ಮಹಿಳೆಯರಿಗೆ ಮಾತ್ರವಲ್ಲ ಪುರುಷರಿಗೂ ಸಿಗಬಹುದು ಪಿತೃತ್ವದ ರಜೆ, ಶೀಘ್ರದಲ್ಲೇ ಕಾನೂನು ಸಾಧ್ಯತೆ... Supreme Court
ನವದೆಹಲಿ: ಮಕ್ಕಳನ್ನ ಬೆಳೆಸುವುದು ಅಂದ್ರೆ ಅದು ದೊಡ್ಡ ಜವಾಬ್ದಾರಿ, ಏಕೆಂದರೆ ಇಂದಿನ ಮಕ್ಕಳೇ ಭವಿಷ್ಯದ ಪ್ರಜೆಗಳು. ಹೀಗಿದ್ದಾಗ ಮಕ್ಕಳನ್ನು ಬೆಳೆಸಲು ಪೋಷಕರು ಸಾಕಷ್ಟು ಮುತುವರ್ಜಿ ವಹಿಸಿ ನೋಡಿಕೊಳ್ಳಬೇಕು. ಇದಕ್ಕಾಗಿ ಸಾಕಷ್ಟು ಸಮಯ ಕೂಡ ಬೇಕಾಗುತ್ತದೆ, ಈಗಾಗಲೇ ಮಹಿಳೆಯರಿಗೆ ಈ ವಿಚಾರದಲ್ಲಿ ಮಾತೃತ್ವದ ರಜೆ ಇದೆ. ಆದರೆ ಪುರುಷರಿಗೆ ಅಂತಾ ವಿಶೇಷ ರಜೆ ಇಲ್ಲ ಎಂಬ ಬಗ್ಗೆ ಚರ್ಚೆ ನಡೆಯುತ್ತಾ ಇರುವ ಸಮಯದಲ್ಲೇ ಮಹತ್ವದ ಬೆಳವಣಿಗೆ ಇದೀಗ ನಡೆದಿದೆ. ಅಂದಹಾಗೆ ಈಗ ಮಕ್ಕಳ ಪೋಷಣೆ ವಿಚಾರವಾಗಿ ದೇಶದ ಅತ್ಯುನ್ನದ ನ್ಯಾಯಾಲಯ ಮಹತ್ವದ ಸೂಚನೆ ನೀಡಿದೆ.
ಅಂದಹಾಗೆ ಮಕ್ಕಳನ್ನ ಪೋಷಣೆ ಮಾಡುವುದು ತಾಯಿ ಹೊಣೆಗಾರಿಕೆ ಮಾತ್ರವಲ್ಲದೆ, ಈ ವಿಚಾರದಲ್ಲಿ ತಂದೆಗೆ ಕೂಡ ಸಮಾನ ಮಹತ್ವ ನೀಡಬೇಕು ಎಂದು ಅಭಿಪ್ರಾಯಪಟ್ಟಿದೆ ಸುಪ್ರೀಂಕೋರ್ಟ್. ಹೀಗಾಗಿ, ಪಿತೃತ್ವ ರಜೆಯನ್ನ ಕಾನೂನುಬದ್ಧವಾಗಿ ಜಾರಿಗೆ ತರಲು ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳಬೇಕು ಎನ್ನುವ ಕುರಿತು ಇದೀಗ ಸುಪ್ರೀಂಕೋರ್ಟ್ ಮಹತ್ವದ ಸೂಚನೆಯನ್ನ ನೀಡಿದೆ. ಅಂದಹಾಗೆ ಮಕ್ಕಳ ಆರೈಕೆ ಒಂದು ವ್ಯಕ್ತಿಗೆ ಮಾತ್ರ ಸೀಮಿತವಲ್ಲ, ಅದು ತಂದೆ ಹಾಗೂ ತಾಯಿ ಇಬ್ಬರ ಸಮಾನ ಹೊಣೆಗಾರಿಕೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದೆ ದೇಶದ ಅತ್ಯುನ್ನತ ನ್ಯಾಯಾಲಯ. ತಂದೆಯೂ ಮಕ್ಕಳ ಬೆಳವಣಿಗೆಯಲ್ಲಿ ನೇರ ಪಾಲ್ಗೊಳ್ಳುವಂತೆ ಮಾಡಲು ಪಿತೃತ್ವ ರಜೆ ಅಗತ್ಯ ಇದೆ ಎಂದು ನ್ಯಾಯಮೂರ್ತಿಗಳು ತಿಳಿಸಿದ್ದಾರೆ. ಈ ಮೂಲಕ ಸಮಾಜದಲ್ಲಿ ಸಮಾನತೆ ಹೆಚ್ಚಿಸಲು ಸಹಕಾರಿ ಆಗುತ್ತದೆ, ಎಂದು ಅಭಿಪ್ರಾಯವನ್ನು ಈಗ ಸುಪ್ರೀಂಕೋರ್ಟ್ ವ್ಯಕ್ತಪಡಿಸಿದೆ.

ಲಿಂಗ ಸಮಾನತೆ ಸಾಧಿಸಲು ಸಹಾಯಕ
ಅಂದಹಾಗೆ ದೇಶದಲ್ಲಿ ಬಹುಕಾಲದಿಂದ ಕೂಡ ಪಿತೃತ್ವದ ರಜೆ ಬಗ್ಗೆ ಚರ್ಚೆ ನಡೆಯುತ್ತಲೇ ಬಂದಿದೆ, ಈ ವಿಚಾರವಾಗಿ ಸರ್ಕಾರ ಕೂಡ ಒಂದು ತೀರ್ಮಾನಕ್ಕೆ ಬರಲಿದೆ ಎಂದು ಕಾರ್ಮಿಕರು ಹಾಗೂ ಕೋಟಿ ಕೋಟಿ ಉದ್ಯೋಗಿಗಳು ಕಾಯುತ್ತಿದ್ದರು. ಹೀಗಿದ್ದಾಗ ಸುಪ್ರೀಂಕೋರ್ಟ್ ಸೂಚನೆ ಸಂತಸ ಮೂಡಿಸಿದೆ. ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಾದ ಜೆ.ಬಿ. ಪಾರ್ದೀವಾಲಾ & ಆರ್. ಮಹಾದೇವನ್ ಅವರಿದ್ದ ಪೀಠವು, ತಂದೆ ಸಕ್ರಿಯ ಪಾಲ್ಗೊಳ್ಳುವಿಕೆ ಮಕ್ಕಳ ಮಾನಸಿಕ & ಭಾವನಾತ್ಮಕ ಬೆಳವಣಿಗೆಗೆ ನೆರವಾಗಲಿದೆ ಎಂದು ತಿಳಿಸಿದ್ದಾರೆ. ಮನೆ ಹಾಗೂ ಉದ್ಯೋಗ ಕ್ಷೇತ್ರದಲ್ಲಿ ಲಿಂಗ ಸಮಾನತೆ ಸಾಧಿಸಲು ಕೂಡ ಈ ಕ್ರಮ ಸಹಾಯಕವಾಗಲಿದೆ ಎಂದು ನ್ಯಾಯಮೂರ್ತಿಗಳು ತಿಳಿಸಿದ್ದಾರೆ.
ಮಗುವಿನ ಆರೋಗ್ಯಕರ ಬೆಳವಣಿಗೆಗೂ ನೆರವು
ಮಗುವಿನ ಆರಂಭಿಕ ದಿನಗಳಲ್ಲಿ ತಂದೆ ಹಾಜರಾತಿ ಅತ್ಯಂತ ಮುಖ್ಯ ಎಂದು ಪೀಠ ತಿಳಿಸಿದ್ದು, ತಂದೆಯ ಪ್ರೀತಿ, ಮಾತು & ಸಾನ್ನಿಧ್ಯ ಮಗುವಿನ ಉತ್ತಮ ಮಾನಸಿಕ ಬೆಳವಣಿಗೆಗೂ ನೆರವಾಗುತ್ತದೆ. ಆದ್ದರಿಂದಲೇ ಉದ್ಯೋಗ ಅಡಚಣೆಗಳಿಂದ ತಂದೆ ಅನುಪಸ್ಥಿತಿ ಉಂಟಾಗಬಾರದು ಎಂದು ಸುಪ್ರೀಂಕೋರ್ಟ್ ಮಹತ್ವದ ಸಲಹೆಯನ್ನು ಈಗ ನೀಡಿದೆ. ಈ ಮೂಲಕ ಪಿತೃತ್ವ ರಜೆ ಅವಧಿ ಪೋಷಕರ & ಮಗುವಿನ ಅಗತ್ಯಗಳನ್ನು ಗಮನದಲ್ಲಿ ಇಟ್ಟುಕೊಂಡು ನಿರ್ಧರಿಸಬೇಕು ಎಂದು ಕೂಡ ದೇಶದ ಅತ್ಯುನ್ನತ ನ್ಯಾಯಾಲಯವು ಇದೀಗ ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಿದೆ.












Click it and Unblock the Notifications