ ಪೈ ಟಾವ್-ಮಂಡಲೆ ಎಕ್ಸ್‌ಪ್ರೆಸ್‌ವೇಗೆ ವ್ಯಾಪಕ ಹಾನಿಯಾಗಿದೆ. ಹೆದ್ದಾರಿಯಲ್ಲಿ ಬಿರುಕು ಉಂಟಾಗಿರುವ ಕಾರಣ ವಾಹನಗಳ ಸಂಚಾರಕ್ಕೆ ತೀವ್ರ ಅಡಚಣೆಯಾಗಿದೆ ಎಂದು ಯುಎನ್ ಸಂಸ್ಥೆ ತಿಳಿಸಿದೆ.
ಇಷ್ಟೆಲ್ಲಾ ವಿಧ್ವಂಸದ ನಡುವೆ ಥಾಯ್ ಮಹಿಳೆಯೊಬ್ಬರು ಆಸ್ಪತ್ರೆಯಲ್ಲಿ ಸ್ಥಳಾಂತರಿಸುವಾಗ ರೋಲಿಂಗ್ ಬೆಡ್‌ನಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ ಎಂದು ರಾಯಿಟರ್ಸ್ ವರದಿ ಮಾಡಿದೆ. 36 ವರ್ಷದ ಕಾಂಥೊಂಗ್ ಸೇನ್‌ಮುವಾಂಗ್‌ಶಿನ್ ನಿಯಮಿತ ತಪಾಸಣೆಗಾಗಿ ಆಸ್ಪತ್ರೆಗೆ ಹೋಗಿದ್ದರು ಆದರೆ ನೆಲ ಅಲುಗಾಡಲು ಪ್ರಾರಂಭಿಸಿದ ನಂತರ ಹೆರಿಗೆ ನೋವು ಆರಂಭವಾಗಿತ್ತು. ಪೊಲೀಸ್ ಜನರಲ್ ಆಸ್ಪತ್ರೆಯ ವೈದ್ಯಕೀಯ ಸಿಬ್ಬಂದಿ ಐದು ಮೆಟ್ಟಿಲುಗಳ ಕೆಳಗೆ ಕರೆದೊಯ್ಯುವಾಗ ಕಾಂಥೋಂಗ್ ಅವರಿಗೆ ಅವರಿಗೆ ಹೆರಿಗೆಯಾಗಿದೆ.
ಟಿಬೆಟಿಯನ್ ಆಧ್ಯಾತ್ಮಿಕ ನಾಯಕ ದಲೈ ಲಾಮಾ ಅವರು ಮ್ಯಾನ್ಮಾರ್ ಭೂಕಂಪದಲ್ಲಿ ಜೀವಹಾನಿಗೆ ಸಂತಾಪ ವ್ಯಕ್ತಪಡಿಸಿದ್ದಾರೆ. ಪ್ರೀತಿಪಾತ್ರರನ್ನು ಕಳೆದುಕೊಂಡವರ ಕುಟುಂಬಗಳಿಗೆ ನಾನು ಸಂತಾಪ ಸೂಚಿಸುತ್ತೇನೆ ಮತ್ತು ಈ ದುರಂತದಿಂದ ಬಾಧಿತರಾದ ಮ್ಯಾನ್ಮಾರ್ ಮತ್ತು ಥೈಲ್ಯಾಂಡ್‌ನಂತಹ ನೆರೆಯ ರಾಷ್ಟ್ರಗಳ ಎಲ್ಲರಿಗಾಗಿ ಪ್ರಾರ್ಥಿಸುತ್ತೇನೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.












Click it and Unblock the Notifications