ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಲಾಲಗೆ ನೊಬೆಲ್ ಶಾಂತಿ ಪುರಸ್ಕಾರ ಮಿಸ್

By Mahesh
|
Google Oneindia Kannada News

ನ್ಯೂಯಾರ್ಕ್, ಅ.11: ಪಾಕಿಸ್ತಾನದ ಮಾನವ ಹಕ್ಕುಗಳ ಹೋರಾಟಗಾರ್ತಿ ಮಲಾಲ ಯೂಸುಫ್ ಜಾಯಿ ನೊಬೆಲ್ ಪಾರಿತೋಷಕ ರೇಸಿನಿಂದ ಹೊರ ಬಿದ್ದಿದ್ದಾರೆ. ರಾಸಾಯನಿಕ ಅಣ್ವಸ್ತ್ರಗಳ ವಾಚ್ ಡಾಗ್ ಎನ್ನಲಾಗುವ OPCW ಸಂಸ್ಥೆ ಈ ಬಾರಿಯ ನೊಬೆಲ್ ಶಾಂತಿ ಪಾರಿತೋಷಕ ಪ್ರಶಸ್ತಿ ಸಿಗಲಿದೆ.

Organisation for Prohibition of Chemical Weapons (OPCW) ಸಂಸ್ಥೆ ಸಿರಿಯಾದಲ್ಲಿನ ರಾಸಾಯನಿಕ ಅಣ್ವಸ್ತ್ರ ಪತ್ತೆಹಚ್ಚಿ ನಿಷ್ಕ್ರಿಯಗೊಳಿಸುವಲ್ಲಿ ಮಹತ್ವದ ಪಾತ್ರವಹಿಸಿತ್ತು. ಹೀಗಾಗಿ ಈ ಬಾರಿಯ ಶಾಂತಿ ಪಾರಿತೋಷಕ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ನಾರ್ವೆಯ ನೊಬೆಲ್ ಪ್ರಶಸ್ತಿ ಸಮಿತಿ ಥೋರ್ ಜೊರ್ನ್ ಜಾಗ್ಲ್ಯಾಂಡ್ ಶುಕ್ರವಾರ ಘೋಷಿಸಿದ್ದಾರೆ.

ಸಿರಿಯಾ ಸರ್ಕಾರ ಇತ್ತೀಚೆಗೆ ತನ್ನ ನಾಗರಿಕರ ಮೇಲೆ ಕೆಮಿಕಲ್ ಅಸ್ತ್ರ ದಾಳಿ ನಡೆಸಿತ್ತು. ರಾಸಾಯನಿಕಗಳಿಂದ ಯಾವುದೇ ಹಾನಿಯಾಗದಂತೆ ಕೆಮಿಕಲ್ ವೆಪೆನ್ ಗಳನ್ನು ನಾಶಪಡಿಸಲು ಶ್ರಮಿಸುತ್ತಿರುವ ನೆದರ್'ಲ್ಯಾಂಡ್ ಮೂಲದ ರಾಸಾಯನಿಕ ಆಯುಧ ನಿಶೇಧ ಒಕ್ಕೂಟ OPCW ಗೆ 2013ನೇ ಸಾಲಿನ ವಿಶ್ವ ಶಾಂತಿ ನೋಬೆಲೆ ಪ್ರಶಸ್ತಿ ಲಭಿಸಿದೆ.

ಡಿ.10ರಂದು ಓಸ್ಲೋದಲ್ಲಿ ಪ್ರಶಸ್ತಿಯನ್ನು ವಿತರಿಸಲಾಗುತ್ತದೆ. ಸ್ವೀಡಿಷ್ ಉದ್ಯಮಿ ಆಲ್ಫ್ರೆಡ್ ನೊಬೆಲ್ ಅವರ ಪುಣ್ಯತಿಥಿಯ ಅಂಗವಾಗಿ ಕಾರ್ಯಕ್ರಮ ನಡೆಯಲಿದೆ. ನೊಬೆಲ್ ಪ್ರಶಸ್ತಿ ಚಿನ್ನದ ಪದಕ, ಡಿಪ್ಲೋಮಾ ಪ್ರಮಾಣ ಪತ್ರ, 8 ಮಿಲಿಯನ್ ಸ್ವೀಡಿಷ್ ಕ್ರೊನರ್(1.2 ಮಿಲಿಯನ್ ಯುಎಸ್ ಡಾಲರ್ ಅಥವಾ 910,000 ಯುರೋ) ನಗದು ಬಹುಮಾನವನ್ನು ಒಳಗೊಂಡಿರುತ್ತದೆ.

OPCW wins 2013 Nobel Peace Prize; Malala misses out

ಪಾಕಿಸ್ತಾನದ ದಿವಂಗತ ಪ್ರಧಾನಿ ಬೆನಜೀರ್ ಭುಟ್ಟೋ ಅವರಂತೆ ಪಾಕಿಸ್ತಾನದ ಪ್ರಧಾನಿಯಾಗಬೇಕು ಎಂದು ಆಸೆ ವ್ಯಕ್ತಪಡಿಸಿದ್ದ ಮಲಾಲಗೆ ಈ ಬಾರಿಯ ಶಾಂತಿ ಪಾರಿತೋಷಕ ಸಿಗಲಿದೆ ಎಂಬ ಸುದ್ದಿ ಇತ್ತು.

ಸಿಎನ್ಎನ್ ಸ್ಟುಡಿಯೋದಲ್ಲಿ ತಮ್ಮ ತಂದೆಯೊಂದಿಗೆ ಕುಳಿತು ಮಲಾಲ ಮಾತನಾಡುತ್ತಾ, ಕಳೆದ ವರ್ಷದ ಆ ದುರಂತಮಯ ದಿನವನ್ನು ನೆನಪಿಸಿಕೊಂಡರು. ಅಂದು ತಾಲಿಬಾನ್ ಉಗ್ರರು ಆಕೆಯಿದ್ದ ಶಾಲಾ ಬಸ್ ಮೇಲೇರಿ, ಅತ್ಯಂತ ಸಮೀಪದಿಂದ ಆಕೆಯ ತಲೆಗೆ ಗುಂಡು ಹಾರಿಸಿದ್ದರು.

ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ಬಲವಾಗಿ ಧ್ವನಿ ಎತ್ತಿದ್ದಕ್ಕಾಗಿ ಕಳೆದ ವರ್ಷ ತಾಲಿಬಾನ್ ಉಗ್ರಗಾಮಿಗಳ ಹತ್ಯಾ ಯತ್ನದಿಂದ ಪಾರಾದ ಬಳಿಕ ವಿಶ್ವಾದ್ಯಂತ ಸುದ್ದಿ ಮಾಡಿದ್ದ 16ರ ಹರೆಯದ ಮಲಾಲ, ಸಿಎನ್ಎನ್ ಜತೆಗಿನ ವಿಶೇಷ ಸಂದರ್ಶನವೊಂದರಲ್ಲಿ ಈ ಮಾತು ಹೇಳಿದ್ದಾಳೆ.

ಮಕ್ಕಳ ಶಿಕ್ಷಣಕ್ಕಾಗಿ ದುಡಿಯುವ ಆಸೆಯನ್ನೂ ಬಿಚ್ಚಿಟ್ಟ ಮಲಾಲ, ವಿವಿಧ ರಾಷ್ಟ್ರಗಳು, ವಿವಿಧ ಕಂಪನಿಗಳ ಉನ್ನತ ಅಧಿಕಾರಿಗಳಿಂದ ದೊರೆತ ಶಹಭಾಸ್‌ಗಿರಿ, ಪ್ರೋತ್ಸಾಹ, ನೊಬೆಲ್ ಶಾಂತಿ ಪ್ರಶಸ್ತಿಗೆ ಹೆಸರು ಪರಿಗಣಿಸಲ್ಪಟ್ಟಿರುವುದು... ಮುಂತಾದ ವಿಷಯಗಳ ಕುರಿತು ಮಾತನಾಡಿದ್ದರು.

ಪಾಕಿಸ್ತಾನದ ಪ್ರಥಮ ಮಹಿಳಾ ಪ್ರಧಾನಿ ಭುಟ್ಟೋ ಅವರನ್ನು ತನ್ನ 'ಹೀರೋ'ಗಳ ಸಾಲಿನಲ್ಲಿ ಅಗ್ರಗಣ್ಯರು ಎಂದ ಆಕೆ, ದೇಶವನ್ನು ಮುನ್ನಡೆಸುವ ಆಸೆಯಿದೆ. ದೇಶ ಸೇವೆಗೆ ರಾಜಕೀಯವೇ ವೇದಿಕೆಯಾಗುತ್ತದೆ ಎಂದಳು. ಹಿಂದೆ, ಡಾಕ್ಟರ್ ಆಗಬೇಕೆಂಬಾಸೆ ಇತ್ತು, ಆದರೀಗ ರಾಜಕೀಯ ಸೇರುವ ಇರಾದೆಯಿದೆ ಎಂದು ಮಲಾಲ ನುಡಿದರು.

"ರಾಜಕೀಯದ ಮೂಲಕ ಇಡೀ ದೇಶಕ್ಕೆ ಸೇವೆ ಸಲ್ಲಿಸಬಹುದು. ಇಡೀ ದೇಶಕ್ಕೇ ವೈದ್ಯೆಯಾಗಬಹುದು. ಮಕ್ಕಳು ಶಿಕ್ಷಣ ಪಡೆಯುವಂತಾಗಲು, ಅವರನ್ನು ಶಾಲೆಗೆ ಹೋಗುವಂತೆ ಮಾಡಲು, ಶಿಕ್ಷಣದ ಗುಣಮಟ್ಟ ಸುಧಾರಿಸಲು ನೆರವಾಗಬಹುದು" ಎಂದು ಮಲಾಲ ಹೇಳಿದರು.

English summary
The 2013 Nobel Peace Prize was awarded to the Hague-based anti-chemical weapons group, Organisation for Prohibition of Chemical Weapons (OPCW).The Prize will be presented in Oslo on December 10, on the death anniversary of Swedish industrialist Alfred Nobel.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X