ಇರಾನ್ ನಂತರ ಕ್ಯೂಬಾ ದೇಶಕ್ಕೂ ಕಾದಿದೆಯಂತೆ ಗ್ರಹಚಾರ, ಅಮೆರಿಕ ಅಧ್ಯಕ್ಷ ಟ್ರಂಪ್ ಗರಂ | Operation Roaring Lion
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ತಮ್ಮ ವಿರುದ್ಧ ಮಾತನಾಡುವ, ಅಮೆರಿಕದ ನಿರ್ಧಾರಗಳ ವಿರುದ್ಧ ನಿಲ್ಲುವ ಯಾವುದೇ ದೇಶವನ್ನೂ ಸುಮ್ಮನೆ ಬಿಡುತ್ತಿಲ್ಲ. ನೂರಾರು ವರ್ಷಗಳಿಂದ ಅಮೆರಿಕ ಜೊತೆಗೆ ಉತ್ತಮ ಬಾಂಧವ್ಯ ಹೊಂದಿರುವ ದೇಶಗಳಿಗೂ ಬಿಸಿ ಮುಟ್ಟಿಸುತ್ತಾ, ಅಮೆರಿಕದ ಜೊತೆಯಲ್ಲಿ ನಿಂತುಕೊಳ್ಳಿ ಎಂದು ಎಚ್ಚರಿಕೆ ನೀಡುತ್ತಿದ್ದಾರೆ. ಹೀಗಾಗಿ ಪದೇ ಪದೇ ಕಿರಿಕ್ ಜೋರಾಗಿದ್ದು, ಇದೀಗ ಅಮೆರಿಕ ಹಾಗೂ ಇತರ ದೇಶಗಳ ಜೊತೆಗೆ ದೊಡ್ಡ ತಿಕ್ಕಾಟ ಕೂಡ ನಡೆಯುತ್ತಿದೆ. ಇಂತಹ ಸೂಕ್ಷ್ಮ ವಾತಾವರಣ ಇದ್ದಾಗ ದಿಢೀರ್ ಕ್ಯೂಬಾ ದೇಶದ ವಿರುದ್ಧ ಗರಂ ಆಗಿದ್ದಾರೆ ಡೊನಾಲ್ಡ್ ಟ್ರಂಪ್ ಅವರು. ಕ್ಯೂಬಾ ದೇಶಕ್ಕೆ ತೈಲ ಸರಬರಾಜು ಮಾಡದಂತೆ ಕೆಲವು ದಿನಗಳ ಹಿಂದೆ ತಡೆ ಹಾಕಿದ್ದ ಅಮೆರಿಕದ ಅಧ್ಯಕ್ಷರು ಈಗ ಹೊಸ ಅಸ್ತ್ರ ಪ್ರಯೋಗ ಮಾಡಿದ್ದಾರೆ.
ಗ್ರೀನ್‌ಲ್ಯಾಂಡ್, ಕೆನಡಾ, ಬ್ರಿಟನ್, ಸ್ಪೇನ್, ಫ್ರಾನ್ಸ್... ಹೀಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಸಾಲು ಸಾಲಾಗಿ ಹಲವು ದೇಶಗಳ ವಿರುದ್ಧ ಕಿರಿಕ್ ಮಾಡಿಕೊಂಡು ಕಿತ್ತಾಡುತ್ತಾ ಇದ್ದಾರೆಂಬ ಆರೋಪ ಇದೆ. ಆದರೆ ತಾವು ಮಾಡುತ್ತಿರುವುದು ಸರಿ, ತನ್ನ ಮಾತನ್ನು ಕೇಳದೇ ಇದ್ದರೆ ಆರ್ಥಿಕವಾಗಿ ಸಂಬಂಧ ಹಾಳಾಗುತ್ತದೆ ಎಂಬ ಎಚ್ಚರಿಕೆಯನ್ನ ನೀಡುತ್ತಲೇ ಬಂದಿದ್ದಾರೆ ಟ್ರಂಪ್ ಅವರು. ಇಷ್ಟೆಲ್ಲಾ ಇದ್ದಾಗಲೇ ಅಮೆರಿಕ ಜೊತೆಗೆ ಕಿರಿಕ್ ತೆಗೆಯುವ ದೇಶಗಳ ಸಂಖ್ಯೆ ಕಡಿಮೆ ಏನು ಆಗುತ್ತಿಲ್ಲ, ಈ ಪೈಕಿ ಅಮೆರಿಕ ಪಕ್ಕದಲ್ಲೇ ಇರುವ ದ್ವೀಪರಾಷ್ಟ್ರ ಕ್ಯೂಬಾ ಕೂಡ ತಿರುಗಿಬಿದ್ದು ತಿಕ್ಕಾಟಕ್ಕೆ ನಿಂತಿದೆ. ಹೀಗಾಗಿ ಇದೀಗ ಅಮೆರಿಕ ಅಧ್ಯಕ್ಷರು ಇರಾನ್ ನಂತರ ಕ್ಯೂಬಾಗೂ ಶಾಸ್ತಿ ಕಾದಿದೆ ಎಂಬ ಎಚ್ಚರಿಕೆ ನೀಡಿದ್ದಾರೆ. ಈ ಮೂಲಕ ಬೊಲಿವಿಯಾ ಬಳಿಕ ಮತ್ತೆ ದಕ್ಷಿಣ ಅಮೆರಿಕದಲ್ಲಿ ಹೊಸ ಸಂಚಲನ ಸೃಷ್ಟಿ ಆಗಿದೆ.

ದ್ವೀಪರಾಷ್ಟ್ರ ಕ್ಯೂಬಾ ಜನರ ಒದ್ದಾಟ
ಅಮೆರಿಕ ತನ್ನ ನೆರೆ ದೇಶ ಕ್ಯೂಬಾ ವಿರುದ್ಧ ಈಗಾಗಲೇ ಹಲವು ನಿರ್ಬಂಧ ಹೇರಿಕೆ ಮಾಡಿಬಿಟ್ಟಿದೆ, ಈ ಹಿನ್ನೆಲೆ ಈಗಾಗಲೇ ಕ್ಯೂಬಾ ದ್ವೀಪದ ಜನರು ಪರದಾಡುತ್ತಿದ್ದಾರೆ. ಇಂತಹ ಸಮಯದಲ್ಲೇ ಅತ್ತ ಟ್ರಂಪ್ ಅವರು ಮತ್ತೊಂದು ಎಚ್ಚರಿಕೆ ನೀಡಿದ್ದು, ಕ್ಯೂಬಾ ವಿರುದ್ಧ ಕಾರ್ಯಾಚರಣೆ ಬಗ್ಗೆ ದೊಡ್ಡ ಸಿಗ್ನಲ್ ಕೊಟ್ಟಂತೆ ಕಾಣುತ್ತಿದೆ. ಆದರೆ ಕ್ಯೂಬಾ ಈವರೆಗೂ ಇದಕ್ಕೆ ಪ್ರತಿಕ್ರಿಯೆ ನೀಡಿಲ್ಲ, ಹೀಗಿದ್ದರೂ ಎರಡೂ ದೇಶಗಳ ಮಧ್ಯೆ ಕದನ ಏರ್ಪಡುವ ಭೀತಿ ಕಾಡತೊಡಗಿದೆ. ಈಗಾಗಲೇ ಶುರುವಾಗಿರುವ ಹಲವು ಯುದ್ಧಗಳ ನಡುವೆ ಮತ್ತೊಂದು ಯುದ್ಧ ಈ ಪಟ್ಟಿಗೆ ಸೇರ್ಪಡೆ ಆಗುವ ಆತಂಕ ಕಾಡುತ್ತಿದೆ.












Click it and Unblock the Notifications