ಅಮೆರಿಕಕ್ಕೆ ಬೆದರಿಕೆ ಸಂದೇಶ ಕಳಿಸಿದ ಜ್ಯೂನಿಯರ್ ಒಸಾಮಾ

Posted By:
Subscribe to Oneindia Kannada

ದುಬೈ, ಜುಲೈ 11: ಅಮೆರಿಕವನ್ನು ಬಿಡದಂತೆ ಕಾಡಿದ್ದ ಅಲ್ ಖೈದಾ ಉಗ್ರಗಾಮಿ ಒಸಾಮಾ ಬಿನ್ ಲಾಡೆನ್ ಈಗ ಮತ್ತೊಮ್ಮೆ ಸುದ್ದಿಯಲ್ಲಿದ್ದಾನೆ. ಒಸಾಮಾ ಬಿನ್ ಲಾಡೆನ್ ಸಾವಿಗೆ ಪ್ರತೀಕಾರ ತೆಗೆದುಕೊಳ್ಳುವುದಾಗಿ ಜ್ಯೂನಿಯರ್ ಒಸಾಮಾ ಘೋಷಿಸಿದ್ದಾನೆ.

SITE ಗುಪ್ತಚರ ಸಂಸ್ಥೆಯ ವರದಿ ಪ್ರಕಾರ, ಒಸಾಮಾ ಬಿನ್ ಲಾಡೆನ್ ನ ಮಗ ಹಮ್ಜಾ ಬಿನ್ ಲಾಡೆನ್ ಈಗ ಉಗ್ರ ಸಂಘಟನೆಯ ಹೊಣೆ ಹೊತ್ತಿದ್ದಾನೆ. ಸುಮಾರು 21 ನಿಮಿಷಗಳಿರುವ ಆಡಿಯೋ ಕ್ಲಿಪೊಂದನ್ನು ಬಿಡುಗಡೆ ಮಾಡಲಾಗಿದೆ.[ಲಾಡೆನ್ ನಮ್ಮ ಹೀರೋ ಎಂದ ಮುಷರಫ್]

ಈ ಬಗ್ಗೆ ವರದಿ ಮಾಡಿರುವ ಟೈಮ್ಸ್ ಆಫ್ ಇಂಡಿಯಾ, ಈ ಆಡಿಯೋ ಸಂದೇಶದಲ್ಲಿ ಅಮೆರಿಕಕ್ಕೆ ಹಮ್ಜಾ ಖಡಕ್ ಎಚ್ಚರಿಕೆ ನೀಡಿದ್ದಾನೆ. ಪ್ಯಾಲೆಸ್ಟೈನ್, ಅಫ್ಘಾನಿಸ್ತಾನ, ಸಿರಿಯಾ, ಯಮನ್, ಸೋಮಾಲಿಯಾ ಹಾಗೂ ಇನ್ನುಳಿದ ಮುಸ್ಲಿಂ ರಾಷ್ಟ್ರಗಳ ಮೇಲೆ ನಿಮ್ಮ ದಬ್ಬಾಳಿಕೆಗೆ ನೀವು ಬೆಲೆ ತೆರಬೇಕಾದ ಸಂದರ್ಭ ಒದಗಿ ಬಂದಿದೆ. ನಿಮ್ಮ ಮೇಲೆ ದಾಳಿ ನಡೆಸುವುದು ನಮ್ಮ ಗುರಿ' ಎಂದಿದ್ದಾನೆ.[ಬಿನ್ ಲಾಡೆನ್ 'ಸೆಕ್ಸ್ ಫೈಲ್ಸ್' ಬಚ್ಚಿಟ್ಟ ಅಮೆರಿಕ]

Osama's son Hamza bin Laden threatens US in an audio message

'ಶೇಖ್ ಒಸಾಮಾ ಹಾಗೂ ಇಸ್ಲಾಮಿಕ್ ರಾಷ್ಟ್ರಗಳ ಮೇಲೆ ನಿಮ್ಮಿಂದ ಆಗಿರುವ ದೌರ್ಜನ್ಯಕ್ಕೆ ಮಾತ್ರ ನಾವು ದಾಳಿ ಮಾಡುವುದಿಲ್ಲ, ಇದು ವ್ಯಕ್ತಿಗತ ಹೋರಾಟವಲ್ಲ, ಇಸ್ಲಾಂ ಧರ್ಮಕ್ಕೆ ಬೆಂಬಲಿಸುವವರ ಪರ ಹೋರಾಟ ಎಂದು 20ರ ಹರೆಯದ ಹಮ್ಜಾ ಹೇಳಿದ್ದಾನೆ.[ಲಾಡೆನ್‌ ಅಂತಿಮ ಯಾತ್ರೆ ರಹಸ್ಯ ಬಹಿರಂಗ]

2011ರ ಮೇ 01ರಂದು ಯುಎಸ್ ನೇವಿ ಸೀಲ್ಸ್ ಪಡೆಯಿಂದ ಪಾಕಿಸ್ತಾನದ ಅಡಗುತಾಣದಲ್ಲಿದ್ದ ಅಲ್ ಖೈದಾದ ಮುಖಂಡ ಒಸಾಮಾ ಬಿನ್ ಲಾಡೆನ್ ನನ್ನು ಹತ್ಯೆ ಮಾಡಲಾಗಿತ್ತು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Al Qaeda leader Osama bin Laden's son Hamza bin Laden has threatened revenge against the US for his father's assassination.
Please Wait while comments are loading...