ಇರಾನ್ ವಿರುದ್ಧ ಅಮೆರಿಕ ಮತ್ತು ಇಸ್ರೇಲ್ ಸೇನಾ ಕಾರ್ಯಾಚರಣೆಗೆ ಹೆದರಿದ ಷೇರುಪೇಟೆ | Operation Roaring Lion
ಯುದ್ಧ.. ಯುದ್ಧ.. ಯುದ್ಧ.. ಹೀಗೆ ಎಲ್ಲೆಲ್ಲೂ ಬರೀ ಯುದ್ಧದ ಮಾತೇ ಕೇಳಿಬರುತ್ತಿರುವ ವೇಳೆ, ಹೂಡಿಕೆದಾರರು ಹೆದರಿ ಷೇರು ಮಾರುಕಟ್ಟೆಯಿಂದ ಬಂಡವಾಳ ವಾಪಸ್ ಪಡೆಯುವಂತೆ ಆಗುತ್ತಿದೆ. ಇರಾನ್ ವಿರುದ್ಧ ಅಮೆರಿಕ ಮತ್ತು ಇಸ್ರೇಲ್ ಸೇನಾ ಕಾರ್ಯಾಚರಣೆ ಜೋರಾಗಿರುವ ಕಾರಣಕ್ಕೆ ಈಗ ಜಾಗತಿಕ ಆರ್ಥಿಕತೆ ಅಲ್ಲಾಡಿ ಹೋಗಿದೆ. ಅದರಲ್ಲೂ ಜಗತ್ತಿನ ದೊಡ್ಡ ದೊಡ್ಡ ದೇಶಗಳ ಷೇರುಪೇಟೆ ಈಗ ಯುದ್ಧದ ಕಾರಣಕ್ಕೆ ನಲುಗಿ ಹೋಗುತ್ತಿದ್ದು, ಹೂಡಿಕೆದಾರರಿಗೆ ಚಿಂತೆ ಶುರುವಾಗಿದೆ. ಅದರಲ್ಲೂ ಈ ಸಮಯದಲ್ಲಿ ಅರಬ್ ದೇಶಗಳ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಆಗಿರುವ ಬಂಡವಾಳ ಎಲ್ಲಿ ಖಾಲಿ ಆಗುತ್ತೋ? ಎಂಬ ಚಿಂತೆ ಹೆಚ್ಚಾಗಿದೆ. ಹಾಗೇ ಅಮೆರಿಕದ ಷೇರ್ ಮಾರ್ಕೆಟ್ ಕೂಡ ಯುದ್ಧದ ಭೀತಿಯಲ್ಲಿ ನಲುಗಿ ಹೋಗಿದೆ.
ಪರಮಾಣು ಶಾಂತಿ ಒಪ್ಪಂದದ ವಿಚಾರವಾಗಿ ಶುರುವಾಗಿದ್ದ ಇರಾನ್ & ಅಮೆರಿಕ ನಡುವಿನ ಕಿರಿಕ್ ಈಗ ಭೀಕರ ಯುದ್ಧವಾಗಿ ಪರಿಣಮಿಸಿದ್ದು, ಸಾವಿರಾರು ಜನರನ್ನು ಕೆಲವೇ ದಿನಗಳಲ್ಲಿ ಬಲಿ ಪಡೆದಿದೆ. ಇರಾನ್ ವಿರುದ್ಧ ಅಮೆರಿಕ ಹಾಗೂ ಇಸ್ರೇಲ್ ದಾಳಿ ಮಾಡುತ್ತಿರುವ ಸಮಯದಲ್ಲಿ ಮಧ್ಯಪ್ರಾಚ್ಯದಲ್ಲಿ ಸೂಕ್ಷ್ಮ ವಾತಾವರಣ ನಿರ್ಮಾಣ ಆಗಿದೆ. ಇನ್ನೊಂದು ಕಡೆ ಹೂಡಿಕೆದಾರರ ಎದೆಯಲ್ಲಿ ಭಯ ಕೂಡ ಕಾಣಿಸುತ್ತಿದ್ದು, ದಿಢೀರ್ ಒಂದು ವಾರದಿಂದ ಷೇರು ಮಾರುಕಟ್ಟೆಯಲ್ಲಿ ದಿನದಿಂದ ದಿನಕ್ಕೆ ಕುಸಿತವು ಹೆಚ್ಚಾಗುತ್ತಿದೆ. ಹೀಗಾಗಿ ಹೂಡಿಕೆ ಮಾಡಿದ ಹಣ ನಷ್ಟವಾಗಿ ಮಧ್ಯಮ ವರ್ಗ & ಸಾಮಾನ್ಯರ ಭವಿಷ್ಯ ಮಂಕಾಗುತ್ತಿದೆ.

ಕಳೆದ 4 ದಿನಗಳ ಅವಧಿಯಲ್ಲಿ ಜಗತ್ತಿನಾದ್ಯಂತ ನೂರಾರು ಲಕ್ಷ ಕೋಟಿ ರೂಪಾಯಿ ಬಂಡವಾಳ ಕರಗಿ ಹೋಗಿದೆ. ಈ ಕಾರಣಕ್ಕೆ ಜಗತ್ತಿನ ಶ್ರೀಮಂತರ ಸಂಪತ್ತು ಕೂಡ ಕಡಿಮೆ ಆಗುತ್ತಿದ್ದು, ಉದ್ಯೋಗ ಕಡಿತ ಸೇರಿದಂತೆ ಹಲವು ಚಿಂತೆ ಒಂದೇ ಸಾರಿ ಭುಗಿಲೆದ್ದಿವೆ. ಅದರಲ್ಲೂ ಭಾರತೀಯ ಷೇರು ಮಾರುಕಟ್ಟೆಯು ಕೂಡ ಇದೇ ರೀತಿಯ ಹಲವು ಸಮಸ್ಯೆಗಳನ್ನು ಎದುರಿಸುವಂತೆ ಆಗಿದೆ ಈಗ. ದಿನದಿಂದ ದಿನಕ್ಕೆ ಈ ತಿಕ್ಕಾಟ ಹೆಚ್ಚಾಗುತ್ತಿರುವ ಹಿನ್ನೆಲೆ ಭವಿಷ್ಯದ ಬಗ್ಗೆ ಚಿಂತೆ ಶುರುವಾಗಿದ್ದು, ಇದೀಗ ಆರ್ಥಿಕ ಸಂಕಷ್ಟ ಎದುರಾದರೆ ಏನು ಮಾಡುವುದು? ಎಂಬ ಚಿಂತೆಯಲ್ಲಿ ಇದ್ದಾರೆ ಸಾಮಾನ್ಯ ಜನರು.
ಲಕ್ಷ ಲಕ್ಷ ಸೈನಿಕರಿಂದ ಯುದ್ಧ
ಇಸ್ರೇಲ್ ಬಳಿ ಸುಮಾರು 4,00,000ಕ್ಕೂ ಹೆಚ್ಚು ಸೈನಿಕರು ಇದ್ದರೆ, ಇನ್ನೊಂದು ಕಡೆ ಅಮೆರಿಕ ಬಳಿ ಕೂಡ ಹತ್ತಾರು ಲಕ್ಷ ಸೈನಿಕರು ಇದ್ದಾರೆ. ಇವರೆಲ್ಲಾ ಈಗ ಇರಾನ್ ವಿರುದ್ಧ ಯುದ್ಧಕ್ಕೆ ಸಿದ್ಧರಾಗಿದ್ದಾರೆ. ಅಮೆರಿಕ ಸೇನೆ 2026 ಲೆಕ್ಕಾಚಾರದ ಪ್ರಕಾರ ಸುಮಾರು 2.1 ಎಂದರೆ ಸುಮಾರು 21 ಲಕ್ಷ ಸೈನಿಕರನ್ನು ಹೊಂದಿದೆ. ಈ ಪೈಕಿ 13 ಲಕ್ಷ ಸೈನಿಕರು ಲಭ್ಯವಿದ್ದರೆ ಇನ್ನುಳಿದ 8,00,000 ಸೈನಿಕರು ಅಮೆರಿಕದ ಮೀಸಲು ಪಡೆಯಲ್ಲಿ ಇದ್ದಾರೆ. ಹೀಗಾಗಿ ಇರಾನ್ ವಿರುದ್ಧದ ಯುದ್ಧ ಭಯವನ್ನು ಹೆಚ್ಚು ಮಾಡುತ್ತಾ ಇದ್ದು, ಮುಂದಿನ ಪರಿಸ್ಥಿತಿ ನೆನೆಪು ಮಾಡಿಕೊಂಡರೆ ಹೂಡಿಕೆದಾರರಿಗೆ ನಿದ್ದೆ ಬರುತ್ತಿಲ್ಲ.
ಶಾಂತಿ ಬದಲು ಇರಾನ್ ಯುದ್ಧ ಮಂತ್ರ
ಇಷ್ಟಾದರೂ ಇರಾನ್ ಮಾತ್ರ ಶರಣಾಗುವ ಮಾತು ಆಡುತ್ತಿಲ್ಲ, ಶಾಂತಿಯ ಬದಲಾಗಿ ಇರಾನ್ ಕೂಡ ಯುದ್ಧದ ಹಾದಿಯನ್ನೇ ಆಯ್ಕೆ ಮಾಡಿಕೊಂಡಿರುವುದು ಭಾರಿ ಸಂಚಲನಕ್ಕೂ ಕಾರಣವಾಗಿದೆ. ಆದರೆ ಇದೇ ಪರಿಸ್ಥಿತಿ ಮುಂದುವರಿದರೆ ಷೇರು ಮಾರುಕಟ್ಟೆ ಸಮೇತ ದೊಡ್ಡ ಆರ್ಥಿಕ ವಿಪತ್ತು ಎದುರಾಗುವ ಅಪಾಯ ಇದೆ ಎಂದು ಎಚ್ಚರಿಸಿದ್ದಾರೆ ಷೇರುಪೇಟೆ ತಜ್ಞರು. ಹೀಗಾಗಿ ಮತ್ತೆ, ಮತ್ತೆ ಜಾಗತಿಕ ಆರ್ಥಿಕ ವಲಯದಲ್ಲಿ ಹೂಡಿಕೆದಾರರಿಗೆ ಆತಂಕ ಹೆಚ್ಚಾಗುತ್ತಿರುವ ಕಾರಣಕ್ಕೆ ತಮ್ಮ ತಮ್ಮ ಬಂಡವಾಳ ವಾಪಸ್ ಪಡೆಯುತ್ತಿದ್ದಾರೆ. ಇದು ಜಗತ್ತಿನ ಹಲವು ದೇಶಗಳಲ್ಲಿ ಮಾರುಕಟ್ಟೆ ಕುಸಿತಕ್ಕೆ ಕಾರಣವಾಗುತ್ತಿದ್ದು, ಈ ರೀತಿಯ ಬೆಳವಣಿಗೆ ಯುದ್ಧ ನಿಲ್ಲುವವರೆಗೂ ಮುಂದುವರಿಯುವ ಮುನ್ಸೂಚನೆ ಇದೆ.












Click it and Unblock the Notifications